Breaking News
Home / ರಾಜಕೀಯ / ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ

ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ

Spread the love

ಬೆಳಗಾವಿ: ವಾಕರಸಾ ಸಂಸ್ಥೆ, ಬೆಳಗಾವಿ ವಿಭಾಗದಿಂದ  ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಗೋಳ ಮಾರ್ಗಗಳಲ್ಲಿ ‘ಪಿಂಕ್ ಬಸ್’ (ಮಹಿಳಾ ವಿಶೇಷ ವಾಹನ)ಗಳನ್ನು ಪ್ರಾರಂಭಿಸಲಾಗಿದೆ.
ಬೆಳಗಾವಿ ಉತ್ತರ ಮತಕ್ಷೆತ್ರ ಶಾಸಕ ಅನಿಲ ಬೆನಕೆ,  ಅವರು ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಮಹಿಳಾ ಕ್ಲಬ್‌ನ ಪ್ರೆಸಿಡೆಂಟ್ ಶಾಲಿನಿ ಚೌಗಲಾ, ಕಾರ್ಯದರ್ಶಿ ಪುಷ್ಪಾಂಜಲಿ ಹಾಗೂ ಚೇರ್ ಪರ್ಸನ್‌ ಸುನಂದಾ ಕರಲಿಂಗನ್ನವರ ಉಪಸ್ಥಿತರಿದ್ದರು.
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ  ಸಂಸ್ಥೆಯ  ಪಿ.ವೈ.ನಾಯಕ,  ವಿಭಾಗೀಯ ಸಂಚಾರ ಅಧಿಕಾರಿ ಖೇಮಸಿಂಗ್ ಲಮಾಣಿ,  ವಿಭಾಗೀಯ ತಾಂತ್ರಿಕ ಶಿಲ್ಪಿ ರಾಧಾಕೃಷ್ಣ,  ಘಟಕ ವ್ಯವಸ್ಥಾಪಕರು, ಬೆಳಗಾವಿ 2 ನೇ ಘಟಕ ಎ ವೈ ಶಿರಗುಪ್ಪಿಕರ, ಕಾರ್ಮಿಕ ಕಲ್ಯಾಣಾಧಿಕಾರಿ ಸತ್ಯನಾರಾಯಣ, ಭದ್ರತಾ ಮತ್ತು ಜಾಗೃತಾಧಿಕಾರಿಗಳು ಬಿ.ಡಿ.ಗುರಿಕಾರ  ಹಾಗೂ ಸಂಸ್ಥೆಯ ಇತರ ಅಧಿಕಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಶೇಷ ಬಸ್ ವೇಳಾಪಟ್ಟಿ:
* ಸಿಬಿಟಿ – ವಡಗಾಂವ – 8:40, 17:15,  ವಡಗಾಂವ – ಸಿಬಿಟಿ  9:15, 17:50
* ಸಿಬಿಟಿ-ಅನಿಗೋಳ – 8:50, 17:25, ಅನಿಗೋಳ – ಸಿಬಿಟಿ 9:30, 18:00
* ಸಿಬಿಟಿ-ಮಜಗಾಂವ- 8:25, 17:30, ಮಜಗಾಂವ – ಸಿಬಿಟಿ 8:50, 18:05

Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ