ಚೆನ್ನೈ: ಸಮುದ್ರದಲ್ಲಿ ದ್ರವ ತುಂಬಿದ ಕೆಲವು ಬಾಟಲಿಗಳು ತೇಲಿ ಬಂದಿದ್ದನ್ನು ನೋಡಿದ ಮೀನುಗಾರರು ಇವು ವಿದೇಶಿ ಮದ್ಯ ಎಂದು ಸೇವನೆ ಮಾಡಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ. ಆದರೆ ಇದು ಅವರ ಜೀವಕ್ಕೆ ಮುಳುವಾಗಿದೆ. ಅದರಲ್ಲಿ ಇದ್ದುದು ಮದ್ಯವಾಗಿರದೇ ಯಾವುದೇ ವಿಷಪೂರಿತ ದ್ರವವಾಗಿತ್ತು. ಅದನ್ನು ಕುಡಿಯುತ್ತಿದ್ದಂತೆಯೇ ಮೂವರು ಮೀನುಗಾರರು ಮೃತಪಟ್ಟಿದ್ದಾರೆ. ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಅಂಥೋನಿಸ್ವಾಮಿ (38) ಅರೋಕಿಯಾ ಪ್ರೋಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು …
Read More »ನಂಗೆ ಬೇಕು. ನಂಗೆ ಬೇಕು. ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್!
ಹನುಮಾನ್‌ಗಢ (ರಾಜಸ್ಥಾನ): ವಸ್ತುಗಳನ್ನು, ಅಂಗಡಿಗಳನ್ನು ಹರಾಜು ಮಾಡುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಅಚ್ಚರಿ ಎನ್ನುವಂಥ ದರದಲ್ಲಿ ಅವುಗಳು ಹರಾಜು ಆಗುವುದೂ ಇದೆ. ಅದರಲ್ಲಿಯೂ ದೇವರ ಸನ್ನಿಧಿಯಲ್ಲಿ ಇಟ್ಟಿರುವ ವಸ್ತುಗಳು 2-3 ಪಟ್ಟೆ ಹೆಚ್ಚಿಗೆ ಹಣಕ್ಕೆ ಹರಾಜಾಗುವುದು ಹೊಸ ವಿಷಯವೆನಲ್ಲ. ಆದರೆ ಅಚ್ಚರಿಯೆಂದರೆ, ಇಲ್ಲೊಂದು ಮದ್ಯದಂಗಡಿ ಮಾಲೀಕರೇ ಶಾಕ್ ಆಗುವಷ್ಟು ಹೆಚ್ಚುವರಿ ದರದಲ್ಲಿ ಹರಾಜು ಆಗಿದೆ. ಅಂಥದ್ದೊಂದು ಅಚ್ಚರಿ ನಡೆದಿರುವುದು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ನೋಹಾರ್ ಎಂಬ ಗ್ರಾಮದ ಮದ್ಯದ ಅಂಗಡಿಯೊಂದು …
Read More »2020ರಲ್ಲಿ ದೇಶದ 10 ಸಾವಿರ ಕಂಪನಿಗಳು ಬಂದ್! ಕರ್ನಾಟಕದಲ್ಲಿ ಎಷ್ಟು ಗೊತ್ತಾ?
ನವದೆಹಲಿ : 2020ರ ಏಪ್ರಿಲ್ ನಿಂದ ಈ ವರ್ಷದ ಫೆಬ್ರವರಿವರೆಗೆ ದೇಶದಲ್ಲಿ 10,000 ಕ್ಕೂ ಹೆಚ್ಚು ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು 10,113 ಕಂಪನಿಗಳು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248(2) ರ ಅಡಿಯಲ್ಲಿ ಸ್ಥಗಿತವಾಗಿವೆ.ಸೆಕ್ಷನ್ 248(2) ಪ್ರಕಾರ ಕಂಪನಿಗಳು ಸ್ವಯಂ ಪ್ರೇರಿತವಾಗಿ …
Read More »IPL 2021: ಆರ್‌ಸಿಬಿ ಆಟಗಾರರ ಫಿಟ್‌ನೆಸ್ ಪರೀಕ್ಷೆ ಆರಂಭ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಭಾರತದಲ್ಲಿ ಬಯೋಬಬಲ್ ವ್ಯವಸ್ಥೆಯಲ್ಲಿ ನಡೆಯಲಿರುವ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಆಟಗಾರರಿಗೆ ತಾಲೀಮು ಆರಂಭಿಸಿದೆ. ಮಂಗಳವಾರ ಪ್ರಕಾಶ್ ಪಡುಕೋಣೆ-ರಾಹುಲ್ ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತಂಡದ ಯುವ ಆಟಗಾರರ ಫಿಟ್‌ನೆಸ್ ಫರೀಕ್ಷೆ ನಡೆಯಿತು. ಆಧುನಿಕ ತಂತ್ರಜ್ಞಾನದ ಸಲಕರಣೆಗಳು ಇರುವ ಇಲ್ಲಿಯ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಆಟಗಾರರ ಎಲುವು ಸಾಂದ್ರತೆ, …
Read More »ಬೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ ಮನೆ ಮೇಲೆ ಎಸಿಬಿ ದಾಳಿ
ಯಾದಗಿರಿ: ನಗರದ ಬೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆಯೇ ಮೂರು ಕಡೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ₹1.71 ಲಕ್ಷ ನಗದು, 800 ಗ್ರಾಂ ಚಿನ್ನ, 1,362 ಗ್ರಾಂ ಬೆಳ್ಳಿ, ಯಾದಗಿರಿಯಲ್ಲಿ ಮೂರಂತಸ್ತಿನ ಮನೆ, ಇನ್ನುಳಿದ ಕಡೆ …
Read More »BIG NEWS: ಭಾರತದಿಂದ ಪಾಕಿಸ್ತಾನಕ್ಕೆ ಉಚಿತ ಲಸಿಕೆ
ನವದೆಹಲಿ: ಪಾಕಿಸ್ತಾನಕ್ಕೆ ಭಾರತದಲ್ಲಿ ಉತ್ಪಾದಿಸಲಾದ ಕೋವಿಡ್ ಲಸಿಕೆಯನ್ನು ರವಾನೆ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ಪಾಕ್ ಗೆ ನೀಡಲಾಗುತ್ತದೆ. ಆಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸಿದ ಬರೋಬ್ಬರಿ 16 ಮಿಲಿಯನ್ ಡೋಸ್ ಲಸಿಕೆಯನ್ನು ಮಾರ್ಚ್ ಮಧ್ಯದಲ್ಲಿ ಪಾಕಿಸ್ತಾನಕ್ಕೆ ಕಳಿಸಲಾಗುವುದು. ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಲಸಿಕೆಯ ಮೊದಲ ಬ್ಯಾಚ್ ಈ ತಿಂಗಳಲ್ಲಿ ರವಾನಿಸಲಾಗುತ್ತದೆ. ಜೂನ್ ವೇಳೆಗೆ ಲಸಿಕೆ ಇತರೆ ಬ್ಯಾಚ್ ಕಳಿಸಲಾಗುವುದೆಂದು ಪಬ್ಲಿಕ್ ಅಕೌಂಟ್ಸ್ ಕಮಿಟಿಯಿಂದ …
Read More »ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?
ದೆಹಲಿ: ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಮೂರು ರಾಜ್ಯಗಳಲ್ಲಿ ಪ್ರಸ್ತುತ ಆಡಳಿತ ವಹಿಸಿರುವ ರಾಜ್ಯಗಳೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಅಸ್ಸಾಂನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶಗಳು ತಿಳಿದುಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ …
Read More »ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ
ನವದೆಹಲಿ: ದೇಶದಲ್ಲಿ ಕಳೆದ ತಿಂಗಳು ವಿಮಾನಯಾನ ಕೈಗೊಳ್ಳುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ ಎಂದು ಡಿಜಿಸಿಎ ವರದಿ ಆಧರಿಸಿ ಐಸಿಆರ್‌ಎ ಹೇಳಿದೆ. ಪ್ರಯಾಣ ನಿರ್ಬಂಧ ಮತ್ತು ವಿಮಾನ ಪ್ರಯಾಣದಲ್ಲಿ ಇರುವ ಕೆಲವೊಂದು ನಿಯಮಗಳಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಫೆಬ್ರುವರಿ ತಿಂಗಳಿನಲ್ಲಿ ಒಟ್ಟಾರೆ ಶೇ 37 ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ. ಫೆಬ್ರುವರಿ ತಿಂಗಳಿನಲ್ಲಿ ದೇಶೀಯ ವಿಮಾನದಲ್ಲಿ ಒಟ್ಟು 78 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಆದರೆ ಜನವರಿ 2021ಕ್ಕೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ …
Read More »‘ನಾನು ನಿರಪರಾಧಿ, ಅಪರಾಧಿಯಲ್ಲ’ ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ
ಬೆಂಗಳೂರು: ಸಿಡಿ ಹೊರಬಂದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಳಿಕ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ‘ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ …
Read More »32 ವರ್ಷ ಕಲ್ಲು ತಿಂದೇ ಬದುಕುತ್ತಿದ್ದಾನೀತ, ವರ್ಷಗಳ ಹೊಟ್ಟೆನೋವಿಗಿದು ಔಷಧವಾಯ್ತಂತೆ!
ಮುಂಬೈ: ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಗಾದೆಮಾತಿದೆ. ಚಿಕ್ಕಚಿಕ್ಕ ವಿಷಯಕ್ಕೂ ಕಿರಿಕ್ ಮಾಡುತ್ತಿದ್ದರೆ, ಪತ್ನಿ ಮಾಡಿದ ಎಲ್ಲದರಲ್ಲಿಯೂ ತಪ್ಪು ಹುಡುಕುತ್ತಿದ್ದರೆ ಅಂಥ ಗಂಡನಿಗೆ ಹೀಗೆ ಹೇಳುವುದುಂಟು. ಅಂದರೆ ಕಲ್ಲು ಇಲ್ಲಿ ನೆಗೆಟಿವ್ ಚಿಹ್ನೆ ತೋರಿಸುತ್ತದೆ. ಆದರೆ ಇಲ್ಲೊಬ್ಬ ಭೂಪ ನಿಜವಾಗಿಯೂ ಕಲ್ಲನ್ನು ತಿಂದೇ ಜೀವಿಸುತ್ತಿದ್ದಾನೆ. ಅದೂ ಒಂದೆರಡು ತಿಂಗಳೋ, ವರ್ಷವೋ ಅಲ್ಲ… ಬರೋಬ್ಬರಿ 32 ವರ್ಷ! ಆಹಾರದ ಬದಲಿಗೆ ಪ್ರತಿ ದಿನ 250 ಗ್ರಾಂ ಕಲ್ಲನ್ನು ಆಹಾರವಾಗಿ ತಿಂದು …
Read More »
Laxmi News 24×7