ಬೆಳಗಾವಿ : ಸ್ವಾತಂತ್ರ್ಯ ಹೋರಾಟಗಾರ, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ನಾಯಕ ಸ್ವಾತಂತ್ರ್ಯ ಹೋರಾಟಗಾರ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಗಾಂಧಿ ವಾದಿಯಾಗಿದ್ದ ಕೃಷ್ಣ ಮೆಣಸೆ, ಗೋವಾ ವಿಮೋಚನೆ ಹೋರಾಟದಲ್ಲೂ ಭಾಗವಹಿಸಿದ್ದರು. ಬರಹಗಾರರಾಗಿ, ಕಾರ್ಮಿಕ ಸಂಘದ ನಾಯಕರಾಗಿ ಕೃಷ್ಣಾ ಮೆಣಸೆ ಗುರುತಿಸಲ್ಪಟ್ಟಿದ್ದರು.
ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರರಾದ ಆನಂದ ಮೆಣಸೆ, ಭೂವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಮತ್ತು ವಕೀಲ ಸಂಜಯ ಮೆಣಸೆ, ಪುತ್ರಿಯರಾದ ಲತಾ ಪಾವ್ಶೆ ಮತ್ತು ನೀತಾ ಪಾಟೀಲ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.