Breaking News

Daily Archives: ಜನವರಿ 13, 2025

ಕೆಟ್ಟು ನಿಂತ ವಾಹನ, ಸಂಚಾರ ಅಸ್ತವ್ಯಸ್ತ

ಬೆಂಗಳೂರು, ಜನವರಿ 13: ಎನ್​ಆರ್​ ಜಂಕ್ಷನ್‌, ಹೂಡಿ ಜಂಕ್ಷನ್​​, ಶಿವಾಜಿನಗರ ಮತ್ತು ನಾಯಂಡಹಳ್ಳಿ ಸೇರಿದಂತೆ ಇತರೆ ನಗರಗಳಲ್ಲಿ ಇಂದು ಕೆಲ ಕಾರಣಾಂತರಗಳಿಂದ ಸಾರ್ವಜನಿಕ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಹಾಗಾಗಿ ಆಯಾ ಠಾಣಾ ವ್ಯಾಪ್ತಿಯ ಸಂಚಾರಿ ಪೋಲಿಸರು ಸಂಚಾರ ಸಲಹೆ (Traffic Advisory) ನೀಡುವ ಮೂಲಕ ದಯವಿಟ್ಟು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ .ಎನ್​ಆರ್ ಜಂಕ್ಷನ್‌ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಟೌನ್ ಹಾಲ್ ಕಡೆಗೆ ನಿಧಾನಗತಿಯ ಸಂಚಾರವಿದೆ. ದಯಮಾಡಿ ಸಹಕರಿಸುವಂತೆ ಬೆಂಗಳೂರು ಸಂಚಾರ …

Read More »

ಪಿಸ್ತಾ ಸಿಪ್ಪೆ ನುಂಗಿ 2 ವರ್ಷದ ಬಾಲಕ ದುರಂತ ಸಾವು

ಕಾಸರಗೋಡು, (ಜನವರಿ 13): ಪಿಸ್ತಾ ಸಿಪ್ಪೆ ನುಂಗಿ 2 ವರ್ಷದ ಬಾಲಕ ದುರಂತ ಸಾವು ಕಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದಲ್ಲಿ ನಡೆದಿದೆ. ಅನಸ್ ಮೃತ ಬಾಲಕ. ಶನಿವಾರ ಪಿಸ್ತಾ ಸಿಪ್ಪೆ ನುಂಗಿದ್ದ. ತಕ್ಷಣ ಪೋಷಕರು, ಸಿಪ್ಪೆಯ ಒಂದು ಭಾಗ ಹೊರ ತೆಗೆದಿದ್ದರು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ತಪಾಸಣೆ ಮಾಡಿ ಮಗುವಿನ ಗಂಟಲಿನಲ್ಲಿ ಏನು ಸಿಕ್ಕಿ ಹಾಕಿಕೊಂಡಿಲ್ಲ ಎಂದಿದ್ದಾರೆ. ಆದ್ರೆ, ಭಾನುವಾರ ಶ್ವಾಸಕೋಶದಲ್ಲಿ ಸಿಪ್ಪೆ ಸಿಲುಕಿಕೊಂಡು …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿಧ್ರೋಹಿಗಳಿಗೆ ಶಕ್ತಿ ಬಂದಂತಾಗಿದೆ: ಜೋಶಿ‌ ಕಿಡಿ

ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿಧ್ರೋಹಿಗಳಿಗೆ ಶಕ್ತಿ ಬಂದಂತಾಗಿದೆ. ಅಧಿಕಾರಕ್ಕೆ ಬಂದಾಗೆಲ್ಲ ಪಿಎಫ್​ಐ, ಎಸ್​ಡಿಪಿಐ ಮೇಲಿನ ಕೇಸ್​ಗಳನ್ನ ಹಿಂಪಡೆದ ಹಿನ್ನೆಲೆ ಕೆಲವರಿಗೆ ಶಕ್ತಿ ಬಂದಿದೆ. ಹೀಗಾಗಿ ಹಸು ಕೆಚ್ಚಲು ಕೊಯ್ಯುವ ಮಟ್ಟಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ ರಾಜ್ಯ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು. ನಗರದಲ್ಲಿಂದು ‌ಮಾತನಾಡಿದ‌ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ರಿಮಿನಲ್​ಗಳಿಗೆ ಧೈರ್ಯ ಬಂದಿದೆ. ಏನಾದರೂ ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಹುಟ್ಟಿಕೊಂಡಿದೆ. …

Read More »

ದಕ್ಷಣಿ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ

ಮೈಸೂರು: ದಕ್ಷಿಣಿ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಪಟ್ಟಣದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇಲ್ಲಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಮಾಡಲಾಯಿತು. ಅಂಧಕಾಸುರ ಭಾವಚಿತ್ರದ ರಂಗೋಲಿಯನ್ನು ಅಳಿಸಿ ಹಾಕುವ ಆಚರಣೆ ಇದಾಗಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಧರ್ನುಮಾಸದ, ಆರಿದ್ರ ನಕ್ಷತ್ರದ ಹುಣ್ಣಿಮೆಯ ಹಿಂದಿನ ದಿನ ದೇವಾಲಯದ ವತಿಯಿಂದ ರಾಕ್ಷಸ ಮಂಟಪದ ಬಳಿ …

Read More »

ಜೈ ಬಾಪು-ಜೈ ಭೀಮ್-ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ: ಸಿ.ಎಂ.ಸಿದ್ದರಾಮಯ್ಯ ಕರೆ

ಜೈ ಬಾಪು-ಜೈ ಭೀಮ್-ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ: ಸಿ.ಎಂ.ಸಿದ್ದರಾಮಯ್ಯ ಕರೆ ಜ 21ರ ಬೆಳಗಾವಿಯ ಚಾರಿತ್ರಿಕ ಸಮಾವೇಷಕ್ಕೆ ಮುನ್ನಡೆಯಿರಿ: ಪಕ್ಷದ ಕಾರ್ಯಕರ್ತರಿಗೆ ಸಿ.ಎಂ ಕರೆ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ ಸಮಾವೇಷಕ್ಕೆ ಸ್ವಾಗತ ಎಂದ ಸಿಎಂ ನಾವು ಗಾಂಧಿ ವಂಶಸ್ಥರು ಮತ್ತು ಅವರು ಗೋಡ್ಸೆ ವಂಶಸ್ಥರು: ಸಿ.ಎಂ ಬೆಂಗಳೂರು ಜ13: ಜೈ ಬಾಪು-ಜೈ ಭೀಮ್-ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ …

Read More »

ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳ ಕೆಚ್ಚಲು ಕತ್ತರಿಸುವುದಕ್ಕೆ ರಾಜ್ಯದ ಕಾಂಗ್ರೆಸ್​ ಸರ್ಕಾರವೇ ಪ್ರೇರಣೆ” ಎಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: “ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳ ಕೆಚ್ಚಲು ಕತ್ತರಿಸುವುದಕ್ಕೆ ರಾಜ್ಯದ ಕಾಂಗ್ರೆಸ್​ ಸರ್ಕಾರವೇ ಪ್ರೇರಣೆ” ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವ ನಿಟ್ಟಿನಲ್ಲಿ 14 ಗೋಶಾಲೆಗಳನ್ನು ಆರಂಭಿಸಿತ್ತು. ಆದರೆ, ಈ ಸರ್ಕಾರ ಸಚಿವ ಸಂಪುಟದಲ್ಲಿ ಎಲ್ಲ ಗೋಶಾಲೆಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಗೋವಿನ ಬಗ್ಗೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಧೋರಣೆ ಕಿಡಿಗೇಡಿಗಳಿಗೆ ಸ್ಫೂರ್ತಿ. …

Read More »

ಎಸಿ ಕೋರ್ಟ್​ಗಳಲ್ಲಿ ಬಾಕಿ ಇರುವ ಪ್ರಕರಣ 6 ತಿಂಗಳಲ್ಲಿ ಇತ್ಯರ್ಥಗೊಳಿಸಿ

ಬೆಂಗಳೂರು: ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಮುಂದಿನ ಆರು ತಿಂಗಳೊಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಎಲ್ಲಾ ಅಧಿಕಾರಿಗಳಿಗೆ ಸಮಯದ ಗಡುವನ್ನು ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ಸಚಿವರು ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. “ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ …

Read More »

ಹೊಸ ರೂಪ ಪಡೆದು ಲೋಕಾರ್ಪಣೆಗೊಂಡ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ

ಹುಬ್ಬಳ್ಳಿ: ಹೊಸ ರೂಪ ಪಡೆದ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ಇಂದು ಲೋಕಾರ್ಪಣೆ ಆಯಿತು. ಹೈಟೆಕ್ ಸ್ಪರ್ಶದ ಪಡೆದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸೋಮವಾರದಿಂದ (ಜ.13) ಸಾರಿಗೆ ಸೇವೆ ಸಿಗಲಿದೆ. ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್ ಸಿಟಿ ಅನುದಾದಡಿಯಲ್ಲಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಳೇ ಬಸ್ …

Read More »

ಹೊನಗಾ ಗ್ರಾಮದಲ್ಲಿ ನಿರ್ಮಾಣಗೊಂಡ ಉನ್ನತಿಕರಿಸಿದ ಸರ್ಕಾರಿ ಪ್ರೌಢ ಶಾಲೆಗಳ ಹೊಸ 2 ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಲೋಕೋಪಯೋಗಿ ಸಚಿವರು ಹಾಗೂ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಮೇಡಂ ಚಿಕ್ಕೋಡಿ ಲೋಕಸಭಾ ಸದಸ್ಯರು ಇವರ ಆದೇಶದ ಮೇರೆಗೆ ಇಂದು ಹೊನಗಾ ಗ್ರಾಮದಲ್ಲಿ ನಿರ್ಮಾಣಗೊಂಡ ಉನ್ನತಿಕರಿಸಿದ ಸರ್ಕಾರಿ ಪ್ರೌಢ ಶಾಲೆಗಳ ಹೊಸ 2 ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಇಂದು ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಇವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀ ಸಿದ್ದು ಸುಣಗಾರ ಶ್ರೀ …

Read More »

ಮಹಾ ಕುಂಭ 2025 ಕ್ಕೆ ಭಾರತೀಯ ರೈಲ್ವೆಯ ಸಿದ್ಧತೆಗಳು

ಮಹಾ ಕುಂಭ 2025 ಕ್ಕೆ ಭಾರತೀಯ ರೈಲ್ವೆಯ ಸಿದ್ಧತೆಗಳು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಪ್ರಯಾಗ್ರಾಜ್ ಪ್ರದೇಶದಲ್ಲಿ ಮಹಾಕುಂಭ 2025 ಗೆ ಭಾರತೀಯ ರೈಲ್ವೆಯ ಸನ್ನದ್ಧತೆಯನ್ನು ಹೆಚ್ಚಿಸಲು ಹಲವಾರು ಪ್ರಮುಖ ಉಪಕ್ರಮಗಳನ್ನು ಉದ್ಘಾಟಿಸಿದ್ದಾರೆ. ಈ ಕ್ರಮಗಳು ಲಕ್ಷಾಂತರ ಯಾತ್ರಾರ್ಥಿಗಳಿಗೆ ಸುರಕ್ಷಿತ, ತಡೆರಹಿತ ಮತ್ತು ತಾಂತ್ರಿಕವಾಗಿ ಸುಧಾರಿತ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ. ಪ್ರಮುಖ ಘೋಷಣೆಗಳು ಮತ್ತು ಉದ್ಘಾಟನೆಗಳು: ಕುಂಭ ವಾರ್ ರೂಮ್ ಪ್ರಾರಂಭ ರೈಲ್ವೆ ಮಂಡಳಿ …

Read More »