Breaking News
Home / ರಾಜಕೀಯ (page 713)

ರಾಜಕೀಯ

ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಹಾಗಂತ ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ. :C.M.ಬೊಮ್ಮಾಯಿ

ಹುಬ್ಬಳ್ಳಿ: ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಹಾಗಂತ ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ. ಪ್ರತಿಯೊಬ್ಬರಿಗೂ ಒಂದು ಗುರಿ ನೀಡಿದ್ದು, ಅದರ ಸಾಕಾರಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಮತದ ಕುರಿತ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದು ಕೇವಲ ಕಲ್ಪಿತವಷ್ಟೇ. ಪ್ರತಿಯೊಬ್ಬರಿಗೂ ಒಂದೊಂದು ಗುರಿ ನೀಡಲಾಗಿದೆ. ಪಕ್ಷದ ಸಂಘಟನೆ ಎಲ್ಲರೂ ಒತ್ತು ನೀಡಬೇಕಾಗಿದೆ. ಪಕ್ಷದ ಏಳ್ಗೆಗಾಗಿ ಎಲ್ಲರೂ ಶ್ರಮಿಸಬೇಕು. ಕೇಂದ್ರ ಹಾಗೂ …

Read More »

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಗೆ ಲೋಕಾಯುಕ್ತ ನೋಟಿಸ್

ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂದೀಪ್ ಮತ್ತು ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ವಿರುದ್ಧ ಸಾಮಾಜಿ ಕಾರ್ಯಕರ್ತರೊಬ್ಬರು ದಾಖಲಿಸಿರುವ ದೂರಿಗೆ ಸ್ಪಂದಿಸದ ಹಾಗೂ ಮಾಹಿತಿ ಹಕ್ಕಿನಡಿ ಕೇಳಿದ ದಾಖಲೆಗಳನ್ನು ಒದಗಿಸದಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಉಳ್ಳಾಲ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಂಜಾ ಮಾಫಿಯಾ, ಮರಳು, ಹೋಟೆಲ್ ಮಾಲಕರಿಗೆ ಹೀಗೆ ಪ್ರತಿಯೊಂದರಲ್ಲೂ ಹಣದ ಬೇಡಿಕೆ ಇಡುತ್ತಿದ್ದಾರೆ. ಠಾಣೆಯಲ್ಲಿ …

Read More »

ಯುವಕರು ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು: ಅಮಿತ್ ಶಾ

ಹುಬ್ಬಳ್ಳಿ: ಯುವಕರು ವೈಯಕ್ತಿಕ ಅಭಿವೃದ್ಧಿ ಜತೆಗೆ ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.   ಭಾರತ ವಿಶ್ವದಲ್ಲಿ ಅಗ್ರಗಣ್ಯ ರಾಷ್ಟ್ರವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು. ಕಳೆದ ಎಂಟುವರೆ ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ, ಬದಲಾವಣೆ …

Read More »

ಕಾಂಗ್ರೆಸ್ – ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರು:

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರುಗಳು ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ ಹೇಳಿದರು. ಈ ಮೂಲಕ ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು‌.   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸಮಾನ ಶತ್ರುಗಳು. ಚುನಾವಣೆ ವಿಚಾರದಲ್ಲಿ ಬಿಜೆಪಿ …

Read More »

ಕಿತ್ತೂರು, ಕಲ್ಯಾಣ, ಕರಾವಳಿ ಮಂತ್ರ: ಸಾಂಪ್ರದಾಯಿಕ ಮತದಾರರತ್ತ ಬಿಜೆಪಿ ನೋಟ

ಮೂರೂ ಪಕ್ಷಗಳಿಗೆ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂಬ ಸ್ಥಿತಿ ಸದ್ಯ ಇಲ್ಲ. ಗುಪ್ತಚರ ವರದಿಯೂ ಇದನ್ನೇ ಹೇಳುತ್ತಿದೆ. ಹೀಗಾಗಿ ಫ‌ಲಿತಾಂಶ ಪ್ರಕಟವಾಗುವವರೆಗೆ ಮೂರೂ ಪಕ್ಷಗಳಿಗೆ ಪ್ರತೀ ಕಣವೂ ಚಿಂತೆಯೇ! ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಕೇಸರಿ ಅಲೆ ಸೃಷ್ಟಿಸುವ ಲೆಕ್ಕಾಚಾರ ನಿರೀಕ್ಷಿತ ಫ‌ಲ ನೀಡುವ ಸಾಧ್ಯತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಗೆಲ್ಲುವುದ ಕ್ಕಾಗಿ ಹಳೆಯ ಸೂತ್ರವನ್ನೇ ಮತ್ತಷ್ಟು ಬಲಪಡಿಸುವುದಕ್ಕೆ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಜ್ಜಾಗಿದೆ.   ಕೇಂದ್ರ ಗೃಹ ಸಚಿವ …

Read More »

ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ವಿಶೇಷ ವಿಮಾನದ ಮೂಲಕ ದೆಹಲಿಯಿಂದ ವಾಣಿಜ್ಯನಗರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದರು. ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಗತ ಕೋರಿದರು. ಇಲ್ಲಿನ ಡೆನಿಸನ್ ಹೋಟೆಲ್​ನಲ್ಲಿ ಅಮಿತ್ ಶಾ ಅವರು ವಾಸ್ತವ್ಯ ಹೂಡಿದ್ದು ಹುಬ್ಬಳ್ಳಿ, ಧಾರವಾಡ, ಕುಂದಗೋಳ ಮತ್ತು ಬೆಳಗಾವಿಯಲ್ಲಿ …

Read More »

ಮಂಜೂರಾದ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ವಿಳಂಬ:ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಕಳೆದ 2014ರಲ್ಲಿ ಮಂಜೂರಾದ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ವಿಳಂಬವಾಗುತ್ತಿದ್ದು, ಬರುವ ಒಂದು ವರ್ಷದ ಒಳಗೆ ರೈತರಿಗೆ ಸೂಕ್ತ ಪರಿಹಾರ ನೀಡಿ ರೈಲ್ವೆ ಲೈನ್ ಕಾಮಗಾರಿ ಮುಕ್ತಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸರ್ಕಾರವನ್ನು ಒತ್ತಾಯಿಸಿದರು.   ಚಿಕ್ಕೋಡಿ ನಗರದಲ್ಲಿ ಮಾತನಾಡಿದ ಅವರು, ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಬಾಗಲಕೋಟ ಜಿಲ್ಲೆಯ ಹದ್ದಿಯಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ …

Read More »

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಪ್ರತೀ ಸರಕಾರಿ ಕಾಲೇಜಿನಲ್ಲೂ ಸಂಗೊಳ್ಳಿ ರಾಯಣ್ಣ ಹಾಗೂ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ ಸ್ಥಾಪನೆಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 192ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಯಾರು ನಿಜವಾಗಿಯೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂಬುದು ನಮ್ಮ ಮಕ್ಕಳಿಗೆ ತಿಳಿಯಬೇಕು. ಅದಕ್ಕಾಗಿ ಈ ವೀರರ ಪ್ರತಿಮೆಗಳನ್ನು ಸ್ಥಾಪಿಸಲು ಸೂಚಿಸುವುದಾಗಿ …

Read More »

ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ

ಬೆಳಗಾವಿ: ವಾಕರಸಾ ಸಂಸ್ಥೆ, ಬೆಳಗಾವಿ ವಿಭಾಗದಿಂದ  ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಗೋಳ ಮಾರ್ಗಗಳಲ್ಲಿ ‘ಪಿಂಕ್ ಬಸ್’ (ಮಹಿಳಾ ವಿಶೇಷ ವಾಹನ)ಗಳನ್ನು ಪ್ರಾರಂಭಿಸಲಾಗಿದೆ. ಬೆಳಗಾವಿ ಉತ್ತರ ಮತಕ್ಷೆತ್ರ ಶಾಸಕ ಅನಿಲ ಬೆನಕೆ,  ಅವರು ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಮಹಿಳಾ ಕ್ಲಬ್‌ನ ಪ್ರೆಸಿಡೆಂಟ್ ಶಾಲಿನಿ ಚೌಗಲಾ, ಕಾರ್ಯದರ್ಶಿ ಪುಷ್ಪಾಂಜಲಿ ಹಾಗೂ ಚೇರ್ ಪರ್ಸನ್‌ ಸುನಂದಾ ಕರಲಿಂಗನ್ನವರ ಉಪಸ್ಥಿತರಿದ್ದರು. ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ  …

Read More »

ವಿದ್ಯಾರ್ಥಿ ನಿಲಯದಿಂದ 25 ವಿದ್ಯಾರ್ಥಿಗಳು ಹೊರಕ್ಕೆ: ಕೈ ಚೆಲ್ಲಿದ ಶ್ರೀರಾಮುಲು

ಬಳ್ಳಾರಿ:ಇಲ್ಲಿನ ಕೌಲ್‌ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ‘ಕಳಪೆ ಊಟ’ದ ವಿರುದ್ಧ ದನಿ ಎತ್ತಿದ 25 ವಿದ್ಯಾರ್ಥಿಗಳನ್ನು ಗುರುವಾರ ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಬುಧವಾರ ರಾತ್ರಿ ಕೋಳಿ ಸಾರು ಮಾಡಲಾಗಿತ್ತು. ಸಾರು ಕಳಪೆಯಾಗಿದ್ದನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದರು. ವಾರ್ಡನ್‌, ಕಿರಿಯ ವಾರ್ಡನ್‌ ಹಾಗೂ ತಾಲ್ಲೂಕು ಅಧಿಕಾರಿ ಊಟ ಮಾಡಿ, ‘ಸಾರು ಚೆನ್ನಾಗಿಲ್ಲ’ ಎಂದು ಒಪ್ಪಿಕೊಂಡರು. ಆನಂತರ ವಿದ್ಯಾರ್ಥಿಗಳು ಎರಡು ಬಕೆಟ್‌ಗಳಲ್ಲಿ ಸಾರು ಹಿಡಿದುಕೊಂಡು ರಾತ್ರಿ 10 ಗಂಟೆಗೆ ಜಿಲ್ಲಾಧಿಕಾರಿ ಮನೆಗೆ ಹೋಗಿ …

Read More »