Breaking News
Home / ರಾಜಕೀಯ / ಅಭ್ಯರ್ಥಿಗಳೂ ಕಾವಲು ಕಾಯಬಹುದು..’: ಈ ಬಾರಿ ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ

ಅಭ್ಯರ್ಥಿಗಳೂ ಕಾವಲು ಕಾಯಬಹುದು..’: ಈ ಬಾರಿ ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ

Spread the love

ಮತದಾನ ನಡೆದ ಬಳಿಕ ಮತ ಯಂತ್ರಗಳನ್ನು ಹಿಂದಕ್ಕೆ ತಂದು ಭದ್ರತಾ ಕೊಠಡಿಗಳಲ್ಲಿ ಇರಿಸಲಾಗುತ್ತದೆ, ಆ ಬಳಿಕ ಮತ ಎಣಿಕೆಯಂದು ಅವುಗಳನ್ನು ಹೊರತೆಗೆದು ಎಣಿಕೆ ಮಾಡಲಾಗುತ್ತದೆ.

ಡಿಮಸ್ಟರಿಂಗ್‌ ಕೇಂದ್ರಗಳಿಂದ ಭದ್ರತಾ ಕೊಠಡಿಗೆ ಮತಯಂತ್ರ ತರುವಾಗ ಹಾಗೂ ಭದ್ರತಾ ಕೊಠಡಿಗಳಲ್ಲಿ ಇರಿಸಿರುವಾಗ ಕೇವಲ ಕೇಂದ್ರೀಯ ಅರೆ ಮಿಲಿಟರಿ ಪೊಲೀಸ್‌ ಪಡೆ (ಸಿಪಿಎಂಎಫ್)‌ ಭದ್ರತೆ ಕೊಡುವುದು ಸಹಜ.

ಈ ಬಾರಿ ಚುನಾವಣಾ ಆಯೋಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರತೆ ನೀಡುವುದು ಹಾಗೂ ವೀಕ್ಷಣೆಗೆ ಮತ್ತೊಂದು ವರ್ಗಕ್ಕೆ ಅವಕಾಶ ಮಾಡಿಕೊಟ್ಟಿದೆ.

 

ಹೌದು. ಈ ಬಾರಿ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಮತಯಂತ್ರಗಳನ್ನು ಭದ್ರತಾ ಕೊಠಡಿಗೆ ತರುವ ವೇಳೆ ಕೇಂದ್ರೀಯ ಪೊಲೀಸ್‌ ಬಲದ ವಾಹನದ ಹಿಂದೆ ಪ್ರತ್ಯೇಕ ವಾಹನದಲ್ಲಿ ಬರಬಹುದು. ಅಷ್ಟೇ ಅಲ್ಲ ಸ್ಟ್ರಾಂಗ್‌ ರೂಂನಲ್ಲಿ ಇರಿಸಿದ ಬಳಿಕ ಅಭ್ಯರ್ಥಿಗಳು/ ಅವರ ಏಜೆಂಟರು/ ಪ್ರತಿನಿಧಿಗಳು (ಯರಾದರೂ ಒಬ್ಬರು ಮಾತ್ರ) ಅದೇ ಕೇಂದ್ರದಲ್ಲಿ ಅವರಿಗೆ ನಿಗದಿ ಪಡಿಸಿದ ಕೊಠಡಿಯಲ್ಲಿ ಇರಬಹುದು. ಭದ್ರತಾ ಕೊಠಡಿಯ ಸಿಸಿಟಿವಿಯನ್ನು ಅವರಿಗೆ ನೇರವಾಗಿ ವೀಕ್ಷಿಸಲು ಈ ಬಾರಿ ಅವಕಾಶ ಇದೆ.

ಮಂಗಳೂರಿನ ಎನ್‌ಐಟಿಕೆಯಲ್ಲಿ ಭದ್ರತಾ ಕೊಠಡಿ ಇದ್ದು, ಅದೇ ಕ್ಯಾಂಪಸ್‌ನಲ್ಲಿ ಅಭ್ಯರ್ಥಿ/ಪ್ರತಿನಿಧಿಗಳಿಗೆ ಮೇ 13ರ ವರೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುವುದು ಈ ಬಾರಿಯ ವಿಶೇಷ.


Spread the love

About Laxminews 24x7

Check Also

ನೀಟ್ ಪರೀಕ್ಷಾ ಅಕ್ರಮ ಎಸಗಿದವರನ್ನು ಸುಮ್ಮನೆ ಬಿಡೋದಿಲ್ಲ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ

Spread the loveನವದೆಹಲಿ, ಜೂನ್ 16: NEET ವಿಷಯದಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವವರನ್ನು ಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಧರ್ಮೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ