ಬೆಂಗಳೂರು. ಕೆಎಂಎಫ್ ಅಧ್ಯಕ್ಷ ಹಾಗೂ ಗೋಕಾಕ ತಾಲುಕಿನ ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು. ಕೆಎಂಎಫ್ನ ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ಬಾಲಚಂದ್ರ ಜಾರಕಿಜೊಳಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶತಾಯುಷಿ ಆಗಲೆಂದು ಹಾರೈಸಿದರು.
Read More »ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ನಿರ್ದೇಶಕ ಸನತ ಜಾರಕಿಹೊಳಿ.
ಗೋಕಾಕ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ಜಾಗತಿಕಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಕಲ್ಪನಾ ಹೇಳಿದರು. ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಯೋಜನಾ ಘಟಕದಿಂದ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮಾನವನ ಬದುಕಿನಲ್ಲಿ ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಸಂಶೋಧಕರಾಗಿ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು …
Read More »ಲೈಂಗಿಕ ಕಿರುಕುಳ ಪ್ರಕರಣವನ್ನು ಮುಚ್ಚಿಡಲು ಅವಕಾಶ ನೀಡಲಾಗದು: ಸುಪ್ರೀಂಕೋರ್ಟ್
ನವದೆಹಲಿ: ‘ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಯಾವುದೇ ರೀತಿಯಲ್ಲೂ ಮುಚ್ಚಿಡಲು ಸಾಧ್ಯವಾಗದು’ ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಜಾರಿಗೊಳಿಸಿರುವ ಆಂತರಿಕ ಇಲಾಖಾ ತನಿಖೆಯನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ನೀಡಿದೆ. ಮಧ್ಯಪ್ರದೇಶದ ನಿವೃತ್ತ ನ್ಯಾಯಾಧೀಶ ಶಂಭೂ ಸಿಂಗ್ ರಘುವಂಶಿ ಅವರು ಕಿರಿಯ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ವ್ಯಾಟ್ಸ್‌ಆಯಪ್‌ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳುಹಿಸಿದ್ದರು. ಈ ಸಂಬಂಧ ಅಧಿಕಾರಿಯು ದೂರು ಸಲ್ಲಿಸಿದ್ದು, …
Read More »ಜಲ್ಲಿಕಟ್ಟು ಕ್ರೀಡೆ ವೇಳೆ ಸಂಭವಿಸಿದ ದುರಂತ: ನಾಲ್ವರ ಸಾವು
ಚೆನ್ನೈ : ತಮಿಳುನಾಡಿನ ಜನಪದ ಕ್ರೀಡೆಯಾಗಿರುವ ಜಲ್ಲಿಕಟ್ಟು ಸ್ಪರ್ಧೆ ವೇಳೆ ದುರಂತ ಸಂಭವಿಸಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಶಿವಗಂಗಾ ಜಿಲ್ಲೆಯ ಅರಲಿಪಾರಯಿ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳೀಯ ದೇವಸ್ಥಾನದ ಉತ್ಸವದ ಅಂಗವಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ 30 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅಜಿತ್ , ಮಾರುತು , ಸೇತು ಮತ್ತು ಮಹೇಶ್ ಎನ್ನುವವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ . ಇನ್ನು …
Read More »ಮಹಾರಾಷ್ಟ್ರದಲ್ಲಿ 10,12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕ ಪ್ರಕಟ
ಪುಣೆ,ಫೆಬ್ರವರಿ 27: ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.ಹಾಗಿದ್ದರೂ ಪ್ರೌಢಶಿಕ್ಷಣ ಮಂಡಳಿ 10 ಹಾಗೂ 12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ 10 (ಎಸ್‌ಎಸ್‌ಸಿ) ಹಾಗೂ 12ನೇ ತರಗತಿ (ಎಚ್‌ಎಸ್‌ಸಿ) ಪರೀಕ್ಷೆಗಳು ಏ. 23ರಿಂದ ಮೇ 21ರ ವರೆಗೆ ನಡೆಯಲಿವೆ ಎಂದು ಮಂಡಳಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ನಾವು ಫೆಬ್ರವರಿ 16 ರಂದು ಪರೀಕ್ಷೆಯ ಪ್ರಸ್ತಾವಿತ ದಿನಾಂಕಗಳನ್ನು ಘೋಷಿಸಿದ್ದೆವು ಮತ್ತು ತಜ್ಞರಿಂದ …
Read More »ಕಂಗನಾ-ಹೃತಿಕ್ ಕೇಸ್: ವಿಚಾರಣೆಗೆ ಹಾಜರಾದ ‘ಕ್ರಿಶ್’ ಹೀರೋ
ಮಹಾರಾಷ್ಟ್ರ: 5 ವರ್ಷ ಹಳೆಯ ಕೇಸ್ ಒಂದರಲ್ಲಿ ಹೃತಿಕ್ ರೋಷನ್ ಇಂದು ಮುಂಬೈ ಪೊಲೀಸ್ ಸ್ಟೇಷನ್ಗೆ ಬಂದು ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ಧಾರೆ. 2016ರಲ್ಲಿ ನಟ ಹೃತಿಕ್ ರೋಷನ್ ಮುಂಬೈ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದ್ರು. 2013ರಿಂದ 2014ರವರೆಗೆ ನನ್ನ ಹೆಸರಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ, ಕಂಗನಾ ಜೊತೆ ಯಾರೋ ಮಾತನಾಡ್ತಿದ್ಧಾರೆ ಅಂತ ದೂರಿದ್ದರು. ಆದ್ರೆ ಕಂಗನಾ ಮಾತ್ರ ಹೃತಿಕ್ ನನ್ನ ಜೊತೆ ಪ್ರೀತಿಯ …
Read More »ಫಾಸ್ಟ್‌ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
ಫಾಸ್ಟ್‌ಟ್ಯಾಗ್ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಶುಕ್ರವಾರ (ಫೆ. 26) ಸುಮಾರು 104 ಕೋಟಿ ರೂ. ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ. ಫೆಬ್ರವರಿ 16, 2021 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಬಳಕೆದಾರರ ಶುಲ್ಕವನ್ನು ಕಡ್ಡಾಯಗೊಳಿಸಿದ ನಂತರ, ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ. “ಈ ವಾರದಲ್ಲಿ ಟೋಲ್ ಸಂಗ್ರಹವು ಪ್ರತಿದಿನ 100 ಕೋಟಿ ರೂ.ಗಳಿಗಿಂತ …
Read More »ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸಂಚಾರ ನಿಷೇಧ
ನವದೆಹಲಿ: ಮಾರ್ಚ್ 31ರ ತನಕ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸಂಚಾರ ನಿಷೇಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಆದೇಶಿಸಿದೆ. ಕಳೆದ ವರ್ಷ ಮಾರ್ಚ್ 23ರ ಬಳಿಕ ಅಂತಾರಾಷ್ಟ್ರೀಯ ವಿಮಾನಯಾನ ಸಂಚಾರವನ್ನು ಕೋವಿಡ್-19 ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಈಗ ಮಾರ್ಚ್ 31ರ ತನಕ ಮುಂದುವರಿಸಿದೆ ಎಂದು ಡಿಜಿಸಿಎ ತಿಳಿಸಿದೆ. ವಿಶೇಷ ವಿಮಾನ ಹಾಗೂ ಸರಕು ಸಾಗಾಣೆಗೆ ಈ ನಿಷೇಧ ಅನ್ವಯ ಆಗಲ್ಲ. ನಿಗದಿತ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಜಿಸಿಎ …
Read More »ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ.. ಥೂ ಎಂದು ಸರ್ಕಾರಕ್ಕೆ ಉಗಿತಿರೋ ಜನ…
ನವದೆಹಲಿ: ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು ವಾಹನ ಸವಾರರಿಗೆ ಹೊರೆಯಾಗುತ್ತಿದೆ. ಮೂರು ದಿನಗಳ ಬಳಿಕ ಮತ್ತೆ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಡೀಸೆಲ್ ದರದಲ್ಲಿ 15 ಪೈಸೆ ಏರಿಕೆಯಾಗಿದೆ. ಹೌದು..ಭಾರತದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 24 ರಿಂದ 15 ಪೈಸೆಯಷ್ಟು ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 91.17 ರೂ. ಗೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 81.47 ರೂ. ಗೆ ಏರಿಕೆಯಾಗಿದೆ. ಇನ್ನು …
Read More »ಕಾಂಗ್ರೆಸ್ ನಾಯಕರ ಹೆಸರು ಹೇಳಿ ಲೋನ್ ಕೊಡಿಸುವುದಾಗಿ ನಂಬಿಸಿ ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ಕಾಂಗ್ರೆಸ್ ನಾಯಕಿಯೇ ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ: ಕಾಂಗ್ರೆಸ್ ನಾಯಕರ ಹೆಸರು ಹೇಳಿ ಲೋನ್ ಕೊಡಿಸುವುದಾಗಿ ನಂಬಿಸಿ ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ಕಾಂಗ್ರೆಸ್ ನಾಯಕಿಯೇ ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಕಾರ್ಯಕರ್ತೆ ಪೂರ್ಣಿಮಾ ಸವದತ್ತಿ ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದಾಳೆ ಎನ್ನುವ ಆರೋಪ ಹೊರಿಸಲಾಗಿದೆ. ಈ ಕುರಿತು ಜನರು ಪೊಲೀಸ್ ದೂರು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕಪ್ಪುಹಣದಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆ ವಂಚಿಸಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿ ಲೋನ್, ಸೈಟ್ ಹೋಮ್, ಹೋಮ್ …
Read More »
Laxmi News 24×7