ಶಿವಮೊಗ್ಗ, ಮಾ.31- ಕೋಳಿ ಮತ್ತು ಮೊಟ್ಟೆ ತಿನ್ನುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ, ಆ ಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಜನ ಸಾಮಾನ್ಯರು ಇನ್ನು ಮುಂದೆ ಕೋಳಿ ಮೊಟ್ಟೆ ಹೆಚ್ಚಾಗಿ ತಿನ್ನಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈವರೆಗೂ ಒಂದೇ ಒಂದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಜನ ಸಾಮಾನ್ಯರು ವದ್ಧಂತಿಗಳಿಗೆ ಕಿವಿಗೊಟ್ಟು ಅನಗತ್ಯವಾಗಿ ಈ ವಿಷಯದಲ್ಲಿ ಆತಂಕಕ್ಕೆ ಒಳಗಾಗಬಾದರು ಎಂದು ಮನವಿ ಮಾಡಿದರು.
ಶಿವಮೊಗ್ಗದ ಕಿಮ್ಸ್ ಪ್ರಯೋಗಾಲಯದಲ್ಲಿ ಈವರೆಗೂ 67 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 62ರಲ್ಲಿ ಸೋಂಕಿಲ್ಲ ಎಂದು ದೃಢಪಟ್ಟಿದೆ. ಉಳಿದ 5 ಮಾದರಿಗಳಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ ಎಂದು ಸ್ಪಷ್ಟವಾಗಿದೆ. ಹೆಚ್ಚಿನ ಪರೀಕ್ಷೆ ನಡೆಸುತ್ತಿದ್ದೇವೆ. ನಿನ್ನೆ ಶಿವಮೊಗ್ಗದ ಖ್ಯಾತ ವೈದ್ಯರಿಗೆ ಸೋಂಕಿದೆ ಎಂದು ವದ್ಧಂತಿ ಹಬ್ಬಿತ್ತು. ಇಂತದಕ್ಕೆಲ್ಲಾ ಹೆಚ್ಚು ಗಮನ ಕೊಡಬೇಡಿ. ಶಿವಮೊಗ್ಗದಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ಹೇಳಿದರು.
ದೆಹಲಿಯ ಜಾಮೀಯಾ ಮಸೀದಿಯ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮತ್ತು ಅಲ್ಲಿಗೆ ಹೋಗಿ ಬಂದವರ ಜೊತೆ ಸಂಪರ್ಕ ಸಾಧಿಸಿದ 21 ಮಂದಿಯನ್ನು ಗುರುತಿಸಿದ್ದೇವೆ. ಅವರಲ್ಲಿ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿಯ ಒಬ್ಬರು ಸೇರಿ ಮೂರು ಮಂದಿ ಹೊರ ಜಿಲ್ಲೆಯವರಿದ್ದಾರೆ. ಒಟ್ಟು 21 ಮಂದಿಯಲ್ಲಿ 10 ಮಂದಿಗೆ ಸೋಂಕಿಲ್ಲ ಎಂದು ದೃಢಪಟ್ಟಿದೆ. 11 ಮಂದಿಯನ್ನೂ ಈಗಲೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ ಎಂದು ಹೇಳಿದರು.
ಹಕ್ಕಿಜ್ವರದ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲು ಕೋಳಿ ಮತ್ತು ಮೊಟ್ಟೆಯನ್ನು ನಿಷೇಧ ಮಾಡಿದ್ದು ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಮಾತ್ರ. ಹರಿಹರ ತಾಲ್ಲೂಕಿನ ಬನ್ನಿಕೋಡ್ ಗ್ರಾಮದಲ್ಲಿ ಮೊದಲು ಹಕ್ಕಿಜ್ವರ ಕಾಣಿಸಿಕೊಂಡಿತ್ತು. 2174 ಕೋಳಿಗಳನ್ನು ಗುಂಡಿ ತೊಡಿ ಮುಚ್ಚಿ ಹಾಕಲಾಗಿತ್ತು. ಈಗಲೂ ಬನ್ನಿಕೊಡ್ ಗ್ರಾಮದ ಸುತ್ತ ಮುತ್ತಾ 10 ಕಿ.ಮೀ.ವ್ಯಾಪ್ತಿಯಲ್ಲಿ ಕೋಳಿಯನ್ನು ನಿಷೇಧಿಸಲಾಗಿದೆ.
ಅಲ್ಲಿಂದ ಶಿವಮೊಗ್ಗಕ್ಕೆ ಸೋಂಕು ಹರಡಬಾರದು ಎಂದು ನಿಷೇಧ ಹೇರಲಾಗಿತ್ತು. ಈಗ ಹಕ್ಕಿಜ್ವರ ಇಲ್ಲವಾಗಿದೆ.. ಹಾಗಾಗಿ ಕೋಳಿ ಮತ್ತು ಮೊಟ್ಟೆ ಮೇಲಿನ ನಿಷೇಧವನ್ನು ವಾಪಾಸ್ ಪಡೆದಿದ್ದೇವೆ. ಕೊರೊನಾ ತಡೆಗೆ ಕೋಳಿ ಮತ್ತು ಮೊಟ್ಟೆ ಔಷಧಿಯಾಗಿಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಕೋಳಿ ತಿನ್ನುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಜನ ಯಾವುದೆ ಅಂಜಿಕೆ ಇಲ್ಲದೆ ಕೋಳಿ ಮತ್ತು ಮೊಟ್ಟೆ ಸೇವನೆ ಮಾಡಿ ಎಂದು ಸಲಹೆ ನೀಡಿದರು.
ರಾಜ್ಯಾದ್ಯಂತ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಇಂದಿನಿಂದ ಪ್ರತಿ ಮನೆಗೆ ಒಂದು ಲೀಟರ್ ಹಾಲನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಹಾಲನ್ನು ಸ್ವಯಂ ಸೇವಕರು ಹಾಗೂ ಸರ್ಕಾರಿ ಅಧಿಕಾರಿಗಳ ಮೂಲಕ ಬಡವರ ಮನೆ ಬಾಗಿಲಿದೆ ತಲುಪಿಸಲಾಗುವುದು ಎಂದರು.
ಹಣ್ಣು ತರಕಾರಿಗಳ ಮಾರಾಟಕ್ಕೆ ಟೆಂಪೋಟ್ರಾವಲರ್ ಮತ್ತು ತಳ್ಳುಗಾಡಿಗಳಿಗೆ ಅನುಮತಿ ನೀಡಲಾಗುತ್ತಿದೆ. ಅಲ್ಲಿ ದರ ಪಟ್ಟಿ ಪ್ರದರ್ಶನ ಮಾಡಬೇಕು, ಹೆಚ್ಚಿನ ದರ ನಿಗದಿ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಅನುಮತಿ ಪಡೆಯದ ಅಂಗಡಿಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕೇಲವರು ಸೇವೆ ಮಾಡಬೇಕೆಂದು ಮುಂದೆ ಬಂದಿದ್ದಾರೆ. ಅವರಿಗೆ ಜಿಲ್ಲಾಡಳಿತ ಅನುಮತಿ ನೀಡಲಿದೆ. ಇಂದು ಶುಕ್ರವಾರ, ಬರುವ ಭಾನುವಾರ ಯಾವ ಸಮುದಾಯಾದರೂ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಬಾರದು. ನಿನ್ನೆ ಶ್ರೀರಾಮ ನವಮಿಯನ್ನು ಎಲ್ಲರೂ ಮನೆಯಲ್ಲೇ ಇದ್ದು ಆಚರಿಸಿದ್ದಾರೆ. ಅದೇ ರೀತಿ ಲಾಕ್ ಡೌನ್ ಮುಗಿಯುವವರೆಗೂ ಎಲ್ಲರೂ ಮನೆಯಲ್ಲೇ ಇರಬೇಕು ಎಂದರು.
ದೆಹಲಿಯ ಜಾಮೀಯಾ ಮಸೀದಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದರ ಬಗ್ಗೆ ಆಕ್ಷೇಪಣೆಗಳಿವೆ. ಸೋಂಕು ನಿಯಂತ್ರಣಕ್ಕೆ ಬರುವ ಹಂತದಲ್ಲಿ ಆ ಕಾರ್ಯಕ್ರಮದ ಅಗತ್ಯ ಇತ್ತಾ. ಅವರೇನೂ ಸೂಸೈಡ್ ಬಾಂಬರ್ಸ್ ಗಳ. ಸೋಂಕು ಹರಡಲೇಬೇಕು ಎಂಬ ದುರುದ್ದೇಶ ಅಡಗಿತ್ತಾ ಎಂದು ಅವರು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಸೋಂಕು ಹರಡುವುದನ್ನು ತಡೆಯುವುದು ಸರ್ಕಾರದ ಉದ್ದೇಶ. ಧರ್ಮರಾಜಕರಾಣವನ್ನು ನಾವು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.