ಹುಕ್ಕೇರಿ:ತಾಲೂಕಿನ ಅವರಗೊಳ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನಲೆ ತಾಯಿ ಹಾಗೂ ಎರಡು ಮಕ್ಕಳ ಜೊತೆ ಕಾಲುವೆಗೆ ಹಾರಿದ ಘಟನೆ ನಡೆದಿದೆ ಈ ಹಿಂದೆ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡಕೊಂಡಿದ್ದ ಪತಿರಾಯ ಕೊನೆಗೂ ಪತ್ನಿ ಗಲಾಟೆ ತೊಂದರೆ ಸಾಕಾಗಿ ಇಬ್ಬರೂ ಗಂಡು ಮಕ್ಕಳ ಜೊತೆಗೆ ಅವಳು ಕೂಡಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅವರಗೋಳ ಗ್ರಾಮದಲ್ಲಿ ನಡೆದಿದೆ ಮಾಲವ್ವಾ ಬಸವರಾಜ ಮರಬಸನ್ನವರ ವಯಸ್ಸು ೩೫
ಮಕ್ಕಳು ಸಿದ್ದಾರೂಡ ೧೨ ವರ್ಷದ ಬಾಲಕ ಹಾಗೂ ಗುರುಸಿದ್ದ ೫ ವರ್ಷದ ಬಾಲಕ ಯುವತಿಗೆ ಮನೆಯ ಗಲಾಟೆ ಕಲಹ ಜಗಳ ದಿನಾಲೂ ಅನುಭವಿಸಿ ತನ್ನ ಎರಡು ಮಕ್ಕಳ ಜೊತೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಲವ್ವಾ ತಂದೆ ಹೇಳಿದ್ದಾರೆ. ನನ್ನ ಮಗಳ ಮೊಮ್ಮಕ್ಕಳ ಸಾವಿಗೆ ಬಸವರಾಜನೆ ಕಾರಣ ಎಂದು ಪೊಲಿಸರ ಮುಂದೆ ಗಲಾಟೆ ಮಾಡಿದರು. ಇನ್ನೂ ಹೆಚ್ಚಿನ ತನಿಖೆಗಾಗಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸ್ಥಳಕ್ಕೆ ಹುಕ್ಕೇರಿ ಪಿಎಸ್ಐ ಗುಡಗನಟ್ಟಿ ಹಾಗೂ ರೆಡ್ಡಿ ಪತ್ತಾರ ಪೊಲಿಸರು ಶವವನ್ನು ಹೊರ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
