Breaking News
Home / ರಾಜಕೀಯ / ಈ ವಾರದ ರಾಶಿ ಭವಿಷ್ಯ ಹೀಗಿದೆ..

ಈ ವಾರದ ರಾಶಿ ಭವಿಷ್ಯ ಹೀಗಿದೆ..

Spread the love

 

ಮೇಷ : ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಸಮಸ್ಯೆಗಳಿಂದ ಹೊರಬರಲಿದ್ದು ನಿರಾಳತೆಯನ್ನು ಅನುಭವಿಸಲಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬದ ನಡುವೆ ಒಂದಷ್ಟು ಅಂತರ ಮತ್ತು ಕೆಲವೊಂದು ತಾತ್ವಿಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು.

ಮನೆಗೆ ಸಂಬಂಧಿಸಿದಂತೆ ವೆಚ್ಚಗಳು ಉಂಟಾಗಬಹುದು. ನಿಮ್ಮ ಜವಾಬ್ದಾರಿಗಳು ನಿಮ್ಮ ಗಮನ ಸೆಳೆಯಲಿವೆ. ಇದೇ ವೇಳೆ ನಿಮ್ಮ ಕೆಲಸದಲ್ಲಿ ಸಮನ್ವಯ ಕಾಪಾಡಲು ಯತ್ನಿಸಲಿದ್ದೀರಿ. ಮನೆ ಮತ್ತು ಕಚೇರಿ ಎರಡೂ ಕಡೆಯಲ್ಲಿ ನಿಮ್ಮ ಅಗತ್ಯವಿದೆ. ಇವುಗಳನ್ನು ಚೆನ್ನಾಗಿ ನಿಭಾಯಿಸಿದಾಗಲೇ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ವ್ಯಾಪಾರೋದ್ಯಮಿಗಳು ಕೆಲವೊಂದು ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದಾರೆ. ನೀವು ಇನ್ನಷ್ಟು ಶಕ್ತಿಯಿಂದ ಮುಂದೆ ಸಾಗಲಿದ್ದೀರಿ. ಸರ್ಕಾರಿ ನೀತಿಯನ್ನು ಅಳವಡಿಸಬೇಕಾದ ಸನ್ನಿವೇಶ ಉಂಟಾಗಬಹುದು. ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಆಹಾರಕ್ರಮಕ್ಕೆ ಗಮನ ಹರಿಸುವುದು ಅಗತ್ಯ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ವೃಷಭ : ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಸಂಘರ್ಷದಿಂದ ಕೂಡಿರಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಸಂಬಂಧದಲ್ಲಿ ಪ್ರಣಯವು ಹೆಚ್ಚಲಿದ್ದು ಪರಸ್ಪರರ ನಡುವಿನ ತಿಳಿವಳಿಕೆಯು ಹೆಚ್ಚಲಿದೆ. ನಿಮ್ಮ ಸ್ನೇಹಿತರ ಜೊತೆ ನೀವು ತಿರುಗಾಟಕ್ಕೆ ಹೋಗಬಹುದು. ನೀವು ಕೆಲವೊಂದು ಹೊಸ ಗೆಳೆಯರನ್ನು ಭೇಟಿ ಮಾಡಲಿದ್ದು ಇದು ನಿಮ್ಮ ಮಿತ್ರವರ್ಗವನ್ನು ಹೆಚ್ಚಿಸಲಿದೆ. ನೀವು ಇತರರಿಗಾಗಿ ಒಳ್ಳೆಯ ಕೆಲಸವನ್ನು ಮಾಡಲಿದ್ದೀರಿ. ನಿಮ್ಮ ಶತ್ರುಗಳನ್ನು ಜಯಿಸಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದ್ದು, ದೂರದ ಪ್ರದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ವ್ಯವಹಾರ ಮಾಡುವವರನ್ನು ಸಂಪರ್ಕಿಸಿ ಅಥವಾ ವಿದೇಶಗಳನ್ನು ಸಂಪರ್ಕಿಸಿ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಮಿಥುನ : ಕುಟುಂಬದಲ್ಲಿ ನಿಮ್ಮ ತಾಯಿಯು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇರುವ ಅವರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಇಲ್ಲಿಯತನಕ ನಿಮ್ಮನ್ನು ಕಾಡುತ್ತಿರುವ ಒತ್ತಡವನ್ನು ನಿವಾರಿಸುವಲ್ಲಿ ನೀವು ಕಾಲಕ್ರಮೇಣ ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಕಾರಣ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಪಡೆಯಲಿದ್ದೀರಿ. ನಿಮ್ಮ ಆದಾಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮಗೆ ಅದೃಷ್ಟದ ಬೆಂಬಲ ದೊರೆಯಬಹುದು. ಇದರಿಂದಾಗಿ ಕೆಲಸಗಳು ಪೂರ್ಣಗೊಳ್ಳಿವೆ. ನಿಮ್ಮ ಕೆಲಸಕ್ಕೆ ಒಂದಷ್ಟು ಗಮನ ನೀಡಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಹಿಂದಿನ ದಿನಗಳಿಗೆ ಹೋಲಿಸಿದರೆ ನಿಮ್ಮ ಅರೋಗ್ಯದಲ್ಲಿ ಒಂದಷ್ಟು ಸುಧಾರಣೆ ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಬೇಕು. ವಾರದ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ಕರ್ಕಾಟಕ : ಗೆಳೆಯರೊಂದಿಗಿನ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿನ ಒತ್ತಡವು ಕಡಿಮೆಯಾಗಲಿದೆ. ಪ್ರೇಮ ಜೀವನದಲ್ಲಿಯೂ ಸುಧಾರಣೆ ಉಂಟಾಗಲಿದೆ. ಯಾವುದಾದರೂ ಸರ್ಕಾರಿ ಟೆಂಡರ್‌ ಗೆ ಅರ್ಜಿ ಸಲ್ಲಿಸುವ ಮೂಲಕ ಸಾಕಷ್ಟು ಲಾಭವನ್ನು ನೀವು ಗಳಿಸಲಿದ್ದೀರಿ. ಶೇರು ಮಾರುಕಟ್ಟೆ ಅಥವಾ ರಿಯಲ್‌ ಎಸ್ಟೇಟ್‌ ನಲ್ಲಿ ಕೆಲಸ ಮಾಡುವುದರಿಂದ ಸಾಕಷ್ಟು ಲಾಭ ದೊರೆಯಲಿದೆ. ಈ ಸಂದರ್ಭದಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸ ಮತ್ತು ಅನುಭವವು ಯಶಸ್ಸಿನ ಹೊಸ ಅಧ್ಯಾಯವನ್ನು ತೆರೆಯಲಿದೆ. ನಿಮ್ಮ ಬಾಸ್‌ ಕೂಡಾ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ನೀವು ಸವಾಲುಗಳನ್ನು ಹೇಗೆ ಎದುರಿಸುತ್ತೀರಿ ಎಂಬುದನ್ನು ನೋಡಿ ನಿಮ್ಮ ಸಾಮರ್ಥ್ಯವನ್ನು ನೀವು ಅಳೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಕಲಿಯಲು ಅವರಿಗೆ ಈಗ ಏಕಾಂತದ ಅಗತ್ಯವಿದ್ದು ಈ ಕುರಿತು ಕಾಳಜಿ ವಹಿಸಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಸಿಂಹ : ಕುಟುಂಬದ ಸದಸ್ಯರ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಳ್ಳಬಹುದು. ಕುಟುಂಬದ ಹಿರಿಯ ವ್ಯಕ್ತಿಗಳ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಅವರ ಕುರಿತು ಕಾಳಜಿ ವಹಿಸಿ. ಸರ್ಕಾರದಿಂದ ಲಾಭ ಗಳಿಸುವ ಎಲ್ಲಾ ಸಾಧ್ಯತೆ ಇದೆ. ನೀವು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧಿಸುವ ಅವಕಾಶಗಳಿವೆ. ಉದ್ಯೋಗದ ವಿಚಾರರದಲ್ಲಿ ಸಮಯವು ಅನುಕೂಲಕರವಾಗಿದೆ. ಕಠಿಣ ಶ್ರಮವನ್ನು ಮುಂದುವರಿಸಿ ಹಾಗೂ ನಿಮ್ಮ ಕೆಲಸಕ್ಕೆ ಹೆಚ್ಚು ಗಮನ ನೀಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ನೀವು ಕೆಲಸದಲ್ಲಿ ತೊಡಗಿಸಿಕೊಂಡು ಹೊರಗಿನ ಪ್ರಪಂಚವನ್ನೇ ಮರೆತು ಬಿಡುವ ಸಾಧ್ಯತೆ ಇದೆ. ಈ ನಡುವೆ ಒಂದಷ್ಟು ವಿರಾಮವನ್ನು ತೆಗೆದುಕೊಂಡು ಒಳ್ಳೆಯ ಆಹಾರವನ್ನು ಸೇವಿಸಿ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆಗ ಮಾತ್ರವೇ ದೈಹಿಕ ಕ್ಷಮತೆಯನ್ನು ಕಾಪಾಡಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ತಾಂತ್ರಿಕ ಮತ್ತು ಆಡಳಿತ ನಿರ್ವಹಣೆ ಅಧ್ಯಯನಗಳಿಗೆ ಇದು ಸಕಾಲ. ಉತ್ತಮ ಸಾಧನೆ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ವಾರದ ಆರಂಭಿಕ ದಿನಗಳು ಉತ್ತಮ.

ಕನ್ಯಾ : ನಿಮ್ಮ ಆತ್ಮವಿಶ್ವಾಸದಲ್ಲಿ ಗಣನೀಯ ಪ್ರಮಾಣದಲ್ಲಿ ವೃದ್ಧಿ ಉಂಟಾಗಲಿದೆ. ಹೀಗಾಗಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಆದರೆ ಏಕಕಾಲದಲ್ಲಿ ನೀವು ಪ್ರೀತಿ ಮತ್ತು ಪ್ರೀತಿಯಿಂದ ಪ್ರತ್ಯೇಕತೆಯನ್ನು ಅನುಭವಿಸಲಿದ್ದೀರಿ. ಒಂದೆಡೆ ಭೌತಿಕ ಪ್ರಪಂಚದಿಂದ ಕಳಚಿಕೊಳ್ಳಬೇಕೆಂದು ನಿಮಗೆ ಅನಿಸಬಹುದು, ಇನ್ನೊಂದೆಡೆ ಎಲ್ಲಾ ಭೌತಿಕ ಸುಖಗಳನ್ನು ಅನುಭವಿಸಬೇಕೆಂದು ನಿಮಗೆ ಅನಿಸಬಹುದು. ನಿಭಾಯಿಸಲು ನೀವು ಪ್ರಯತ್ನಿಸಬೇಕಾದೀತು. ಬ್ಯಾಂಕಿನ ಠೇವಣಿಯಲ್ಲಿ ವೃದ್ಧಿ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಿದ್ದಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರದು. ಆದರೆ ಸಣ್ಣಪುಟ್ಟ ಸಮಸ್ಯೆಗಳಿಗೂ ನೀವು ಗಮನ ನೀಡಬೇಕು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ತುಲಾ : ನಿಮ್ಮ ಕೌಟುಂಬಿಕ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸಂತುಲನ ಕಾಪಾಡುವಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೇಮ ಮತ್ತು ಪ್ರಣಯದ ನಡುವೆ ಒತ್ತಡ ಹೆಚ್ಚುವುದನ್ನು ಗಮನಿಸಲಿದ್ದಾರೆ. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ಆದರೆ ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಸದ್ಯಕ್ಕೆ ವೆಚ್ಚಗಳಲ್ಲಿ ಹಠಾತ್‌ ಆಗಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಅಚ್ಚರಿಗೆ ಕಾರಣವೆನಿಸಬಹುದು. ಆದರೆ ನೀವು ಖರ್ಚು ಮಾಡಲೇಬೇಕಾಗುತ್ತದೆ. ವ್ಯವಹಾರಕ್ಕೆ ಇದು ಸಕಾಲ. ನಿಮಗೆ ಕೆಲವೊಂದು ಹೊಸ ಕೆಲಸಗಳು ಲಭಿಸಬಹುದು. ಪೂರ್ಣಗೊಳಿಸುವ ಮೂಲಕ ನಿಮ್ಮ ಸಾಮರ್ಥ್ಯವನ್ನು ನೀವು ಪ್ರದರ್ಶಿಸಲಿದ್ದು ಅಂತಿಮವಾಗಿ ಗೆಲುವು ನಿಮ್ಮದಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದ ಕುರಿತು ಧನಾತ್ಮಕ ಮನೋಭಾವ ತೋರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ನೀವು ಉದ್ಯೋಗದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಅಧಿಕ ಜ್ವರವು ನಿಮ್ಮನ್ನು ಕಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಹವಾಮಾನದ ಕುರಿತು ಜಾಗರೂಕರಾಗಿರಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ವೃಶ್ಚಿಕ : ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಒತ್ತಡವನ್ನು ಮರೆಯುವುದಕ್ಕಾಗಿ ಔತಣ ಕೂಟವನ್ನು ಆಯೋಜಿಸಲಿದ್ದಾರೆ. ಪರಸ್ಪರ ಸಂವಹನದ ಮೂಲಕ ಸಂಬಂಧವನ್ನು ತಿಳಿಗೊಳಿಸಲು ಮತ್ತು ಗಟ್ಟಿಗೊಳಿಸಲು ಅವರು ಯತ್ನಿಸಲಿದ್ದಾರೆ. ಕೆಲಸದ ಸ್ಥಿತಿಯಲ್ಲಿ ಮೆಲ್ಲನೆ ಸುಧಾರಣೆ ಉಂಟಾಗಲಿದೆ. ಇದಕ್ಕಾಗಿ ನಿಮ್ಮ ಜೊತೆಗೆ ಕೆಲಸ ಮಾಡುವವರೊಂದಿಗೆ ಉತ್ತಮ ಬಾಂಧವ್ಯವನ್ನು ನೀವು ಕಾಪಾಡಬೇಕು. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ಯಾವುದೇ ಮಹಿಳೆಯೊಂದಿಗೆ ದುರ್ವರ್ತನೆ ತೋರಿದರೆ ನಿಮಗೆ ಹಾನಿಯಂಟಾಗಬಹುದು. ಈ ಕುರಿತು ವಿಶೇಷ ಕಾಳಜಿ ವಹಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕದಾದ ಫಲವನ್ನು ನೀವು ನಿರೀಕ್ಷಿಸಬಹುದು. ನೀವು ಹಣ ಹೂಡಿಕೆ ಮಾಡಲು ಯತ್ನಿಸಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಮತ್ತು ದೈನಂದಿನ ಅಭ್ಯಾಸಗಳನ್ನು ಪಾಲಿಸಿ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಧನು : ನಿಮ್ಮ ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯ ಕೊರತೆ ಕಾಣಿಸಿಕೊಳ್ಳಲಿದೆ. ನಿಮ್ಮ ಕುಟುಂಬದಲ್ಲಿನ ಸಂತಸ ಮರೆಯಾಗಬಹುದು. ಸದ್ಯಕ್ಕೆ ಕೆಲಸದ ಕಾರಣ ನೀವು ದೀರ್ಘ ಕಾಲದಿಂದ ಕುಟುಂಬದಿಂದ ದೂರವುಳಿದಿರಬಹುದು. ಹೀಗಾಗಿ ನಿಮ್ಮಲ್ಲಿ ಸಂತಸದ ಕೊರತೆ ಕಾಣಿಸಿಕೊಳ್ಳಬಹುದು. ಕೆಲಸದಲ್ಲಿ ಏರುಪೇರು ಉಂಟಾಗಬಹುದು. ಕೆಲಸದಲ್ಲಿ ಅನಾಸಕ್ತಿ ಉಂಟಾಗಬಹುದು. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ಆದರೆ ಅವರ ಜೀವನ ಸಂಗಾತಿಯ ಜೊತೆಗೆ ಒಂದಷ್ಟು ವಾಗ್ವಾದ ಉಂಟಾಗಬಹುದು. ಪ್ರೇಮ ಜೀವನಕ್ಕೆ ಸಮಯವು ಅಷ್ಟೊಂದು ಚೆನ್ನಾಗಿಲ್ಲ. ಹೀಗಾಗಿ ತಾಳ್ಮೆಯಿಂದ ವರ್ತಿಸಿ ಮತ್ತು ಒಂದಷ್ಟು ಸಮಯವನ್ನು ತೆಗೆದುಕೊಳ್ಳಿರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಜಾಗ್ರತೆ ಇರಲಿ. ವಾರದ ಮೊದಲ ಎರಡು ದಿನಗಳ ನಂತರದ ದಿನಗಳು ಪ್ರಯಾಣಿಸಲು ಅತ್ಯುತ್ತಮ.

ಮಕರ : ಜೀವನ ಸಂಗಾತಿಯ ಜೊತೆಗಿನ ಸಂಬಂಧ ಚೆನ್ನಾಗಿರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ದೂರಕ್ಕೆ ಹೋಗಲು ಯೋಚಿಸಬಹುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ. ನಿಮ್ಮ ತಂದೆಯ ಆರೋಗ್ಯ ಕೆಡಬಹುದು. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ನೀವು ಪಡೆಯಲಿದ್ದೀರಿ. ನಿಮ್ಮ ಸ್ಥಾನವು ಭದ್ರಗೊಳ್ಳುವ ಕಾರಣ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗುತ್ತದೆ. ನಿಮ್ಮ ಸಲಹೆ ಕೇಳುವುದಕ್ಕಾಗಿ ಜನರು ನಿಮ್ಮ ಬಳಿ ಬರಲಿದ್ದಾರೆ. ವ್ಯವಹಾರದಲ್ಲಿ ನಿಮ್ಮ ಕಠಿಣ ಶ್ರಮವು ಹೆಚ್ಚಲಿದ್ದು ಅಂತಿಮ ಫಲಿತಾಂಶವನ್ನು ಪಡೆಯಲಯ ಒಂದಷ್ಟು ಸಮಯ ಬೇಕಾದೀತು. ಆದರೆ ಪ್ರಯತ್ನವನ್ನು ಮುಂದುವರಿಸಿ. ಖಂಡಿತವಾಗಿಯೂ ಯಶಸ್ಸು ದೊರೆಯಲಿದೆ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ಧಾರ್ಮಿಕ ಭಾವನೆಗಳು ಹೆಚ್ಚಬಹುದು. ಅರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ಲಲಿತಕಲೆಯ ಕ್ಷೇತ್ರದಲ್ಲಿ ಅವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಸುಧಾರಣೆ ಉಂಟಾಗಬಹುದು. ವಾರದ ಆರಂಭಿಕ ದಿನ ಮತ್ತು ಕೊನೆಯ ಎರಡು ದಿನಗಳು ಪ್ರಯಾಣಿಸಲು ಉತ್ತಮ.

ಕುಂಭ : ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ನಿಮ್ಮ ಸಂಬಂಧದ ಬಗ್ಗೆ ನೀವು ಹೆಚ್ಚು ಮಾತನಾಡುವಿರಿ ಮತ್ತು ಸಂಬಂಧವನ್ನು ಮುಕ್ತವಾಗಿ ಸ್ವೀಕರಿಸಲಿದ್ದೀರಿ. ಈ ವಾರದಲ್ಲಿ ಸಾಕಷ್ಟು ಖರ್ಚುವೆಚ್ಚವು ಉಂಟಾಗಲಿದ್ದು ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಹೀಗಾಗಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದಕ್ಕಾಗಿ ಈ ಕುರಿತು ಸ್ವಲ್ಪ ಗಮನ ನೀಡಿ. ಕಾಯಕವೇ ಕೈಲಾಸ ಎನ್ನುವ ಮಾತಿನಂತೆ ನೀವು ನಡೆಯಲಿದ್ದು ಕಠಿಣ ಶ್ರಮ ಮಾಡಲಿದ್ದೀರಿ. ಇದರಿಂದ ನಿಮಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ನಿಮ್ಮಲ್ಲಿ ಹೆಚ್ಚಿನವರು ಪ್ರಯಾಣದಲ್ಲಿ ಸಮಯ ಕಳೆಯಲಿದ್ದು, ಈ ಸಂದರ್ಭದಲ್ಲಿ ಯಾರಾದರೂ ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನಿಮಗೆ ದೊರೆಯಲಿದೆ. ನೀವು ಸರ್ಕಾರಿ ವಲಯದಿಂದ ಲಾಭವನ್ನು ಪಡೆಯಲಿದ್ದೀರಿ ಅಥವಾ ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯವು ಚೆನ್ನಾಗಿದ್ದು ಅವರು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಉಂಟಾಗಬಹುದು. ಹೀಗಾಗಿ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಕೊನೆಯ ಕೆಲವು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮೀನ : ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯು ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಿದ್ದು ಇದು ನಿಮ್ಮ ಸಂಬಂಧಕ್ಕೆ ಇನ್ನಷ್ಟು ಮೆರುಗು ನೀಡಲಿದೆ ಹಾಗೂ ಸರಿಯಾದ ಹಾದಿಯಲ್ಲಿ ಇದು ಮುನ್ನಡೆಯಲಿದೆ. ಪ್ರೇಮ ಸಂಬಂಧದಲ್ಲಿರುವವರು ಈ ಕಾಲವನ್ನು ಚೆನ್ನಾಗಿ ಆನಂದಿಸಬೇಕು. ನಿಮ್ಮ ಸಂಬಂಧವನ್ನು ಕಾಡುತ್ತಿದ್ದ ಒತ್ತಡದಿಂದ ನಿಮಗೆ ಮುಕ್ತಿ ದೊರೆಯಲಿದೆ. ನಿಮ್ಮ ಪ್ರಯಾಣದಲ್ಲಿ ನಿಮ್ಮ ಆಪ್ತ ವ್ಯಕ್ತಿಗಳನ್ನು ಕರೆದುಕೊಂಡು ಹೋಗಲಿದ್ದೀರಿ. ಹೀಗಾಗಿ ಪ್ರಯಾಣವು ಚೆನ್ನಾಗಿ ಕೊನೆಗೊಳ್ಳಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ಜೊತೆಗೆ ಗೆಳೆಯರ ಬೆಂಬಲವಿದ್ದರೆ ಇನ್ನೇನು ಬೇಕು? ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಇದು ನಿಮಗೆ ಅಧ್ಯಯನದಲ್ಲಿ ಯಶಸ್ಸನ್ನು ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ನೀವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ.


Spread the love

About Laxminews 24x7

Check Also

ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ಸಿಗಲಿ; ನಟ ಕಿಚ್ಚ ಸುದೀಪ್

Spread the love ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್​ ಆಗಿದ್ದಾರೆ.ಈಗಾಗಲೇ ನಟ ದರ್ಶನ್ ಸೇರಿ ಒಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ