ಬೀದರ್: ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪ ಉತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಧಿಕ್ಕಾರದ ಬಿಸಿ ತಟ್ಟಿದೆ.
ಬಸವ ಭಕ್ತರ ಆಕ್ರೋಶಕ್ಕೆ ವೇದಿಕೆಯಿಂದ ಕಾಲ್ಕಿತ್ತ ಘಟನೆ ನಡೆದಿದೆ. ಲಿಂಗಾಯತರು ಅಂತಾ ಅಲ್ಲ, ನಾವೆಲ್ಲಾ ಹಿಂದೂಗಳು ಒಂದೇ.. ಪ್ರತ್ಯೇಕ ಧರ್ಮ ಯಾವುದೇ ಲಾಭಕ್ಕಾಗಿ ಬೇಡ. ನಾವೆಲ್ಲಾ ಹಿಂದೂಗಳ ರೀತಿ ಒಗ್ಗಟ್ಟಾಗಿ ಇರಬೇಕು ಎಂದಿದ್ದರು.
ಲಿಂಗಾಯತ ಸ್ವಾತಂತ್ರ್ಯ ಧರ್ಮಕ್ಕೆ ಮಾನ್ಯತೆ ಬೇಡ ಅನ್ನೋ ಅರ್ಥದಲ್ಲಿ ವಿಜಯೇಂದ್ರ ಹೇಳಿಕೆ ನೀಡಿದ್ದರು. ಈ ವೇಳೆ ಕೆಲ ಬಸವ ಭಕ್ತರು ವಿಜಯೇಂದ್ರ ಹೇಳಿಕೆಗೆ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ವೇದಿಕೆ ಮೇಲೆ ಬರಲು ಯತ್ನ ಮಾಡಿದ ಬಸವ ಭಕ್ತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದಿದೆ.
ಒಂದು ಕ್ಷಣ ಉತ್ಸವದ ವೇದಿಕೆ ಬಿಗುವಿನ ವಾತವರಣವಾಗಿ ನಿರ್ಮಾಣವಾಗಿತ್ತು. ಬಸವ ಭಕ್ತರು ಕೆರಳಿ ಆಕ್ರೋಶಗೊಂಡ ತಕ್ಷಣ ಪೊಲೀಸರು ಭದ್ರತೆಯಲ್ಲಿ ವೇದಿಕೆಯಿಂದ ತೆರಳಿದ್ದಾರೆ.
Laxmi News 24×7