Breaking News
Home / ರಾಜಕೀಯ / ನೌಕರರ ಮುಷ್ಕರ: ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್!

ನೌಕರರ ಮುಷ್ಕರ: ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್!

Spread the love

ಬೆಂಗಳೂರು: ಸರ್ಕಾರಿ ನೌಕರರ ಸಂಘದ ಬಳಿಕ ವೇತನ ಪರಿಷ್ಕರಣೆಗೆ ಸಿಡಿದೆದ್ದ KPTCL ನೌಕರರ ಸಂಘ ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್​ ಮಾಡಿ ಮುಷ್ಕರ ಮಾಡಲಿದೆ.

ಇದೀಗ ಮಾರ್ಚ್​ 21ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದು ಅದರ ಜತೆಗೆ ಈಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಒಕ್ಕೂಟ ಅನಿರ್ದಿಷ್ಟವಧಿ ಮುಷ್ಕರ ಮಾಡುವುದಾಗಿ ಕರೆ ಕೊಟ್ಟು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

 

‘ನಾಳೆಯಿಂದ ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಿ ಮುಷ್ಕರ ನಡೆಸಲು ನೌಕರರ ಸಂಘ ನಿರ್ಧಾರ ಮಾಡಿದ್ದು ಕೆಲಸಕ್ಕೆ ಸಂಪೂರ್ಣವಾಗಿ ಗೈರು ಹಾಜರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ. ಈಗಾಗಲೇ ನೌಕರರು ಮುಷ್ಕರ ಮಾಡುವುದಾಗಿ ಇಲಾಖೆಗೆ ಮಾಹಿತಿ ನೀಡಿದೆ. ಆದರೂ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ನಾಳೆಯಿಂದ ಅನಿರ್ದಿಷ್ಟವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಹಾಗಿದ್ರೆ ಕೆಪಿಟಿಸಿಎಲ್​ ನೌಕರರ ಬೇಡಿಕೆ ಏನು?

• ವೇತನ ಪರಿಷ್ಕರಣೆ ಆಗಿ ಸುಮಾರು 6 ವರ್ಷ ಆಗಿದೆ
• ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಅದು ಆಗಿಲ್ಲ
• ಈ ಕೂಡಲೇ ವೇತನ ಪರಿಷ್ಕರಣೆ ಮಾಡಬೇಕು
• ಸರ್ಕಾರಿ ನೌಕರರಿಗೆ ಮಧ್ಯಾಂತರ ಶೇಕಡಾ 17ರಷ್ಟು ವೇತನ ಪರಿಷ್ಕರಣೆ ಮಾಡಿದ್ದಾರೆ, ನಮಗೆ ಆಗಿಲ್ಲ
• KPTCL ಹಾಗೂ ಎಸ್ಕಾಂಗಳ ನೌಕರರು/ಅಧಿಕಾರಿಗಳು ನ್ಯಾಯಯುತ ಬೇಡಿಕೆ ವೇತನ ಪರಿಷ್ಕರಣೆ ಆಗಲೇಬೇಕು
• 01-04-2022 ರಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ