Home / Uncategorized / ಸಂತೋಷ್ ಜಾರಕಿಹೊಳಿ ಅವರ ಮಗನ ಮೊದಲನೇ ಹುಟ್ಟುಹಬ್ಬ 180ಕ್ಕು ಹೆಚ್ಚು ಫಿಲ್ಟರ್ ವಿತರಣೆ ಮಾಡಿದ ಜಾರಕಿಹೊಳಿ ದಂಪತಿ..

ಸಂತೋಷ್ ಜಾರಕಿಹೊಳಿ ಅವರ ಮಗನ ಮೊದಲನೇ ಹುಟ್ಟುಹಬ್ಬ 180ಕ್ಕು ಹೆಚ್ಚು ಫಿಲ್ಟರ್ ವಿತರಣೆ ಮಾಡಿದ ಜಾರಕಿಹೊಳಿ ದಂಪತಿ..

Spread the love

ಗೋಕಾಕ: ಇವತ್ತು ಸಹುಕಾರರ ಮನೆಯಲ್ಲಿ ಮತ್ತೊಂದು ಖುಷಿಯ ದಿನ ಇದೆ ದಿನ ಒಂದು ವರ್ಷದ ಹಿಂದೆ ಶ್ರೀ ಸಂತೋಷ್ ಜಾರಕಿಹೊಳಿ ದಂಪತಿಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿದ ವಿಶೇಷ ದಿನ ಹುಟ್ಟಿನಿಂದಲೂ ಸರಳತೆಯನ್ನು ಮೆರೆದು ಬಂದ ಸಾಹುಕಾರರ ಕುಟುಂಬ ಮಗುವಿನ ಹೆರಿಗೆಯನ್ನು ಸರ್ಕಾರಿ ದವಾ ಖಾನೆಯಲ್ಲಿ ಮಾಡಿ ಒಂದು ಮಾದರಿ ಯಾಗಿತ್ತು ಇಂದು ಆ ಆ ಪ್ರೀತಿಯ ಕಂದಮ್ಮನಿಗೆ ಮೊದಲನೇ ವರ್ಷ ತುಂಬಿದ ದಿನ

ಇಂದು ಕೂಡ ಒಂದು ಸಾಮಾಜಿಕ ಕಳಕಳಿಯನ್ನು ಹೊತ್ತು ಆ ಕಂದಮ್ಮನ ಹುಟ್ಟು ಹಬ್ಬದ ನಿಮಿತ್ತ ಒಂದು ಒಳ್ಳೆಯ ಕೆಲಸ ವನ್ನಾ ಮಾಡಿದ್ದಾರೆ ಸಾಹುಕಾರರ ಕುಟುಂಬ ದವರು.

ಏನದು ಒಳ್ಳೆಯ ಕೆಲಸ ಅಂದ್ರೆ ಎಲ್ಲರಿಗೂ ಪ್ರಮುಖವಾಗಿ ಬೇಕಾಗಿರೋದು ಕುಡಿಯುವ ನೀರು
ಇಂದು ತಮ್ಮ ಮಗನ ಹುಟ್ಟು ಹಬ್ಬದ ನಿಮಿತ್ತವಾಗಿ ,ಗೋಕಾಕ ,ಮೂಡಲಗಿ, ಹಾಗೂ ಸವದತ್ತಿ, ಪ್ರದೇಶಗಳಲ್ಲಿ ಬರುವ ಕನ್ನಡ ಶಾಲೆ ಗಳಿಗೆ ಸುಮಾರು 180 ಕುಡಿಯುವ ನೀರಿನ ಫಿಲ್ಟರ್ ಗಳನ್ನ ದೇಣಿಗೆ ಯಾಗಿ ಕೊಟ್ಟಿದ್ದಾರೆ. ಸಂತೋಷ್ ಜಾರಕಿಹೊಳಿ ಹಾಗೂ ದಂಪತಿಗಳು.

ಜನ ಕೋವಿಡ ಕಾಯಿಲೆಯಿಂದ ಸುರಕ್ಷಿತ ವಾಗಿರಲು ಸರ್ಕಾರ ಏನೇನೋ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದ್ರೆ ನಮ್ಮ ಇಂದಿನ ಮಕ್ಕಳು ಮುಂದಿನ ನಮ್ಮ ಭವಿಷ್ಯ ಹಾಗೂ ನಮ್ಮ ಮಕ್ಕಳು ಹೇಗೆ ಸುರಕ್ಷಿತ ವಾದ ಕುಡಿಯುವ ನೀರನ್ನು ಕುಡಿಯುತ್ತಾರೆ ಹಾಗೆ ನಮ್ಮ ಸುತ್ತ ಮುತ್ತ ಇರುವ ಮಕ್ಕಳು ಇರಲಿ ಎಂಬುದೇ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರ್ ಉದ್ದೇಶ . ಕುಡಿಯುವ ನೀರು ಸ್ವಚ್ಚ ವಾಗಿರಬೇಕು ಹಾಗೂ ಎಲ್ಲ ಸರ್ಕಾರಿ ಶಾಲೆಯ ಮಕ್ಕಳು ಶುದ್ಧ್ ಕುದಿಯುವ ನೀರನ್ನು ಕುಡಿಯಲು ಇದೊಂದು ನಮ್ಮ ಚಿಕ್ಕ ಅಳಿಲು ಸೇವೆ ಅಂತಾರೆ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು.

ಇನ್ನು ಈ ಒಂದು ಕಾರ್ಯಕ್ರಮದ ಪ್ರಯುಕ್ತ ಇದರ ಬಗ್ಗೆ ಮೂಡಲಗಿ B.e.o ಅವರು ಕೆಲವೊಂದು ಮಾತು ಗಳನ್ನ ಹೇಳಿದ್ದಾರೆ.

ಅದೇ ರೀತಿ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ವತಿಯಿಂದ ಈ ಒಂದು ಕಿರು ಕಾಣಿಕೆಯನ್ನು ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೋಸ್ಕರ ನೀಡಲಾಗಿದ್ದು ಸಂತೋಷ್ ಜಾರಕಿಹೊಳಿ ದಂಪತಿ ಹಾಗೂ ಸೌಭಾಗ್ಯ ಲಕ್ಷ್ಮಿ ಸಿಬ್ಬಂದಿ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ..

ಒಟ್ಟಾರೆ ಒಂದು ಕಡೆ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಶಾಲೆ ಗಳನ್ನ ದತ್ತು ಪಡೆದು ಅದರ ಅಭಿವೃದ್ಧಿ ಕಡೆ ಗಮನ ಹರಿಸಿದರೆ ಇನ್ನೊದು ಕಡೆ ಮಗ ಹಾಗೂ ಸೊಸೆ ಕೂಡ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ತೋರುತ್ತಿದ್ದಾರೆ .
ಶ್ರೀಮಂತರ ಮಕ್ಕಳು ಆಚರಿಸುವ ತಮ್ಮ ಮಕ್ಕಳ ಆಡಂಬರದ ಹುಟ್ಟು ಹಬ್ಬ ಗಳ ಮುಂದೆ ಇದೊಂದು ಅತ್ಯಂತ ಸರಳ ರೀತಿಯ ಆಚರಣೆ ಹಾಗೂ ಸಾಮಾಜಿಕ ಕಳಕಳಿ ಇರುವ ಕಾರ್ಯ ವನ್ನಾ ಮಾಡಿದಕ್ಕೆ ಊರಿನ ಜನ ಸಾಹುಕಾರ ರ ಕುಟುಂಬದ ಬಗ್ಗೆ ಮತ್ತಷ್ಟು ಹೆಮ್ಮೆ ಪಡುವಂತಾಗಿದೆ ಎಂದು ಮಾತನಾಡುತ್ತಿದ್ದಾರೆ.

ಇನ್ನು ಮೊದಲನೆಯ ವರ್ಷದ ಹುಟಟುಹಬ್ಬದ ಸಂಬ್ರದಲ್ಲಿರುವ ಸೂರ್ಯ ಶ್ರೇಷ್ಠ ಜಾರಕಿಹೊಳಿ ಕಂದಮ್ಮನಿಗೆ ದೇವರು ಆಯುಷ್ಯ ಆರೋಗ್ಯ ಐಶ್ವರ್ಯ,ಪ್ರಾಪ್ತಿ ನೀಡಲಿ ಗೋಕಾಕ ನಗರದ ಆರಾಧ್ಯ ದೇವತೆ ಲಕ್ಷ್ಮೀ ತಾಯಿ ಮಗುವಿನ ಮೇಲೆ ಇರಲಿ ಹಾಗೂ ನಮ್ಮ ವಾಹಿನಿ ಕಡೆಯಿಂದ ಕೂಡ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳಲು ಬಯಸುತ್ತೇವೆ..


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ