Breaking News
Home / ರಾಜಕೀಯ / ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿದ ಎಂಇಎಸ್

ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿದ ಎಂಇಎಸ್

Spread the love

ಬೆಳಗಾವಿ, : ಎಂಇಎಸ್ (MES) ಮುಖಂಡರು ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈಹಾಕಿದ್ದು, ಮಹಾರಾಷ್ಟ್ರ ಸಚಿವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಆರೋಗ್ಯ ವಿಮೆ ಮರು ಜಾರಿ, ಮರಾಠಿ ಭಾಷೆ ಬಳಕೆ ಅವಕಾಶ ಸೇರಿದಂತೆ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಎಂಇಎಸ್​ ರಮಾಕಾಂತ ಕೊಂಡೊಸ್ಕರ್ ಮತ್ತಿತರರುಮಹಾರಾಷ್ಟ್ರ(Maharashtra) ಗಡಿ ಉಸ್ತುವಾರಿ ಸಚಿವ ಶುಂಭುರಾಜೆ ದೇಸಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷೆ ಬಳಕೆ ಅವಕಾಶ ಕಲ್ಪಿಸಬೇಕು, ಗಡಿ ಭಾಗದ ಜನರಿಗೆ ಮರಾಠಿಯಲ್ಲಿ ದಾಖಲೆ ಪತ್ರ ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮಧ್ಯೆ ಪ್ರವೇಶಿಸುವಂತೆ ಮಾಡಬೇಕು, ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡುವುದು. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಹಾರಾಷ್ಟ್ರ ಸರ್ಕಾರ ಚರ್ಚೆ ನಡೆಸಬೇಕು.

 

ಬೆಳಗಾವಿ ನಗರದ ಪಕ್ಕದ ಶಿನ್ನೊಳ್ಳಿಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿ ಕಚೇರಿ ಆರಂಭಿಸಬೇಕು, ಮರಾಠಿಗರಿಗೆ ಆಗುತ್ತಿರುವ ಸಮಸ್ಯೆ ಇತ್ಯರ್ಥಕ್ಕೆ ಸಹಕಾರಿಯಾಗಬೇಕು, ಕರ್ನಾಟಕದಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಎಂಇಎಸ್ ನಡೆಯನ್ನು ಕನ್ನಡ ಪರಸಂಘಟನೆಗಳು ಖಂಡಿಸಿವೆ.


Spread the love

About Laxminews 24x7

Check Also

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

Spread the love ಪಣಜಿ: ಝೋಸ್ಕಾ ಆಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಾಗಿ ಹೇಳಿ ಮಹಿಳೆಯೊಬ್ಬರು 2.71 ಲಕ್ಷ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ