ಬೆಂಗಳೂರು: ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರುವಾಗಿದೆ. ಆದ್ದರಿಂದ ತಮ್ಮ ವಿರುದ್ಧ ಯಾವುದಾದರೂ ಸಿಡಿಗಳು ಇದ್ದರೆ ಅದು ಎಲ್ಲಿಯೂ ಪ್ರಸಾರವಾಗಬಾರದು ಎಂದು ಕೋರಿ ಬೆಂಗಳೂರಿನ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಇದರ ವಿಚಾರಣೆ ನಡೆಸಿರುವ ಕೋರ್ಟ್, ಸಿಡಿಯನ್ನು ಎಲ್ಲಿಯೂ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ನೀಡಿದೆ. ಸಿಡಿಯ ಕುರಿತಂತೆ ಮಾತನಾಡಿರುವ ರೇಣುಕಾಚಾರ್ಯ ಅವರು, ಈಗೀಗ ತಂತ್ರಜ್ಞಾನ ಹೇಗಿದೆ ಎಂದರೆ, ಯಾರದ್ದೋ ತಲೆ, ಯಾರದ್ದೋ ಮುಖ, ಯಾರದ್ದೋ …
Read More »ಸಚಿವ ಸಂಪುಟ ರಚನೆ: ‘ವಿಜಯಪುರ ಕಡೆಗಣಿಸಿದರೆ ದೊಡ್ಡ ಶಾಕ್ ಕೊಡುವೆ’-ಯತ್ನಾಳ
ವಿಜಯಪುರ: ವಿಜಯಪುರ ಜಿಲ್ಲೆಗೆ ಗೌರವಯುತವಾಗಿ ಸಚಿವ ಸ್ಥಾನ ಕೊಡಲೇಬೇಕು. ಒಂದು ವೇಳೆ ಜಿಲ್ಲೆಯನ್ನು ಕಡೆಗಣಿಸಿದರೆ ಸಚಿವ ಸಂಪುಟ ವಿಸ್ತರಣೆ ಬಳಿಕ ದೊಡ್ಡ ಶಾಕ್ ಕೊಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯವರನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ …
Read More »ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!
ಮಹಾರಾಷ್ಟ್ರದ ಮುಖ್ಯಮಂತ್ರಿ ಉಧವ್ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನಾವಿಸ್ ಅವರು ಶುಕ್ರವಾರ ಬೆಳಗ್ಗೆ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಜನರಲ್ಲಿ ಆಚ್ಚರಿ ಮೂಡಿಸಿದರು. ಇಬ್ಬರು ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ್ದರು. ಮುಖಾಮುಖಿಯಾದ ನಂತರ ಅವರಿಬ್ಬರು ಪ್ರವಾಹ ಪರಿಸ್ಥಿತಿ ಮತ್ತು ಪುನರ್ವಸತಿ ವಿಷಯಗಳ ಬಗ್ಗೆ ಚರ್ಚಿಸಿದರು. ‘ಅವರು ಅಲ್ಲಿಗೆ ಹೋಗಿದ್ದು ಗೊತ್ತಿತ್ತು, ನಾನು ಸಹ ಅದೇ ಸ್ಥಳಕ್ಕೆ ಭೇಟಿ ನಿಡುತ್ತಿದ್ದರಿಂದ ಅವರಿಗೆ ಅಲ್ಲೇ …
Read More »ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಪತಿ
ಕೊಪ್ಪಳ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಮೊಬೈಲ್ ಚಾರ್ಜರ್ ಬಳಸಿ ಮಡದಿ ಮಂಜುಳಾ (25) ಕತ್ತು ಬಿಗಿದು ಮಂಜುನಾಥ್ ಕಟ್ಟಿಮನಿ ಎಂಬಾತ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮಂಜುಳಾ ಪತಿ ಮಂಜುನಾಥ್ ಕಟ್ಟಿಮನಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಗಂಡ ಹೆಂಡತಿ ಮದ್ಯೆ ಪದೇ ಪದೇ ಗಲಾಟೆ ಆಗ್ತಿತ್ತು ಎಂದು …
Read More »ಬಿಜೆಪಿ ಹೈಕಮಾಂಡ್ ಎದುರು ಪಂಚಮಸಾಲಿ ಸಮುದಾಯ ಇಟ್ಟ ಹೊಸ ಬೇಡಿಕೆ ಇದು!
ಬೆಂಗಳೂರು, ಜು. 30: ಈ ಸಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಖಚಿತ ಎಂಬ ಮಾಹಿತಿ ಬಂದಿತ್ತು. ಅದರಂತೆಯೆ ಆರ್‌ಎಸ್‌ಎಸ್ ಪ್ರಮುಖರು ಹಾಗೂ ಬಿಜೆಪಿ ಹೈಕಮಾಂಡ್ ಕೂಡ ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಲು ತೀರ್ಮಾನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಹುದ್ದೆ ಆ ಸಮುದಾಯಕ್ಕೆ ಸಿಗಲಿಲ್ಲ ಎಂಬ ನಂಬಿಕೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಖಚಿತ ಮಾಹಿತಿಯಿದೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಿಕೊಂಡಿರುವ ಲಿಂಗಾಯತ ಪಂಚಮಸಾಲಿ …
Read More »ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ
ಬನಹಟ್ಟಿ : ಕಳೆದ ಹಲವಾರು ದಿನಗಳಿಂದ ಮಹಾರಾಷ್ಟ್ರದಲ್ಲಿನ ಮಳೆ ಮತ್ತು ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿರುವುದರಿಂದ ಬಾಘಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿತ್ತು. ಇಂದು ಶುಕ್ರವಾರ ಅದರ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಸಂತ್ರಸ್ತರಲ್ಲಿ ನೆಮ್ಮದಿ ಮೂಡಿಸಿದೆ. ಗುರುವಾರ ಯಾವುದೇ ರೀತಿಯ ಏರಿಳಿತವಾಗದಿದ್ದರೂ ಇಂದು ಶುಕ್ರವಾರ ಸುಮಾರು 70 ಸಾವಿರ ಕ್ಯೂಸೆಕ್ಸ್ ನಷ್ಟು ನೀರು …
Read More »ಐಷಾರಾಮಿ ವಾಹನದಲ್ಲಿ ದನಗಳ್ಳತನ; ಇಬ್ಬರ ಬಂಧನ ಪರಾರಿಯಾದ ಮೂವರಿಗೆ ಶೋಧ
ಶಿರಸಿ: ಐಷಾರಾಮಿ ವಾಹನದಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರಿಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕಾನಂದನಗರ ಮತ್ತು ಮರಾಠಿಕೊಪ್ಪದಲ್ಲಿ ದನಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜ್, ಸಿ.ಪಿ.ಐ ರಾಮಚಂದ್ರ ನಾಯಕ, ಪಿ.ಎಸ್.ಐ ಭಿಮಾಶಂಕರ ಸಿನ್ನೂರ ಸಂಗಣ್ಣ ರವರ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಪಿ.ಎಸ್.ಐ ಭೀಮಾಶಂಕರ್ …
Read More »ಅಯ್ಯಯ್ಯೋ ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ..! ಕನ್ಯೆ ಕೊಟ್ಟು ಪುಣ್ಯ ಕಟ್ಟಿಕೊಳ್ರಿ..!
ಗದಗ: ಅಯ್ಯಯ್ಯೋ ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ ಅಂತ ಈ ಗ್ರಾಮದ ಯುವಕರು ಗೋಳಾಡ್ತಿದ್ದಾರೆ. ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ. ಯಾಕಂದ್ರೆ ಇಲ್ಲಿನ ಯುವಕರಿಗೆ ಯಾರೂ ಕನ್ಯೆ ಕೊಡ್ತಿಲ್ವಂತೆ. ಹೀಗಂತ ಇಲ್ಲಿನ ಯುಕವರೇ ಗೋಳಾಡ್ತಿದ್ದಾರೆ. ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಯುವಕರ ಹಾಗು ಪೋಷಕರ ಗೋಳಿನ ಮಾತುಗಳಿವು. ಮಲಪ್ರಭಾ ನದಿಯ ಸಂತ್ರಸ್ತರ ಗೋಳು ಇದು. ಅಂದಹಾಗೆ ಈ ಗ್ರಾಮದ ಜನರಿಗೆ ವಾಸಿಸೋಕೆ ಯೋಗ್ಯವಾದ ಒಂದೇ …
Read More »ಬ್ಲ್ಯಾಕ್ ಮೇಲ್ ಮಾಡಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಹೊಸ ಬಾಂಬ್.!
ವಿಜಯಪುರ : ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೇ ಬ್ಲಾಕ್ ಮೇಲ್ ಮೂಲಕವಾಗಿದೆ. ಬೇರೆ ಯಾರನ್ನೇ ಸಿಎಂ ಮಾಡಿದ್ರೇ.. ಸರ್ಕಾರವನ್ನು ಬೀಳಿಸುತ್ತೇನೆ ಎಂಬುದಾಗಿ ಹೆದರಿಸಿಯೇ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರೋದು. ಸಿಎಂ ಪಟ್ಟಿಯಲ್ಲಿ ಹೆಸರು ಇದ್ದಿದ್ದೇ ನನ್ನದು ಎಂಬುದಾಗಿ ಶಾಸಕ ಬಸವನಗೌಡ ಪಾಟೀಲ್ ಬಿಗ್ ಬಾಂಬ್ ಸಿಡಿಸಿದ್ದಾರೆ. ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಡಿಯೂರಪ್ಪ ಅವರೇ ನಾನು ಸಿಎಂ ಆಗೋದನ್ನು ತಪ್ಪಿಸಿದ್ದು. ಇದಕ್ಕೆ …
Read More »ಹಳಿಯಾಳ: ಕಠಿಣ ಕ್ರಮಕ್ಕೆ ನೌಕರರ ಆಗ್ರಹ
ಹಳಿಯಾಳ: ತಾಲ್ಲೂಕಿನ ಭಾಗವತಿ ಗ್ರಾಮದ ಭೀಮನಳ್ಳಿ ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಮಹಿಳಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಳಿಯಾಳ ತಾಲ್ಲೂಕು ಘಟಕದ ವತಿಯಿಂದ ಗ್ರೇಡ -2 ತಹಶೀಲ್ದಾರ್ ರತ್ನಾಕರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಭಾಗವತಿ ಅರಣ್ಯ ವ್ಯಾಪ್ತಿಯ ಭೀಮನಳ್ಳಿಯಲ್ಲಿ ಕರ್ತವ್ಯ ನಿರತ ಅರಣ್ಯ ಇಲಾಖೆಯ ಅಧಿಕಾರಿ ಸ್ನೇಹಾ ಶಿವಾಜಿ ತಳವಾರ ಇವರ ಮೇಲೆ ಕರ್ತವ್ಯ ನಿರ್ವಹಿಸುವಾಗ ಕರ್ತವ್ಯಕ್ಕೆ ಅಡ್ಡಿ …
Read More »
Laxmi News 24×7