Home / ರಾಜ್ಯ / ಮಾರ್ಚ್​ 8 ರಂದು ಬಿಡುಗಡೆಯಾಗಲಿದೆ 108MP ಕ್ಯಾಮೆರಾದ Realme 8 Series ಸ್ಮಾರ್ಟ್​ಫೋನ್​?

ಮಾರ್ಚ್​ 8 ರಂದು ಬಿಡುಗಡೆಯಾಗಲಿದೆ 108MP ಕ್ಯಾಮೆರಾದ Realme 8 Series ಸ್ಮಾರ್ಟ್​ಫೋನ್​?

Spread the love

ರಿಯಲ್​ಮಿ ಸಂಸ್ಥೆ Realme 8 ಸಿರೀಸ್​​ ಹೆಸರಿನ ಸ್ಮಾರ್ಟ್​ಫೋನನ್ನು ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬರುವ ಲಕ್ಷಣ ಕಾಣುತ್ತಿದೆ. ಅದಕ್ಕೆ ಅನುಗುಣವಾಗಿ ಕಂಪೆನಿಯ ಸಿಇಒ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಮುಂಬರುವ ಸ್ಮಾರ್ಟ್​ಫೋನ್​ 108 ಮೆಗಾಫಿಕ್ಸೆಲ್​ ಕ್ಯಾಮೆರಾ ಮೂಲಕ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ನೂತನ ಫೋನಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ರಿಯಲ್​ಮಿ 7 ಸಿರೀಸ್​ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಧಾವಿಸಿದೆ. ಈ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸಿತ್ತು. ಇದೀಗ ಮುಂಬರುವ ದಿನಗಳಲ್ಲಿ ರಿಯಲ್​ಮಿ ಕಂಪೆನಿ ನೂತನ 8 ಸಿರೀಸ್​ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಅಂದಾಜಿಲಾಗಿದೆ. ರಿಯಲ್​ಮಿ ಇಂಡಿಯಾ ಸಿಇಒ ಮಾಧವ್​ ಸೇಠ್​ ಟ್ವಿಟ್ಟರ್​ನಲ್ಲಿ ‘108 ಮೆಗಾಫಿಕ್ಸೆಲ್​ ಕ್ಯಾಮೆರಾದ ಬಗ್ಗೆ ಸುಳಿವು ನೀಡಿದ್ದು, ಅದು ಮುಂಬರುವ ಹೊಸ ಸ್ಮಾರ್ಟ್​ಫೋನ್​ನಲ್ಲಿ ಅಳವಡಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. 108 ಅಂದರೆ ನಿಮಗೆ ತಿಳಿದಿದೆಯಾ? ಎಂದು ಟ್ವೀಟ್​ ಮಾಡಿದ್ದಾರೆ.

ನಂತರ ಮಾಡಿರುವ ಟ್ವೀಟ್​​ನಲ್ಲಿ ‘ಕ್ಯಾಮೆರಾದ ಮೂಲಕ ಅಧಿಕ ಫೋಟೋಗ್ರಾಫಿ ಮಾಡಲು ಸಿದ್ಧರಾಗಿ. ನಮ್ಮ ಕ್ಯಾಮೆರಾ ಈವೆಂಟ್​ನಲ್ಲಿ ಈ ಬಗ್ಗೆ ಹೆಚ್ಚಿಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ, 108 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಖರೀದಿಸಿ ಎಂದು ಟ್ವೀಟ್​ನಲ್ಲಿ’ ಬರೆದಿದ್ದಾರೆ. ಜೊತೆಗೆ ಮಾರ್ಚ್​ 2ರಂದು ಸ್ಮಾರ್ಟ್​ಫೋನ್​ ಬಿಡುಗಡೆ ದಿನಾಂಕವನ್ನು ಉಲ್ಲೇಖಿಸಿದ್ದಾರೆ.

ಜೊತೆಗೆ ಫೆಬ್ರವರಿ 24ರ ಬುಧವಾರ ಕೆಲವು ಎಂದಿಗೂ ನಿಲ್ಲುವುದಿಲ್ಲ #realme. ನಾನು ಈಗಾಗಲೇ #InfiniteLeapWith8!ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ರಿಯಲ್​ಮಿ 8 ಸಿರೀಸ್​ ಬಗ್ಗೆ ಯಾವುದೇ ಮಾತುಗಳನ್ನು ಹೊರಬಿದ್ದಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಗೀಕ್​ಬೆಂಚ್​​ ಮಾದರಿ RMX3092 ಸಂಖ್ಯೆಯನ್ನು ಗಮನಿಸಿದೆ ಇದು ರಿಯಲ್​ಮಿ 8 ಸರಣಿ ಎಂದು ಊಹಿಸಿತ್ತು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ