Home / ರಾಜಕೀಯ / ಯುವಕರು ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು: ಅಮಿತ್ ಶಾ

ಯುವಕರು ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು: ಅಮಿತ್ ಶಾ

Spread the love

ಹುಬ್ಬಳ್ಳಿ: ಯುವಕರು ವೈಯಕ್ತಿಕ ಅಭಿವೃದ್ಧಿ ಜತೆಗೆ ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

 

ಭಾರತ ವಿಶ್ವದಲ್ಲಿ ಅಗ್ರಗಣ್ಯ ರಾಷ್ಟ್ರವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ಕಳೆದ ಎಂಟುವರೆ ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ, ಬದಲಾವಣೆ ವೇಗ ತೀವ್ರತೆ ಪಡೆದುಕೊಂಡಿದೆ. 2014 ರ ಮೊದಲು ಭಾರತ ಆರ್ಥಕವಾಗಿ ವಿಶ್ವದಲ್ಲಿ 12 ನೇ ಸ್ಥಾನದಲ್ಲಿತ್ತು, ಇದೀಗ 5ನೇ ಸ್ಥಾನದಲ್ಲಿದ್ದು, ವಿಶ್ವದ 3ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಬೇಕೆಂಬುದು ಪ್ರಧಾನಿಯವರ ಕನಸಾಗಿದೆ. ಇದು ಸಾಧ್ಯವಾದರೆ ತಾಂತ್ರಿಕ ಪದವೀಧರರಿಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ. ದೇಶದಲ್ಲಿ ಸುಮಾರು 70 ಸಾವಿರ ನವೋದ್ಯಮಗಳು ಆರಂಭವಾಗಿದ್ದು, ಇದರಲ್ಲಿ ಶೇ.30 ನವೋದ್ಯಮಗಳು ಯುವತಿಯರು, ಮಹಿಳೆಯರಿಂದ ಆರಂಭಗೊಂಡಿವೆ. ಹೆಚ್ಚಿನವು 2-3 ನೇ ಸ್ತರದ ನಗರಗಳಲ್ಲಿ ಆರಂಭವಾಗಿರುವುದು ಸಂತಸದ ಸಂಗತಿ ಎಂದರು.

ಭಾರತವನ್ನು ವಿಶ್ವದಲ್ಲೇ ಉತ್ಪಾದನಾ ಹಬ್ ಆಗಿಸಬೇಕು ಎಂದು ಪ್ರಧಾನಿಯವರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. 2014 ಮುಂಚೆ ಬೌದ್ಧಿಕ ಆಸ್ತಿ ಹಕ್ಕು (ಪೇಟೆಂಟ್) ನೋಂದಣಿಗೆ ಅರ್ಜಿ ಸಲ್ಲಿಕೆಯಾಗುತ್ತಿದ್ದವು. ಇದೀಗ 1.5 ಲಕ್ಷ ಅರ್ಜಿಗಳು ಬರುತ್ತಿವೆ. ಮುದ್ರಾ ಯೋಜನೆಯಡಿ ಸುಮಾರು 4.30 ಕೋಟಿ ಫಲಾನುಭವಿಗಳಿಗೆ 2 ಲಕ್ಷ ಕೋಟಿ ರೂ.ನಷ್ಟು ಸಾಲ ನೀಡಲಾಗಿದೆ ಎಂದರು.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ