Breaking News
Home / ರಾಷ್ಟ್ರೀಯ (page 35)

ರಾಷ್ಟ್ರೀಯ

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ; ಶೆಟ್ಟರ್

ಹುಬ್ಬಳ್ಳಿ : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ನಾವು ಏನೂ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.   ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬುದಕ್ಕೆ ಗುಪ್ಪಿ ಶಾಸಕರ ಬಹಿರಂಗ …

Read More »

ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಅದು ಸಿಕ್ಕೇ ಸಿಗುತ್ತದೆ ಎಂಬ ಅತೀವ ಆತ್ಮವಿಶ್ವಾಸದಲ್ಲಿದ್ದ ಸುಮಲತಾ ಅಂಬರೀಶ್(Sumalatha Ambareesh) ಅವರಿಗೆ ಭಾರೀ ನಿರಾಸೆಯಾಗಿದೆ. ತಮ್ಮ ಮುಂದಿನ ನಡೆ ಬಗ್ಗೆ ಅವರು ಇದುವರೆಗೆ ಏನೂ ಹೇಳಿಲ್ಲ, ಅವರ ಆಪ್ತರಾಗಿರುವ ಶಶಿಕುಮಾರ್ ಹನಕೆರೆ ಮಾತಾಡಿದ್ದಾರೆ. ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ (unconditional support) ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ. ಬಿಜೆಪಿ ನಾಯಕರಿಗೆ …

Read More »

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಫಿಕ್ಸ್

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ನಾಳೆ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ.   ಯಾವುದೇ ಷರತ್ತು ಇಲ್ಲದೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಜನಾರ್ದನ ರೆಡ್ಡಿ ಸಮಾಲೋಚನೆ ನಡೆಸಿದ್ದರು.

Read More »

ಸಿದ್ದರಾಮಯ್ಯ ಇಳಿಸುವವರು ಕಾಂಗ್ರೆಸ್‌ನಲ್ಲೇ ಇದ್ದಾರೆ: ಆರ್‌.ಅಶೋಕ

ಬೆಂಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವವರು ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಾರೆ. ಅಲ್ಲಿ ಐವರು ಛಾಯಾ ಮುಖ್ಯಮಂತ್ರಿಗಳಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸದಿದ್ದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾಗುತ್ತದೆ’ ಎಂಬ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕದ ಕಾಂಗ್ರೆಸ್ ಒಡೆದ ಮನೆಯಾಗಿದೆ’ ಎಂದರು.   ‘ಮುಖ್ಯಮಂತ್ರಿಯವರ ಕಾಲೆಳೆಯಲು ಬೇರೆಯವರು …

Read More »

ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಎಚ್​​ಡಿಡಿ ದೂರು;

ಹಾಸನ: ಗಂಭೀರ ಸ್ವರೂಪದ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಹಾಸನ ಜಿಲ್ಲಾಧಿಕಾರಿ (Hassan DC ) ಹಾಗೂ ಚುನಾವಣಾಧಿಕಾರಿ ಸತ್ಯಭಾಮಾ (Sathyabhama) ವಿರುದ್ಧ ಮಾರ್ಚ್ 20ರಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Deve gowda) ಅವರು ದೂರು ನೀಡಿದ್ದಾರೆ.ಉಸ್ತುವಾರಿ ಸಚಿವರ (Minister Rajanna) ಅಣತಿಯಂತೆ ಮಾತ್ರ ಸತ್ಯಭಾಮಾ ಕೆಲಸ ಮಾಡುತ್ತಾರೆ. ಜನರ ಜತೆ ಡಿಸಿ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.   ಜಿಲ್ಲಾಧಿಕಾರಿಗಳ ವಿರುದ್ಧ …

Read More »

ಮಳೆ ಪ್ರಮಾಣ ಕಡಿಮೆ ಬತ್ತಿದ ಮಲಪ್ರಭೆ; ಬಾಯಾರಿದ ಜನತೆ

ರಾಮದುರ್ಗ: ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಮಲಪ್ರಭಾ ನದಿ ಬತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಯಲ್ಲಿ ನೀರು ಆಳಕ್ಕೆ ಇಳಿದಿದೆ. ಇದರಿಂದ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಏಪ್ರಿಲ್‌ ಕೊನೆಯ ವಾರಕ್ಕೆ ಸಮಸ್ಯೆ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ.   ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲವಾದ ಮಲಪ್ರಭೆ ಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆಯಡಿ ಒಳಪಡುವ ಒಟ್ಟು …

Read More »

ರಸ್ತೆಗೆ ಬಂದ ಒಂಟಿಸಲಗ

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಡ- ಬೀಡಿ ರಸ್ತೆಯ (ಬೆಳಗಾವಿ- ತಾಳಗುಪ್ಪ ರಾಜ್ಯ ಹೆದ್ದಾರಿ) ಬೇಕವಾಡ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಒಂಟಿಸಲಗ ಕಾಣಿಸಿಕೊಂಡಿತು. ಆನೆ ಜುಂಜವಾಡ- ಬೇಕವಾಡ ಮಧ್ಯದಲ್ಲಿ ರಸ್ತೆ ದಾಟಿ ಜುಂಜವಾಡ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಗಳಲ್ಲಿ ನುಗ್ಗಿದೆ.   ಆನೆ ಕಂಡು ಜನ ಅದರ ಫೋಟೊ, ವಿಡಿಯೊ ಮಾಡಿಕೊಳ್ಳಲು ಮುಂದಾದರು. ಇದರಿಂದ ಸ್ಥಳದಲ್ಲಿ ಜನಜಂಗುಳಿ ಏರ್ಪಟ್ಟಿತು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಆನೆಯನ್ನು …

Read More »

ಚಂದ್ರಗ್ರಹಣ 2024: ಹೋಳಿಯಲ್ಲಿ ಚಂದ್ರಗ್ರಹಣದ ನೆರಳು, ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?

ಬೆಂಗಳೂರು: 2024 ರ ಮೊದಲ ಚಂದ್ರಗ್ರಹಣವು ಮಾರ್ಚ್ 25 ರಂದು ಸಂಭವಿಸಲಿದೆ. ಈ ಬಾರಿ ಚಂದ್ರಗ್ರಹಣ ಮತ್ತು ಹೋಳಿ ಎರಡೂ ಒಟ್ಟಿಗೆ ಸಂಭವಿಸಲಿದೆ. ಅಂದರೆ ಹೋಳಿಯು ಚಂದ್ರಗ್ರಹಣದ ನೆರಳಿನಲ್ಲಿ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, 100 ವರ್ಷಗಳ ನಂತರ ಹೋಳಿಯಲ್ಲಿ ಮತ್ತೆ ಚಂದ್ರಗ್ರಹಣ ಸಂಭವಿಸುತ್ತದೆ. ಮಾರ್ಚ್ 25 ರಂದು, ಚಂದ್ರಗ್ರಹಣವು ಬೆಳಗ್ಗೆ 10:23 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 03:02 ರವರೆಗೆ ಇರುತ್ತದೆ. ಇದಕ್ಕೂ ಮುನ್ನ 1924ರಲ್ಲಿ ಹೋಳಿ ಮತ್ತು ಚಂದ್ರಗ್ರಹಣ ಒಟ್ಟೊಟ್ಟಿಗೆ …

Read More »

ಒಂದು ಕೆಜಿ ಕೋಳಿಗೆ 300 ರೂ..!

ಬೆಂಗಳೂರು,ಮಾ.23- ನೀರಿನ ಕೊರತೆ ಕುಕ್ಕುಟೋದ್ಯಮದ ಮೇಲೂ ಪ್ರಭಾವ ಬೀರಿರುವುದರಿಂದ ಕೋಳಿ ದರ ದುಪ್ಪಾಟ್ಟಾಗಿದೆ. ಹೀಗಾಗಿ ಚಿಕನ್ ಪ್ರಿಯರು ದುಬಾರಿ ಬೆಲೆ ನೀಡಿ ಚಿಕನ್ ಖರೀದಿಸುವುದು ಅನಿವಾರ್ಯವಾಗಿದೆ. ಮಳೆ ಕೊರತೆಯಿಂದ ಕೋಳಿ ಆಹಾರಗಳಾದ ಸೋಯಾ, ಮೈಸ್ ಮತ್ತಿತರ ಫಸಲುಗಳ ಪ್ರಮಾಣ ಕುಸಿತಗೊಂಡಿರುವುದರಿಂದ ಕೋಳಿ ದರ ಏರಿಕೆಯಾಗಿದೆ.   ಒಂದು ಕೆ.ಜಿಗೆ 100 ರಿಂದ 150ರೂ ಇದ್ದ ಕೋಳಿ ಬೆಲೆ ಇದೀಗ 300 ರೂ.ಗಳಿಗೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ಬಗ್ಗೆ ತಿಳಿಯದೆ ಚಿಕನ್ ಕೊಳ್ಳಲು …

Read More »

ಬಿಜೆಪಿಯನ್ನು ದ್ವೇಷಿಸಬೇಡಿ : ಕಾರ್ಯಕರ್ತರಿಗೆ ಕೇಜ್ರಿವಾಲ್ ಮನವಿ

ನವದೆಹಲಿ,ಮಾ.23- ನನ್ನ ಬಂಧನದ ಉದ್ದೇಶದಿಂದ ನೀವು ಬಿಜೆಪಿ ಸದಸ್ಯರನ್ನು ದ್ವೇಷಿಸಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಜೈಲಿನಲ್ಲಿದ್ದುಕೊಂಡೇ ದೆಹಲಿ ಜನರಿಗೆ ಅರವಿಂದ್ ಕೇಜ್ರಿವಾಲ್ ಅವರು ಬರೆದಿರುವ ಭಾವನಾತ್ಮಕ ಪತ್ರವನ್ನು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಬಹಿರಂಗಪಡಿಸಿದ್ದಾರೆ. ಪತ್ರದಲ್ಲಿ ಕೇಜ್ರಿವಾಲ್ ಯಾವುದೇ ಜೈಲು ನನ್ನನ್ನು ಒಳಗೆ ಇಡಲು ಸಾಧ್ಯವಿಲ್ಲ ಮತ್ತು ನಾನು ಹೊರಗೆ ಬಂದು ನನ್ನ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.ಸಮಾಜ …

Read More »