Breaking News
Home / ರಾಜಕೀಯ / ಅಪ್ಪ ಹಣ ಕೊಟ್ಟಿಲ್ಲ ಎಂದು ಮಗನನ್ನೇ ಕಿಡ್ನಾಪ್

ಅಪ್ಪ ಹಣ ಕೊಟ್ಟಿಲ್ಲ ಎಂದು ಮಗನನ್ನೇ ಕಿಡ್ನಾಪ್

Spread the love

ಬೆಂಗಳೂರು (ಜು.20): ತಂದೆಯ (Father) ಜೊತೆಗಿನ ವ್ಯವಹಾರ ವೈಷಮ್ಯಕ್ಕೆ ಮಗನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು (Accused) ಯಲಹಂಕ ಪೊಲೀಸರು 4 ಗಂಟೆಯಲ್ಲಿ ಬಂಧಿಸಿದ್ದಾರೆ‌. ಚಿತ್ರದುರ್ಗದಲ್ಲಿ (Chitradurga) ಟ್ರ್ಯಾಕ್​ ಮಾಡಿ ಬಂಧಿಸಿ ಕರೆತಂದಿದ್ದಾರೆ. ಕಲಬುರಗಿ ಮೂಲದ ರಮೇಶ್ ರಾಥೋಡ್ (Ramesh Rathod) (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23) ಹಾಗೂ ಹರೀಶ್ ಕುಮಾರ್ (24) ಬಂಧಿತ ಆರೋಪಿಗಳು.

4 ಗಂಟೆಯಲ್ಲಿ ಆರೋಪಿಗಳ ಬಂಧನ

ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ (ಈಶಾನ್ಯ) ಅನೂಪ್ ಎ ಶೆಟ್ಟಿ, ಆಂಧ್ರಪ್ರದೇಶ ಮೂಲದ ಉದ್ಯಮಿಯೊಬ್ಬನ ಜೊತೆ ವ್ಯವಹಾರ ವಿಚಾರವಾಗಿ ವೈಷಮ್ಯ ಹೊಂದಿದ್ದ ಇವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉದ್ಯಮಿ ಪುತ್ರ ಜಗದೀಶ್​ನನ್ನು ಅಪಹರಿಸಿದ್ದರು. ಬಳಿಕ ತಂದೆಗೆ (ಉದ್ಯಮಿ)‌ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಧ್ಯಾಹ್ನ 12.15 ರ ಸುಮಾರಿಗೆ ಅಪಹರಿಸಿದರು ಮತ್ತು ಸಂಜೆ 4 ಗಂಟೆಗೆ ಅವನನ್ನು ರಕ್ಷಿಸಲಾಯಿತು. ಪೊಲೀಸರು ಅದರ ಫಾಸ್ಟ್​ ಟ್ಯಾಗ್ ವಿವರಗಳನ್ನು ಬಳಸಿಕೊಂಡು ಅಪಹರಣಕಾರರ ವಾಹನವನ್ನು ಪತ್ತೆ ಹಚ್ಚಿದ್ದಾರೆ.

ತಂದೆ ಹಣ ನೀಡಿಲ್ಲ ಎಂದು ಮಗನ ಅಪಹರಣ

ಜಗದೀಶ್ ತಂದೆ ಸುರೇಶ್​ ಜೊತೆ ರಮೇಶ್​ ರಾಥೋಡ್​ ಹಣಕಾಸ ವ್ಯವಹಾರ ಹೊಂದಿದ್ದ. ಅವರ ಚಿಕ್ಕಪ್ಪ ದುಬೈಗೆ ತೆರಳಿದ್ದರು. ರಮೇಶ್​​ ರಾಥೋಡ್ ಅವರು ಸುರೇಶನಿಂದ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದಾನೆ. ಜೊತೆಗೆ ಸುರೇಶ್ ಮತ್ತು ಅವರ ಸಹೋದರನ ವಿರುದ್ಧ ಕಲಬುರಗಿಯಲ್ಲಿ ವಂಚನೆ ದೂರು ದಾಖಲಿಸಿದರು. ಪೊಲೀಸ್ ಕೇಸ್ ನಂತರ ರಾಥೋಡ್ ತನ್ನ ಹಣವನ್ನು ಹಿಂದಿರುಗಿಸಲು ಸುರೇಶ್ ನಿರಾಕರಿಸಿದ್ದಾರೆ.


Spread the love

About Laxminews 24x7

Check Also

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

Spread the love ಪಣಜಿ: ಝೋಸ್ಕಾ ಆಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಾಗಿ ಹೇಳಿ ಮಹಿಳೆಯೊಬ್ಬರು 2.71 ಲಕ್ಷ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ