Breaking News
Home / ರಾಜಕೀಯ / ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ‘ಸೆಲ್ಫಿ ಪಾಯಿಂಟ್

ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ‘ಸೆಲ್ಫಿ ಪಾಯಿಂಟ್

Spread the love

ಬೆಂಗಳೂರು, ಫೆಬ್ರವರಿ 19: ಬೆಂಗಳೂರು ನಗರಾದ್ಯಂತ 73.75 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಖುಷಿ ಹೆಚ್ಚಿಸುವ ಕೆಲಸ ಮಾಡಿದೆ.
ಅದೇನೆಂದರೆ ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧೆಡೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯಾಣಿಕರಿಗೆಂದೇ ‘ಸೆಲ್ಫಿ ಪಾಯಿಂಟ್‌’ (Metro Selfie Points) ಅನ್ನು ನಿರ್ಮಿಸಿದೆ. ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗ ವ್ಯಾಪ್ತಿಯಲ್ಲಿ ಬರುವ ಬನಶಂಕರಿ ಹಾಗೂ ಕೋಣನಕುಂಟೆ ಮೆಟ್ರೋ ನಿಲ್ದಾಣಗಳಲ್ಲಿ ಈ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ನಮ್ಮ ಮೆಟ್ರೋ ಸಾರಿಗೆ ವಿಶೇಷತೆ, ಬೆಂಗಳೂರಿನ ಸಾರಿಗೆ ಕುರಿತು ಪ್ರಚಾರ ನೀಡಲು ಉಪಯೋಗಕ್ಕೆ ಬರುವ ಈ ಸೆಲ್ಫಿ ಪಾಯಿಂಟ್‌ಗಳನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ಪ್ರಯಾಣಿಕರಿಗಾಗಿ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.Karnataka Budget 2024: ನಮ್ಮ ಮೆಟ್ರೋ ಈ ಮಾರ್ಗಗಳು ನೀರ್ಣಾಯಕ: 1,150 ಹೊಸ ಬಸ್ ಬಿಡುಗಡೆ:
Namma Metro Feature: ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ 'ಸೆಲ್ಫಿ ಪಾಯಿಂಟ್': ಎಲ್ಲೆಲ್ಲಿ? ವಿಶೇಷತೆ ಗಮನಿಸಿ
ಗೆಹ್ಲೋಟ್ವಿಶೇಷತೆ ಏನು?ಇವರೆ ಮೆಟ್ರೋ ನಿಲ್ದಾಣದಲ್ಲಿ ಸೆಲ್ಪಿ ಪಾಯಿಂಟ್ ಸ್ಥಳದಲ್ಲಿ ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ ರೀತಿಯ ಪರದೆ ಹಾಕಲಾಗಿದೆ. ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸೆಲ್ಫಿ ಪಾಯಿಂಟ್ ಎಂದು ನೇಮ್ ಬೋರ್ಡ್ ಸಹ ಅಳವಡಿಸಲಾಗಿದೆ ಇಲ್ಲಿ ನೀವು ಮೊಬೈಲ್ ಕ್ಲಿಕ್ಕಿಸಿಕೊಳ್ಳಬಹುದು.ಕೋಣಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಲ್ಲಿ ಸೆಲ್ಪಿ ಪಾಯಿಂಟ್ ಗಾಗಿ ಹೆಚ್ಚು ಸ್ಥಳ ಮೀಸಲಿಡಲಾಗಿದೆ ಎಂಬುದು ಚಿತ್ರದಿಂದ ತಿಳಿದು ಬರುತ್ತಿದೆ. ಇನ್ನೂ ಬನಶಂಕರಿ ಮೆಟ್ರೋ ನಿಲ್ದಾಣದಲ್ಲೂ ಸಹ ಇದೇ ರೀತಿ ಮಾಡಲಾಗಿದೆ.
ಲೈಟಿಂಗ್ಸ್‌ನಿಂದ ಕಂಗೊಳಿಸುವ ಈ ಸೆಲ್ಫಿ ಪಾಯಿಂಟ್ ನಲ್ಲಿ ಪ್ರಯಾಣಿಕರು ಫೋಟೊ ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ನಮ್ಮ ಮೆಟ್ರೋ ಹಳದಿ ಮಾರ್ಗ ಅಪ್ಡೇಟ್ಬೆಂಗಳೂರು ನಮ್ಮ ಮೆಟ್ರೋ ಬಹುನಿರೀಕ್ಷೆಯ 19 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗವು (Namma Metro Yellow Line) ಯಾವಾಗ ಸಾರ್ವಜನಿಕರಿಗೆ ತೆರದುಕೊಳ್ಳಲಿದೆ ಎಂಬ ಕುತೂಹಲ ದಿನೇ ದಿನೆ ಹೆಚ್ಚಾಗುತ್ತಿದೆ.ಸದ್ಯ ಚೀನಾದಿಂದ ಚೆನ್ನೈ ಮಾರ್ಗವಾಗಿ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಚಾಲಕ ರಹಿತ ಪ್ರೊಟೋ ಟೈಪ್ ಕೋಚ್‌ಗಳು ಆಗಮಿಸಿವೆ. ಆರು ಬೋಗಿಗಳ ಒಂದು ಸೆಟ್ ಇದಾಗಿದ್ದು,
ಮೊನ್ನೆಯಷ್ಟೇ ಬೋಗಿಗಳನ್ನು ಟ್ರಕ್‌ಗಳಿಂದ ಅನ್‌ಲೋಡ್ ಮಾಡಿ ಹಳಿಗೆ ಜೋಡಿಸಲಾಗಿದೆ. ಆದಷ್ಟು ಶೀಘ್ರವೇ ಅಂದರೆ ಜುಲೈ ಹೊತ್ತಿಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳಿಸಿ ಅಧಿಕೃತವಾಗಿ ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆಗಳು ದಟ್ಟವಾಗಿವೆ.

Spread the love

About Laxminews 24x7

Check Also

ನೀಟ್ ಪರೀಕ್ಷಾ ಅಕ್ರಮ ಎಸಗಿದವರನ್ನು ಸುಮ್ಮನೆ ಬಿಡೋದಿಲ್ಲ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ

Spread the loveನವದೆಹಲಿ, ಜೂನ್ 16: NEET ವಿಷಯದಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವವರನ್ನು ಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಧರ್ಮೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ