Breaking News
Home / ರಾಜಕೀಯ (page 760)

ರಾಜಕೀಯ

ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್‌ ಸರ್ಕಾರಕ್ಕೆ ದಂಡ ಹಾಕಿ ಚಾಟಿ ಬೀಸಿದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ.ದಂಡ ವಿಧಿಸಿದೆ.   ಪದೇ ಪದೇ ‌ಕಾಲಾವಕಾಶ ಕೇಳಿದ ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗದ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಹೈಕೋರ್ಟ್, 24 ವಾರ ಕಾಲಾವಕಾಶ ನೀಡಿದರೂ ಸರ್ಕಾರ …

Read More »

ಬಾಲಿವುಡ್ ನ “ಸ್ಪೆಷಲ್ 26” ಸಿನಿಮಾ ಸ್ಟೈಲ್.ಸಿಬಿಐ ಅಧಿಕಾರಿಗಳು ಎಂದು ನಂಬಿಸಿ ಲಕ್ಷಾಂತರ ರೂ. ಲೂಟಿ!

ನವದೆಹಲಿ: ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ “ಸ್ಪೆಷಲ್ 26” ಸಿನಿಮಾದ ರೀತಿಯಲ್ಲೇ ಸಿಬಿಐ ಅಧಿಕಾರಿಗಳೆಂದು ಪೋಸು ನೀಡಿ ಉದ್ಯಮಿಯೊಬ್ಬರ ಮನೆಯೊಳಗೆ ನುಗ್ಗಿ 30 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಕೋಲ್ಕತಾದ ಭವಾನಿಪುರ್ ನಲ್ಲಿ ನಡೆದಿದೆ.   ಇತ್ತೀಚೆಗೆ ಕೋಲ್ಕತಾದ ಉದ್ಯಮಿಯೊಬ್ಬರ ಮನೆಗೆ ಸುಮಾರು 7-8 ಮಂದಿಯ ಗುಂಪೊಂದು ಆಗಮಿಸಿದ್ದು, ತಾವು ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಯೊಳಗೆ ನುಗ್ಗಿದ್ದರು ಎಂದು ಉದ್ಯಮಿ ಸುರೇಶ್ ವಾಧ್ವಾ (60ವರ್ಷ) …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿರುದ್ದ ಎಬಿವಿಪಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶೈಕ್ಷಣಿಕ ಸಮಸ್ಯೆ ಬಗೆಹರಿಸಬೇಕು. ‌ ಪದವಿ ಪರಿಕ್ಷೆ ಫಲಿತಾಂಶ ನಿಗದಿತ ಸಮಯದಲ್ಲಿ ಪ್ರಕಟಿಸಬೇಕು. ಪದೇ ಪದೇ ವಿದ್ಯಾರ್ಥಿಗಳ ಪಠ್ಯಕ್ರಮ ಬದಲಾವಣೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡಬೇಕು.‌ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ …

Read More »

ಕಬ್ಬಿನ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು ಎರಡು ಲಕ್ಷ ಮೌಲ್ಯದ ಕಬ್ಬು ಭಸ್ಮ

ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಶಂಕ್ರಪ್ಪ ಮಹಾದೇವಪ್ಪ ಕಳಸಗೌಂಡ ಎಂಬುವರ ಎರಡು ಎಕರೆ ಕಬ್ಬು ಭಸ್ಮವಾಗಿದೆ. ಕಬ್ಬಿನ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು ಎರಡು ಲಕ್ಷ ಮೌಲ್ಯದ ಕಬ್ಬು ಭಸ್ಮವಾಗಿದೆ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಈ ಕುರಿತು ದೂರು ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.

Read More »

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ

ಬೆಂಗಳೂರು,ಡಿ.14- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ. ಈ ಸಭೆಯ ರಹಸ್ಯವನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಬಿಚ್ಚಿಟ್ಟಿದೆ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದೆ.   ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‍ನ ಒಳಜಗಳ ದಿನೇ ದಿನೇ ಹೆಚ್ಚಾಗಿ ಬೀದಿರಂಪವಾಗುತ್ತಿದೆ. ಇವರೆಲ್ಲ ದೇಶೋದ್ಧಾರಕ್ಕಾಗಿ ಗುದ್ದಾಡಿಕೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ …

Read More »

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಹಿರಿಯ ನಟಿ ಅಭಿನಯಗೆ 2 ವರ್ಷ, ತಾಯಿಗೆ 5 ವರ್ಷ ಜೈಲು!

ಸಹೋದರನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಹಿರಿಯ ನಟಿ ಅಭಿನಯಗೆ ಹೈಕೋರ್ಟ್ ಏಕಸದಸ್ಯ ಪೀಠ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅನುಭವ ಖ್ಯಾತಿಯ ನಟಿ ಅಭಿನಯ ಸೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ 2002ರಲ್ಲಿ ಪ್ರಕರಣ ದಾಖಲಾಗಿತ್ತು.   ಪ್ರಕರಣದಲ್ಲಿ ಅಭಿನಯಸೇರಿದಂತೆಐವರಮೇಲೆಕೇಸ್ದಾಖಲಾಗಿತ್ತು. 1998 ರಲ್ಲಿಅಭಿನಯಅಣ್ಣಶ್ರೀನಿವಾಸ್ಜೊತೆಲಕ್ಷ್ಮೀದೇವಿವಿವಾಹವಾಗಿದ್ದರು. ಮದುವೆವೇಳೆಶ್ರೀನಿವಾಸ್ 80 ಸಾವಿರನಗದು, 250 ಗ್ರಾಂಚಿನ್ನಭರಣಪಡೆದಿದ್ದರುಎಂದುಹೇಳಲಾಗಿತ್ತು. ನಂತರಮತ್ತೆ1ಲಕ್ಷಹಣತರುವಂತೆಅಭಿನಯಕುಟುಂಬಸ್ಥರಿಂದಕಿರುಕುಳನೀಡಲಾಗಿತ್ತುಎಂದುದೂರುದಾಖಲಾಗಿತ್ತು. ಹಣಕ್ಕಾಗಿ ಲಕ್ಷ್ಮೀದೇವಿಗೆಅಭಿನಯಕುಟುಂಬ ಕಿರುಕುಳನೀಡಿತವರುಮನೆಗೆಕಳುಹಿಸಿದ್ದರು. ಈಸಂಬಂಧಚಂದ್ರಾಲೇಔಟ್ಪೊಲೀಸ್ಠಾಣೆಗೆಲಕ್ಷ್ಮಿದೇವಿದೂರುನೀಡಿದ್ದರು. …

Read More »

ಅಂಜುಮನ್ ಶಾಲೆಯ ಲ್ಲಿ ಫುಡ್ ಫೆಸ್ಟಿವಲ್

ವಿವಿಧ ಬಗೆಯ ಖಾದ್ಯಗಳು, ಆಹಾರ ಪ್ರೀಯರಿಗೆ ಮದ ನೀಡುತ್ತಿದ್ದರೆ, ರುಚಿ‌ ರುಚಿಯಾದ ಆಹಾರ ಸೇವಿಸಿ ಖುಷಿ ಪಟ್ಟ ಜನರಿಗೆ ಪಾರವೇ ಇರಲಿಲ್ಲ. ಬೆಳಗಾವಿ ನಗರದ ಅಂಜುಮನ್ ಸಂಸ್ಥೆಯ ಡೇಟ್ ಪಲ್ಮ ಶಾಲೆಯಲ್ಲಿ ಆಹಾರ ‌ಮೇಳವನ್ನು  ಬುಧವಾರ ಆಯೋಜನೆ ಮಾಡಲಾಗಿತ್ತು. ಅಂಜುಮನ್ ಸಭಾಂಗಣದಲ್ಲಿ ಆಯೋಜಿಸದ ಆಹಾರ ಮೇಳದಲ್ಲಿ ಸುಮಾರು ಮೂರನೂರು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ರುಚಿ ರುಚಿ ತಿಂಡಿಗಳನ್ನು ಪ್ರದರ್ಶನಕ್ಕೆ ಇಟ್ಟು ಮಾರಾಟ ಮಾಡಲಾಯಿತು. ಅಂಜುಮನ್ ಅಧ್ಯಕ್ಷ ರಾಜು ಸೇಠ್ …

Read More »

ಮಹದಾಯಿ ವಿಷಯದಲ್ಲಿ ಮಾತನಾಡು ನೈತಿಕತೆ ಕಾಂಗ್ರೆಸ್ ನವರಿಗೆ ಯಿಲ್ಲ:C.M. ಬೊಮ್ಮಾಯಿ

ಒಂದು ಹನಿ ನೀರಿನ್ನು ಮಹದಾಯಿಗೆ ನೀಡುವುದಿಲ್ಲ ಎಂದು ಸೋನಿಯಾಗಾಂಧಿ ಗೋವಾದಲ್ಲಿ ಹೇಳಿದರು. ನಂತರ ಮಹರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಕೆನಾಲ್ ಗೆ ಗೋಡೆ ಕಟ್ಟಿದ್ದೆ ಕಾಂಗ್ರೆಸ್. ಇದು ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ನ ಸಾಧನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಷಯದಲ್ಲಿ ಬಿಜೆಪಿ ಸರ್ಕಾರವೇ ಹೆಚ್ಚು ಕೆಲಸ ಮಾಡಿದೆ. ಹೋರಾಟದ ವೇಳೆ ರಕ್ತದಲ್ಲಿ ಪತ್ರ ಬರೆದಿದ್ದರಿಂದ ಐದು ಕಿ.ಮೀ ಕೆನಾಲ್ ಅನ್ನು ನಾನು …

Read More »

ಮಗನನ್ನು ಜೀವ ಉಳಿಸಲು ಕಣ್ಣೀರಿಡುತ್ತಾ ಇರುವ ತಾಯಿ

ಕಡು ಬಡತನದಲ್ಲಿರುವ ಮಗನನ್ನು ಜೀವ ಉಳಿಸಲು ಕಣ್ಣೀರಿಡುತ್ತಾ ಇರುವ ತಾಯಿ ಇಂತಹ ಕಣ್ಣೀರಿನ ಕತೆಯು ಇಂತಹ ಘಟನೆ ನಡೆದಿದ್ದು  ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದಲ್ಲಿಹೌದು, ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದ ಒಂದು ಬಡ ಕುಟುಂಬದ ಕಣ್ಣೀರಿನ ಕಥೆ. ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾರ್ಥಮಿಕ ಉರ್ದು ಶಾಲೆಯಲ್ಲಿ ಸುಮಾರು 2002 ರಿಂದ ಅಡುಗೆ ಸಹಾಯಕರಾಗಿ ಕೆಲಸ ಮಾಡುತೀರುವ ಶಾಂತಾ ಈಶ್ವರಪಾ ಗೋವಿಂದಗೊಳ್ಳ ಇವರ …

Read More »

ಮೊಸಳೆ ಕಂಡು ಶಾಕ್ ಆದ ಜನ

ಬೃಹತ್ ಮೊಸಳೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಎದುರಿನ ಚಿನಿವಾಲರ ಖಾಲಿ ಜಾಗದಲ್ಲಿರುವ ಬಾವಿಯಲ್ಲಿ ಪತ್ತೆ ಆಗಿದೆ. ಬಾವಿ ಒಂದರಲ್ಲಿ ಬೃಹತ್ ಆಕಾರದ ಮೊಸಳೆ ಹಲವಾರು ದಿನಗಳಿಂದ ವಾಸಿಸುತ್ತಿದೆ‌ ಅಲ್ಲದೇ, ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಹೇಳಿದರು ಪ್ರಯೋಜನ ಆಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮುನ್ನವೇ ಮೊಸಳೆ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Read More »