Breaking News
Home / ಜಿಲ್ಲೆ / ಬೆಂಗಳೂರು / Bus Pass – ಹಿಂದಿನ ವರ್ಷದ ಬಸ್ ಪಾಸ್​ನಲ್ಲೇ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ

Bus Pass – ಹಿಂದಿನ ವರ್ಷದ ಬಸ್ ಪಾಸ್​ನಲ್ಲೇ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ

Spread the love

ಬೆಂಗಳೂರು(ಜ. 01): ಇಂದಿನಿಂದ ಎಸ್ಸೆಸ್ಸೆಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ತರಗತಿಗಳು ಆರಂಭವಾಗುತ್ತಿವೆ. ಬಹಳಷ್ಟು ವಿದ್ಯಾರ್ಥಿಗಳು ಬಸ್ಸುಗಳನ್ನೇ ಅವಲಂಬಿಸಿದ್ದು ಹೊಸ ವರ್ಷದಲ್ಲಿ ಮಕ್ಕಳಿಗೆ ಪಾಸ್ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸದ್ಯ ಓಡಾಡಲು ಅವಕಾಶ ಮಾಡಿಕೊಟ್ಟಿದೆ. 2019-20ನೇ ಸಾಲಿನಲ್ಲಿ ವಿತರಿಸಲಾಗಿದ್ದ ಸ್ವಾರ್ಟ್​ಕಾರ್ಡ್ ಬಸ್ ಪಾಸ್​ನಲ್ಲೇ ಈ ಎರಡು ತರಗತಿಯ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್​ನಲ್ಲಿ ಓಡಾಡಬಹುದಾಗಿದೆ. ಮುಂದಿನ ಆದೇಶದವರೆಗೂ ಈ ಸೌಲಭ್ಯ ಮುಂದುವರಿಯಲಿದೆ.

ಬಸ್​ನಲ್ಲಿ ನಿರ್ವಾಹಕರು ಕೇಳಿದಾಗ ಮಕ್ಕಳು ತಮ್ಮ ಹಿಂದಿನ ವರ್ಷದ ಬಸ್ ಪಾಸ್ ಜೊತೆಗೆ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಹಾಗೂ ಶುಲ್ಕ ಪಾವತಿಸಿದ ರಸೀದಿಯನ್ನ ತೋರಿಸಬೇಕಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹೊಸ ವರ್ಷದ ಕೊಡುಗೆ ನೀಡಿದೆ.ಇದೇ ವೇಳೆ, ಒಂಬತ್ತು ತಿಂಗಳ ಬಳಿಕ ರಾಜ್ಯಾದ್ಯಂತ ಶಾಲೆ ಮತ್ತು ಕಾಲೇಜು ಬಾಗಿಲು ತೆರೆದಿವೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಇವತ್ತು ಮೊದಲ ದಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದರ ಮಧ್ಯೆ ಬಾಗಿಲು ತೆರೆದಿರುವ ಎಲ್ಲಾ ಶಾಲೆ, ಕಾಲೇಜುಗಳಲ್ಲೂ ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸ್ ಇತ್ಯಾದಿ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ