Breaking News

ಜಗತ್ತಿನ ಹಸಿವು ತಣಿಸುವ ಅನ್ನದಾತನಿಗೆ ಸರ್ಕಾರದ ಅಸಡ್ಡೆ; ಹೋರಾಟಕ್ಕಿಳಿದ ರೈತ ಸಂಘ

Spread the love

ಬಿಸಿಲು ಮಳೆ ಎನ್ನದೇ ತನ್ನ ಜಮೀನಿನಲ್ಲಿ ಶ್ರಮವಹಿಸಿ ಜಗತ್ತಿನ ಹಸಿವು ತಣಿಸುವ ಕಾಯಕ ಅನ್ನದಾತನದ್ದು.‌ ಆದ್ರೆ ಅನ್ನದಾತನಿಗೆ ಅದೇಕೊ ಕಷ್ಟಗಳ ಸರಮಾಲೆ ತಪ್ಪಿದ್ದಲ್ಲಾ. ತನಗೆ ಏನೇ ಬೇಕಾದ್ರೂ ರೈತ ತಾನು ಹೋರಾಟ ಮಾಡಿಯೇ ಪಡೆಯಬೇಕಾಗಿರೋದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಮತ್ತೆ ರೈತರ ವಿವಿಧ ಸಮಸ್ಯೆ ಈಡೇರಿಸಲು ರೈತ ಸಂಘದಿಂದ ಅಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.

ಹೌದು…ರೈತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರಗಳು ವಿಫಲವಾದಾಗ ಅನ್ನದಾತ ಸಿಡಿದೆಳುತ್ತಾನೆ. ಬಸವನಾಡು ವಿಜಯಪುರ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಹೋರಾಟ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಕೂಡಗಿ NTPC ಯಲ್ಲಿ ಹಾರುಬೂದಿಯಿಂದಾಗಿ ಸುತ್ತಮುತ್ತಲಿನ ರೈತರ ಜಮೀನಿನ ಕುಡಿಯುವ ನೀರು ಹಾಗೂ ಬೆಳೆಗಳ ಮೇಲೆ ಬೂಧಿನಿಂತು ಸಾಕಷ್ಟು ನಷ್ಟ ಉಂಟಾಗಿರುವುದನ್ನು ಖಂಡಿಸಿ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಶಿಕ್ಷಣ ಕ್ಕೆ ಅನುಗುಣವಾಗಿ ಉದ್ಯೋಗ ಕೊಡಬೇಕು ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ನನ್ನ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಗ್ರಹಿಸಿದ್ದಾರೆ. ಅದೇ ರೀತಿ ಜಂಬಗಿ ಗ್ರಾಮದಲ್ಲಿ ಕೆರೆ ನೀರು ತುಂಬಬೇಕು ಜೊತೆಗೆ ಗ್ರಾಮದಲ್ಲಿಯ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ,ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡಬೇಕು ಇವುಗಳ ಜೊತೆಗೆ ಜಂಬಗಿಯಿಂದ ಅಹೆರಿಗೆ ಹೋಗುವ ದಾರಿಯೂ ಸುಮಾರು 30 ಲಕ್ಷ ರೂಗಳ ಪಿಆರ್‌ಡಿ ಅನುದಾನದಲ್ಲಿ ಮಾಡುತ್ತಿದ್ದು ಸಂಪೂರ್ಣ ಕಳಪೆ ಹಾಗೂ ಅಪೂರ್ಣಗೊಂಡಿತು ಅದನ್ನು ಸಂಪೂರ್ಣ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಅಲ್ಲದೇ ಈಗಾಗಲೇ ಬೇಸಿಗೆ ಪ್ರಾರಂಭ ವಾಗಿರುವುದರಿಂದ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಬೇಕು ಅದರಲ್ಲಿ ವಿಶೇಷವಾಗಿ ತಿಡಗುಂದಿ ಕೆರೆ ಹಾಗೂ ಚಡಚಣ ತಾಲೂಕಿಗೆ ಸಂಬಂಧಪಟ್ಟಂತೆ 35 36 ಡಿಸ್ಟ್ರಿಬ್ಯೂಟರ್ ಗಳಿಗೆ ನೀರು ಹರಿಸಿ ಬೋರಿಹಳ್ಳವನ್ನು ಕೂಡ ತುಂಬಬೇಕೆಂದು ಮನವಿ ಮಾಡಿದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಕೋಲಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ, ವಿಜಯಪುರ ತಾಲೂಕು ಅಧ್ಯಕ್ಷರಾದ ಅನಮೇಶ್ ಜಮಖಂಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಕೋಳಿ, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಒಟ್ಟಾರೆ ರೈತರು ತಮ್ಮ ಕಷ್ಟ ಕೇಳಿ ಸಮಸ್ಯೆಗಳನ್ನು ಪರಿಹರಿಸಲು ಮನಸ್ಸು ಮಾಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಸರ್ಕಾರ ಇನ್ನಾದ್ರೂ ರೈತರ ಕಷ್ಟಗಳನ್ನು ಪರಿಹರಿಸುವ ಮನಸ್ಸು ಮಾಡಬೇಕಿದೆ.


Spread the love

About Laxminews 24x7

Check Also

ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

Spread the loveಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ  ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ