IPL 2024: ಸನ್ರೈಸರ್ಸ್ ಹೈದರಾಬಾದ್ ತಂಡವು (SRH) ಐಪಿಎಲ್ ಸೀಸನ್ 17ರ ಫೈನಲ್ಗೆ ಪ್ರವೇಶಿಸಿದೆ. ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್ಗಳ ಜಯ ಸಾಧಿಸಿ ಎಸ್ಆರ್ಹೆಚ್ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಅತ್ತ ಎಸ್ಆರ್ಹೆಚ್ ಗೆಲ್ಲುತ್ತಿದ್ದಂತೆ ತಂಡದ ಮಾಲಕಿ ಕಾವ್ಯ ಮಾರನ್ ಕುಣಿದು ಕುಪ್ಪಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಎಸ್ಆರ್ಹೆಚ್ ಉತ್ತಮ ಆರಂಭ ಪಡೆದಿರಲಿಲ್ಲ. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಒಂದು ಹಂತದಲ್ಲಿ 160 ರನ್ಗಳ ಗಡಿ ದಾಟುವುದು ಕಷ್ಟಕರವಾಗಿತ್ತು.ಈ ವೇಳೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾವ್ಯ ಮಾರನ್ ಹತಾಶಭಾವದೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಹೆನ್ರಿಕ್ ಕ್ಲಾಸೆನ್ (50) ಬಾರಿಸಿದ ಅರ್ಧಶತಕದ ನೆರವಿನಿಂದ ಎಸ್ಆರ್ಹೆಚ್ ತಂಡವು ನಿಗದಿತ 20 ಓವರ್ಗಳಲ್ಲಿ 175 ರನ್ ಕಲೆಹಾಕಿತು.