Breaking News

ಮದ್ಯಪ್ರಿಯರಿಗೆ ಬಿಗ್ ಶಾಕ್ : ಇಂದಿನಿಂದ 2 ದಿನ ಎಣ್ಣೆ ಸಿಗೋದಿಲ್ಲ

Spread the love

ಬೆಂಗಳೂರು : ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ 44 ಗ್ರಾಮಪಂಚಾಯ್ತಿಗಳು, ಇತರೆ ಕಾರಣದಿಂದ ಬಾಕಿದ್ದ 13 ಗ್ರಾಮಪಂಚಾಯ್ತಿಗಳು ( Grama Panchayath Election ) ಸೇರಿದಂತೆ ಒಟ್ಟು 57 ಗ್ರಾಮ ಪಂಚಾಯ್ತಿಗಳಿಗೆ ಡಿಸೆಂಬರ್ 27 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಹಿನ್ನೆಲೆ ಡಿ.25 ರ ಸಂಜೆ 5 ಗಂಟೆಯಿಂದ ಡಿ.27 ರ ಸಂಜೆ 5 ಗಂಟೆವರೆಗೆ ಮದ್ಯ ಮಾರಾಟ ( Drink Sell ) ನಿಷೇಧಿಸಲಾಗಿದೆ.

 

ನಿಷೇಧಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಮದ್ಯಪಾನ ನಿಷೇಧಿಸಿದ್ದು, ಬಿಯರ್ ಬಾರಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಸಹ ಆದೇಶಿಸಲಾಗಿದೆ. ಈ ದಿವಸಗಳನ್ನು ಶುಷ್ಕ ದಿನಗಳೆಂದು ಘೋಷಿಸಲಾಗಿದೆ.

 

ಈ ಆದೇಶ ಗ್ರಾಮ ಪಂಚಾಯ್ತಿ ಉಪ ಚುನಾವಣೆ ನಡೆಯುವಂತ ರಾಜ್ಯದ ಇತರೆ ಜಿಲ್ಲೆಗಳ ಚುನಾವಣಾ ವ್ಯಾಪ್ತಿಯಲ್ಲಿಯೂ ಅನ್ವಯವಾಗಲಿದೆ. ಹೀಗಾಗಿ ಡಿಸೆಂಬರ್ 25 ರ ಸಂಜೆ 5 ಗಂಟೆಯಿಂದ ಡಿಸೆಂಬರ್ 27, 2021ರ ಸಂಜೆ 5ಗಂಟೆಯವರೆಗೆ ಎಣ್ಣೆ ಸಿಗೋದಿಲ್ಲ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ