ಬೆಂಗಳೂರು: ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಬಳಿ ₹ 12.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಮಗ ಬಿ.ವೈ. ವಿಜಯೇಂದ್ರ ಮತ್ತು ಇತರರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸುವ ಕುರಿತು ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸಲಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಕ್ರಮ ಜರುಗಿಸುವಂತೆ …
Read More »ರಾತ್ರಿ ಸುರಿದ ಧಾರಾಕಾರ ಮಳೆಪಪ್ಪಾಯಿ, ದಾಳಿಂಬೆ ಗಿಡ ಬೆಳೆದಿದ್ದ ರೈತ ಕಂಗಾಲು
ವಿಜಯನಗರ: ಜಿಲ್ಲೆಯಾದ್ಯಂತ ನಿನ್ನೆ ಭರ್ಜರಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಸಂಪೂರ್ಣ ಜಲಾವೃತಗೊಂಡಿದ್ದು ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಅವೈಜ್ಞಾನಿಕ ಕೃಷಿ ಹೊಂಡದಿಂದಲೇ ಬೆಳೆ ನಾಶ ಬಿಟ್ಟು ಬಿಡದೇ ಸುರಿದ ಮಳೆಯಿಂದ ಜಾತಪ್ಪ ಎಂಬ ರೈತನ ಜಮೀನು ಜಲಾವೃತಗೊಂಡಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ, ದಾಳಿಂಬೆ ಗಿಡಗಳು ನೆಲಕಚ್ಚಿ ರೈತನನ್ನು ಸಂಕಷ್ಟಕ್ಕೆ …
Read More »ನನಗೂ ಓರ್ವ ಆಪ್ತ ಸಹಾಯಕ ಬೇಕು: ಸರ್ಕಾರಕ್ಕೆ ಗ್ರಾಪಂ ಅಧ್ಯಕ್ಷೆ ಮನವಿ
ಕೊಪ್ಪಳ: ಸಚಿವರು ಮತ್ತು ಶಾಸಕರಿಗೆ ಇರುವಂತೆ ನನಗೂ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬಳು ಪತ್ರ ಬರೆದಿರುವ ವಿನೂತನ ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರು ನನ್ನಗೆ ಓದಲು, ಬರೆಯಲು ಬರುವುದಿಲ್ಲ. ಸಂಪೂರ್ಣ ಅನಕ್ಷರಸ್ಥೆಯಾಗಿರುವ ಕಾರಣ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಸರ್ಕಾರದಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿ ಕೊಡಿ ಎಂದು ಯಲಬುರ್ಗಾ ತಾಲೂಕಿನ ಮುರಡಿ …
Read More »ಗೋಲಿಬಾರ್ ವೇಳೆ ಪೊಲೀಸ್ ಮನೆಯವರ ಅತ್ಯಾಚಾರ ಮಾಡುವಂತೆ ಪೋಸ್ಟ್: ಆರೋಪಿ ಬಂಧನ
ಮಂಗಳೂರು: ಪೊಲೀಸರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ನಡೆದ ಗೋಲಿಬಾರ್ ಹಿನ್ನೆಲೆಯಲ್ಲಿ ಪೊಲೀಸರ ಮನೆಯ ಮಹಿಳೆಯರನ್ನು ಅತ್ಯಾಚಾರ ಮಾಡಿ ಸುಡಬೇಕು ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನ ಹಳ್ಳಿಯ ಯೋಗಿ ಯಾನೆ ಯೋಗೇಶ್.ಎಸ್ (28) ಬಂಧಿತ ಆರೋಪಿ. 2019ರಲ್ಲಿ ಸಿಎಎ ಮತ್ತು …
Read More »ಯಾರಿಗೆ, ಯಾವ ಖಾತೆ? ಎಲ್ಲ 77 ಸಚಿವರ ಖಾತೆಗಳ ವಿವರ
ನವದೆಹಲಿ – ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕದ ರಾಜೀವ ಚಂದ್ರಶೇಖರ್ ಗೆ ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ, ಶೋಭಾ ಕರಂದ್ಲಾಚೆಗೆ ಕೃಷಿ ಹಾಗೂ ರೈತರ ಕಲ್ಯಣ, ನಾರಾಯಣ ಸ್ವಾಮಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮತ್ತು ಭಗವಂತ ಖೂಬಾಗೆ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ. Narendra Modi Prime Minister and also in-charge of:Ministry of Personnel, …
Read More »ಕೋವಿಡ್ ನಿಯಮ ಪಾಲಿಸಿಲ್ಲ ಅಂದ್ರೆ ಈಗಿರುವ ವಿನಾಯ್ತಿ ರದ್ದು – ಮತ್ತೆ ಲಾಕ್‍ಡೌನ್ ಬಗ್ಗೆ ಸಿಎಂ ಮಾತು
ಬೆಂಗಳೂರು: ಅನ್‍ಲಾಕ್ ಬಳಿಕ ಸೋಂಕಿನ ಪ್ರಮಾಣ ಏರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಬಿಗಿಕ್ರಮದ ಬಗ್ಗೆ ಮಾತು ಆಡಿದ್ದಾರೆ. ಒಂದು ವೇಳೆ ಕೋವಿಡ್ ನಿಯಮಗಳನ್ನು ಪಾಲಿಸದೇ ಹೋದರೆ ಈಗ ನೀಡಲಾಗಿರುವ 15 ದಿನಗಳ ವಿನಾಯ್ತಿಯನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಜುಲೈ 3ರಂದು 15 ದಿನಗಳವರೆಗೆ ಅಂದರೆ ಜುಲೈ 19ರವರೆಗೆ ಅನ್‍ಲಾಕ್ ಘೋಷಣೆ ಮಾಡಿದ್ದಾಗಲೂ ಕೋವಿಡ್ ನಿಯಮ ಪಾಲಿಸಿಲ್ಲ ಎಂದರೆ ಮತ್ತೆ ಬಿಗಿಕ್ರಮದ ಎಚ್ಚರಿಕೆ ನೀಡಿದ್ದರು. ಈಗ ರಾಜ್ಯದಲ್ಲಿ ಮತ್ತೆ …
Read More »IMA: ಐಎಂಎ ಪ್ರಕರಣ- ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ ಮಾಡಿದ ಸರ್ಕಾರ
ಬೆಂಗಳೂರು: ಐಎಂಎ ಪ್ರಕರಣದಲ್ಲಿ ಕೇಳಿಬಂದಿದ್ದ ಪ್ರಮುಖ ಹೆಸರುಗಳಲ್ಲಿ ಮಾಜಿ ಸಚಿವ ರೋಷನ್ ಬೇಗ್ ಕೂಡ ಒಬ್ಬರು. ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ …
Read More »ಮೋದಿ ಕ್ಯಾಬಿನೆಟ್ನಲ್ಲಿ ರಾಜ್ಯದಿಂದ 6 ಮಂದಿಗೆ ಸಚಿವ ಸ್ಥಾನ
ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ಹೊರತಾಗಿಯೂ ರಾಜ್ಯದಿಂದ 6 ಮಂದಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ಸಾಧ್ಯತೆ 1. ನಿರ್ಮಲಾ ಸೀತಾರಾಮನ್- ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ …
Read More »ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ : ಯತ್ನಾಳ್
ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ ಎಂಬ ಯತ್ನಾಳ್ ಆರೋಪಕ್ಕೆ ಗದಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ ಸಿಡಿಮಿಡಿ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬೇಕೆಂದು ಹುಟ್ಟಿದ ಪಕ್ಷ ಕಾಂಗ್ರೆಸ್ ವಾಗಿದೆ. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು. ನಮಗೆ ಧ್ವನಿ ಎತ್ತುವಿದು ಗೊತ್ತಿಲ್ಲವೆ. ನಾನು ಭಾರತೀಯ ಅಂತಾ ಹೆಮ್ಮೆಯಿಂದ ಹೇಳುವಂತೆ ಮಾಡಿದ ಪಕ್ಷ ನಮ್ಮದು. 60 ವರ್ಷದಲ್ಲಿ ನಿರ್ಮಾಣ ಮಾಡಿದ ಶಕ್ತಿಶಾಲಿ ರಾಷ್ಟ್ರವನ್ನ ಬಿಜೆಪಿ …
Read More »ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ. ಸುಮಲತಾ ವಿರುದ್ಧ ಭುಗಿಲೆದ್ದ ಆಕ್ರೋಶ
ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನ ಡಿವೈಡಂಡ್ ರೂಲ್ ಮಾಡುವ ಪ್ರಯತ್ನವನ್ನ ಸಂಸದೆ ಸುಮಲತಾ ಮಾಡ್ತಿದ್ದಾರೆ. ಇಂತಹ ನೀಚ ರಾಜಕಾರಣವನ್ನು ಈ ಹಿಂದೆ ಬ್ರಿಟಿಷರು ಮಾಡಿದ್ದರು. ಅದೇ ಕೆಲಸವನ್ನು ನೀವೀಗ ಮಾಡ್ತಿದ್ದೀರಾ. ಪ್ರಜ್ವಲ್ ರೇವಣ್ಣರನ್ನು ನೋಡಿ ಕಲಿಯಿರಿ ಎನ್ನುತ್ತೀರಲ್ಲಾ… ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ ಎಂದು ಸುಮಲತಾ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಸುಮಲತಾ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಎಚ್ಡಿಕೆ ಪರ ರವೀಂದ್ರ …
Read More »
Laxmi News 24×7