Breaking News

ರಾಜಕೀಯ

ಕೃಷ್ಣಾ ನದಿ ಅವಾಂತರ: ಗುಡಿಸಲಿಗೆ ನುಗ್ಗಿದ ನೀರು; ಹೊರಬರಲು ಪರದಾಡಿದ ಮೀನುಗಾರರು

ಯಾದಗಿರಿ: ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮ ಜಲಾವೃತಗೊಂಡ ಮನೆಗಳಿಂದ ಹೊರಬರಲು ಮೀನುಗಾರರು ಪರದಾಡಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕದರಾಪುರದಲ್ಲಿ ನಡೆದಿದೆ. ಕೃಷ್ಣಾ ನದಿಗೆ 4 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕದರಾಪುರದ 40 ಮೀನುಗಾರರ ಗುಡಿಸಲುಗಳು ಜಲಾವೃತಗೊಂಡಿವೆ. ಅಪಾರ ಪ್ರಮಾಣದಲ್ಲಿ ನೀರು ಗುಡಿಸಲು ನುಗ್ಗಿದ್ದರಿಂದ ಹೊರಬರಲು ಪರದಾಡಿದ ಮೀನುಗಾರರು ತೆಪ್ಪದ ಮೂಲಕ ಹೊರ ಬಂದಿದ್ದಾರೆ. …

Read More »

ಎಟಿಎಂ/ಡೆಬಿಟ್​ ಕಾರ್ಡ್ ಇಲ್ಲದೆಯೂ ಎಚ್​ಡಿಎಫ್​ಸಿ ಎಟಿಎಂನಲ್ಲಿ ಕ್ಯಾಶ್​ ವಿಥ್​ ಡ್ರಾ ಹೀಗೆ ಮಾಡಿ

ಬ್ಯಾಂಕ್​ ಗ್ರಾಹಕರು ಎಟಿಎಂ ಕಾರ್ಡ್​ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್​ಗಳಿಂದ (ಎಟಿಎಂ) ಹಣ ವಿಥ್​ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್​ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಈ ಸೌಲಭ್ಯ …

Read More »

ರೈಲ್ವೆ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್‌; IRCTC ಹೊಸ ಮಾರ್ಗಸೂಚಿ…

ನವದೆಹಲಿ, ಜುಲೈ 30: ರೈಲಿನಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ IRCTC (ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ. ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಈ ಹೊಸ ವಿಧಾನದಲ್ಲಿ ಕೇವಲ 50 ರಿಂದ 60 ಸೆಕೆಂಡುಗಳಲ್ಲಿ ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಕೊರೊನಾ ಕಾರಣವಾಗಿ IRCTC …

Read More »

ಕೆರೆಗೆ ಉರುಳಿದ KSRTC ಬಸ್​​​-

ಶಿವಮೊಗ್ಗ: ಎದುರಿಗೆ ಬಂದ ಬೈಕ್​ ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್ಸೊಂದು ಕೆರೆಗೆ ಉರುಳಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಕಾಸ್ಪಾಡಿ ಕ್ರಾಸ್ ನ ಬಳಿ ನಡೆದಿದೆ.     ಸಾಗರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಬೈಕೊಂದು ಎದುರಾಗಿದೆ. ಈ ಸಂದರ್ಭದಲ್ಲಿ ಬಸ್​ ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಕೆರೆಗೆ ಉರುಳಿದೆ. ಪರಿಣಾಮ ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, …

Read More »

ಸಿಎಂಗೂ ಮೊದಲೇ ದೆಹಲಿ ಸೇರಿರುವ ಸಚಿವಾಕಾಂಕ್ಷಿಗಳು; ಮಂತ್ರಿ ಸ್ಥಾನಕ್ಕಾಗಿ ಎಂ.ಪಿ.ಕುಮಾರಸ್ವಾಮಿ ನೇರ ಲಾಬಿ

ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಸಿಎಂ ದೆಹಲಿ ಭೇಟಿಗೂ ಮೊದಲೇ ಸಚಿವಾಕಾಂಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮಂತ್ರಿ ಸ್ಥಾನಕ್ಕಾಗಿ ನೇರವಾಗಿ ವರಿಷ್ಠರ ಬಳಿ ಲಾಬಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕುಮಾರಸ್ವಾಮಿ, ಈ ಹಿಂದೆ 17 ಶಾಸಕರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂಬ ಅನಿವಾರ್ಯ ಇತ್ತು ಹಾಗಾಗಿ ನಾವೆಲ್ಲ ತಾಳ್ಮೆಯಿಂದ ಇದ್ದೆವು. …

Read More »

ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ | ಬೇಕಿತ್ತಾ ಈ ಸರ್ಕಾರ..?

ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ.. ನೆರೆಗೆ ಉತ್ತರ ತತ್ತರಿಸುತ್ತಿದ್ದರೂ ಯಾಕೀ ವಿಳಂಬ..? ಸುಮ್ನೆ ಟೈಂ ಪಾಸ್ ಗೆ ಸಿಎಂ ಆದ್ರಾ ಬಾಮ್ಮಾಯಿ ಸಾಹೇಬ್ರೆ..? ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ಮುಖ್ಯಮಂತ್ರಿ ಬದಲಾದರೂ ರಾಜ್ಯದ ಜನರ ಹಣೆಬರಹ ಬದಲಾಗೋ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಕೊರೊನಾ ಮೂರನೇ ಅಲೆಯ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಇನ್ನೊಂದೆಡೆ ಜಲಾಸುರ ಉತ್ತರ ಕರ್ನಾಟಕವನ್ನು ನುಂಗುತ್ತಾ ಬರುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಕಾಯಬೇಕಿದ್ದ …

Read More »

ವಲಸಿಗರ ಕೈ ಬಿಟ್ರಾ ಬಿ.ಎಸ್.ಯಡಿಯೂರಪ್ಪ..?

ಚಾಮರಾಜನಗರ : ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದು ಸಚಿವರಾಗಿದ್ದ 17 ಮಂದಿ ಶಾಸಕರಿಗೆ ಬಿಎಸ್ ವೈ ಶಾಕ್ ನೀಡಿದ್ದಾರೆ. ಅವರಿಗೆ ಮತ್ತೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ – ಜೆಡಿಎಸ್ ನಲ್ಲಿದ್ದ ಶಾಸಕರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಿದ್ದ ಬಿಎಸ್ ವೈ ಕೊಟ್ಟ ಮಾತಿನಂತೆ ಅವರಿಗೆ ಸಚಿವ …

Read More »

133 ವರ್ಷ ಹಳೆಯ ಕನ್ನಡ ಶಾಲೆಯನ್ನ ದತ್ತು ಪಡೆದ ಕಿಚ್ಚಸುದೀಪ್​ ತಂಡ

ಶಿವಮೊಗ್ಗ: ಜಿಲ್ಲೆಯ ಸುಮಾರು 133 ವರ್ಷ ಹಳೆಯ ಕನ್ನಡ ಶಾಲೆಯನ್ನ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ದತ್ತು ಪಡೆದಿದೆ. ಈ ಬಗ್ಗೆ ಶಿವಮೊಗ್ಗ ಕ್ಷೇತ್ರಶಿಕ್ಷಣಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ನಗರದ ಬಿಹೆಚ್​ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನ ಕಿಚ್ಚಸುದೀಪ್​ ತಂಡ ದತ್ತು ಪಡೆದಿದ್ದು, ಶಾಲೆಯನ್ನ ಅಭಿವೃದ್ಧಿ ಪಡಿಸಲು ಪಣ ತೊಟ್ಟಿದೆ. ಈಗಾಗಲೇ ನೂರಾರು ಶಾಲೆಗಳನ್ನ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಕೆಲಸವನ್ನ ಈ ಕಿಚ್ಚ ಸುದೀಪ್​ ಚಾರಿಟಬಲ್​ಟ್ರಸ್ಟ್​ ಮಾಡುತ್ತಿದ್ದು, ಈ ಕಾರ್ಯಕ್ಕೆ ಅಪಾರ …

Read More »

ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ

ಇಂದು ನೂರಾರು ರಾಜಕೀಯ ಸುದ್ದಿಗಳ ನಡುವೆ ಇದೊಂದು ಸುದ್ದಿ ಪ್ರಾಮುಖ್ಯತೆ ಪಡೆಯಲೇ ಇಲ್ಲ! ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಒಲಿಂಪಿಕ್ಸ್ ಕೂಟದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಕೊಲಂಬಿಯಾದ ವೇಲೆಂಶಿಯ ಎಂಬ ಬಾಕ್ಸರ್ ಗೆ ಭಾರೀ ಫೈಟ್ ಕೊಟ್ಟು 3-2 ಅಂಕಗಳಿಂದ ಸೋತು ರಿಂಗ್ಸ್ ನಿಂದ ನಿರ್ಗಮಿಸುವಾಗ ಆಕೆಯ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಯಾವುದೇ ಮಾಧ್ಯಮಕ್ಕೆ ಕೂಡ TRP ಕಂಟೆಂಟ್ ಆಗಿಲ್ಲ. ಇನ್ನು ಮುಂದೆ ಮೇರಿ ಕೋಮ್ ಬಾಕ್ಸಿಂಗ್ …

Read More »

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಬಜಪೆ: ಎಷ್ಟು ಪ್ರಯತ್ನ ಪಟ್ಟರೂ ಆಧಾರ್‌ ಕಾರ್ಡ್‌ ಪಡೆಯಲು ಸಾಧ್ಯವಾಗದೆ ಇಲ್ಲೊಬ್ಬ ವಿಶೇಷ ಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್‌ನ ತೆಂಕ ಎಕ್ಕಾರು ಪಲ್ಲದ ಕೋಡಿ ಮುರ ಮನೆಯ ಪದ್ಮನಾಭ ಗೌಡ – ಮೀನಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ (23) ಸಂತ್ರಸ್ತ ಯುವತಿ. ಕೂಲಿ ಕಾರ್ಮಿಕ ದಂಪತಿಗೆ ನಾಲ್ವರು ಮಕ್ಕಳು. ಧನ್ಯಶ್ರೀ ಹುಟ್ಟಿನಿಂದ ಅಂಗವೈಕಲ್ಯ ಮತ್ತು ಮಧ್ಯಮ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ. ದಿನಗೂಲಿ …

Read More »