Breaking News
Home / Uncategorized / ಒಂದೇ ಹೊಡೆತದಲ್ಲಿ ಕ್ಷೇತ್ರದ ಎಲ್ಕ ಸಮಸ್ಯೆಗಳಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಶಾಸಕ ಅಭಯ ಪಾಟೀಲ\

ಒಂದೇ ಹೊಡೆತದಲ್ಲಿ ಕ್ಷೇತ್ರದ ಎಲ್ಕ ಸಮಸ್ಯೆಗಳಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಶಾಸಕ ಅಭಯ ಪಾಟೀಲ\

Spread the love

ಬೆಳಗಾವಿ- ಅಭಿವೃದ್ಧಿಯ ವಿಚಾರದಲ್ಲಿ ಶಾಸಕ ಅಭಯ ಪಾಟೀಲರು ಯಾವಾಗಲೂ ದಾಖಲೆ ಮಾಡುತ್ತಲೇ ಇದ್ದಾರೆ,ಮೊದಲನೇಯ ಹಂತದಲ್ಲಿ 206 ಕಾಮಗಾರಿಗಳನ್ನು,ಎರಡನೇಯ ಹಂತದಲ್ಲಿ 38 ಕಾಮಗಾರಿಗಳಿಗೆ ಏಕಕಾಲದಲ್ಲಿ ಮಂಜೂರಾತಿ ಪಡೆದಿರುವ ಅವರು ಇಂದಿನಿಂದ ಮೊದಲನೇಯ ಹಂತದ 206 ಕಾಮಗಾರಿಗಳಿ ಚಾಲನೆ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಾವ ಭಾಗದಲ್ಲಿ 206 ಕಾಮಗಾರಿಗಳು ನಡೆಯುತ್ತವೆ,ಎರಡನೇಯ ಹಂತದ 38 ಕಾಮಗಾರಿಗಳು ಎಲ್ಲಿ ನಡೆಯುತ್ತವೆ ಎನ್ನುವದನ್ನು ಪಟ್ಟಿ ಮಾಡಿ ಈ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಪೋಸ್ಟ್ ಮಾಡಿದ್ದು,ಅಭಿವೃದ್ಧಿ ವಿಚಾರದಲ್ಲಿ ಬಹುತೇಕ ವಿಶ್ವ ದಾಖಲೆ ಮಾಡಲಿರುವ ಈ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಪ್ರತಿದಿನ ಹತ್ತರಿಂದ ಇಪ್ಪತ್ತು ಕಾಮಗಾರಿಗಳಿಗೆ ಚಾಲನೆ ನೀಡಿ ಹತ್ತು ದಿನಗಳಲ್ಲಿ ಮಂಜೂರಾಗಿರುವ 206 ಕಾಮಗಾರಿಗಳಿಗೂ ಶಾಸಕ ಅಭಯ ಪಾಟೀಲರು ಚಾಲನೆ ನೀಡುವ ಮೂಲಕ ರಾಜ್ಯದಲ್ಲೇ ಅಭಿವೃದ್ಧಿಯ ಹೊಸ ಇತಿಹಾಸ ನಿರ್ಮಿಸಲಿದ್ದಾರೆ.

ಈ 206 ಕಾಮಗಾರಿಗಳು ಪೂರ್ಣಗೊಂಡ ಬಳಿಕ ಎರಡನೇಯ ಹಂತದಲ್ಲಿ 38 ಕಾಮಗಾರಿಗಳನ್ನು ಶಾಸಕ ಅಭಯ ಶುಭಾರಂಭ ಮಾಡಲಿದ್ದಾರೆ.

ಬೇರೆ ಬೇರೆ ಇಲಾಖೆಗಳಿಂದ ಒಟ್ಟು206 ಕಾಮಗಾರಿಗಳಿಗೆ ಮಂಜೂರಾತಿ ಪಡೆದು ಹೊಸ ದಾಖಲೆ ನಿರ್ಮಿಸಿರುವ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದು ಒಬ್ಬ ಶಾಸಕ ಮನಸ್ಸು ಮಾಡಿದೆ ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎನ್ನುವದನ್ನು ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ ಶಾಸಕ ಅಭಯ ಪಾಟೀಲ,

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎರಡು ತಿಂಗಳು ಬೆಳಗಾವಿ ದಕ್ಷಿಣ ಕ್ಷೇತ್ರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ,ಯಾವ ಪ್ರದೇಶದಲ್ಲಿ ಸಮಸ್ಯೆ ಏನಿದೆ ಅನ್ನೋದನ್ನು ಅಲ್ಲಿಯ ಜನರಿಂದ ತಿಳಿದುಕೊಂಡು ಸಮಸ್ಯೆಗಳನ್ನು ಪಟ್ಟಿ ಮಾಡಿ ಒಂದೇ ಹೊಡೆತದಲ್ಲಿ ಕ್ಷೇತ್ರದ ಎಲ್ಕ ಸಮಸ್ಯೆಗಳಿಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದು ಇವತ್ತು ಮೊದಲನೇಯ ದಿನ 15 ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅಭಿವೃದ್ಧಿಯ ಜಾತ್ರೆಗೆ ಚಾಲನೆ ನೀಡಿದ್ದು ವಿಶೇಷ,ವಿಭಿನ್ನ,ಇತಿಹಾಸ,ಇದೊಂದು ವಿಶ್ವದಾಖಲೆ ಎನ್ನುವದರಲ್ಲಿ ಎರಡು ಮಾತಿಲ್ಲ


Spread the love

About Laxminews 24x7

Check Also

ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ.

Spread the love ಕೊಪ್ಪಳ: ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ