Breaking News

ರಾಜಕೀಯ

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇಂಧನ ದರ ಇಳಿಸಲು GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ವಿದ್ಯುತ್..?

ನವದೆಹಲಿ: ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ಹೊರೆ ಇಳಿಸಲು ಇವುಗಳನ್ನು GST ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ. ನೀತಿ ಆಯೋಗ ಶತಕದ ಗಡಿದಾಟಿದ ಇಂಧನ ದರ ಕಡಿಮೆ ಮಾಡಲು ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೆ ತರಲು ಚಿಂತನೆ ನಡೆಸಿದೆ. ಈಗಾಗಲೇ ಶತಕದ ಗಡಿ ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲು ಜಿಎಸ್ಟಿ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಲ್ಲಿಸಲಾಗಿದೆ. ವಿದ್ಯುತ್ ಕೂಡ ಜಿಎಸ್ಟಿ ವ್ಯಾಪ್ತಿಗೆ ತರಲು …

Read More »

ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ?: ಎಚ್‌.ಡಿ.ಕುಮಾರಸ್ವಾಮಿ

ಹಿರೇಕೆರೂರು: ‘ನಾನು ₹25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಕ್ಕೆ, ನನಗೇನು ಫಲ ಕೊಟ್ಟಿದ್ದೀರಿ? ಜನತೆ ಜೊತೆ ಚೆಲ್ಲಾಟ ಆಡುವ ಸರ್ಕಾರ ‌ತರಬೇಡಿ, ಒಮ್ಮೆ ನನಗೆ ಸಂಪೂರ್ಣ ಬಹುಮತ ನೀಡಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಪಟ್ಟಣದ ಸರ್ವಜ್ಞ ವೃತ್ತದ ಸಮೀಪ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಜಯಾನಂದ ಜಾವಣ್ಣನವರ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು. ಯೋಜನೆಗಳ ಹೆಸರಿನಲ್ಲಿ ಗುತ್ತಿಗೆದಾರರ ಬಳಿ …

Read More »

ಮಾಲ್ಡೀವ್ಸ್ ಪ್ರವಾಸದಿಂದ ಹಿಂದಿರುಗಿದ ಬಿಎಸ್ ಯಡಿಯೂರಪ್ಪ; 20 ದಿನಗಳ ನಂತರ ರಾಜ್ಯಾದ್ಯಂತ ಪ್ರವಾಸ

20 ದಿನಗಳ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆಗೂ ಒಂದೊಂದು ದಿನ ಭೇಟಿ ಕೊಡುತ್ತೇನೆ. ಜಿಲ್ಲಾವಾರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತೇನೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಬಿ.ಎಸ್. ಯಡಿಯೂರಪ್ಪ ನಿರಾಳರಾಗಿದ್ದರು. ಕುಟುಂಬದೊಂದಿಗೆ ಸಮಯ ಕಳೆಯುವ ಯೋಚನೆಯಲ್ಲಿದ್ದರು. ಐದಾರು ದಿನಗಳ ಹಿಂದೆ …

Read More »

ಹೊಸ ಮೈಲಿಗಲ್ಲಿನತ್ತ ವಿರಾಟ್ ಕೊಹ್ಲಿ, ತನ್ನದೇ ದಾಖಲೆ ಅಳಿಸಿ ಹಾಕಲಿರುವ ರಿಷಭ್ ಪಂತ್

ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ನಾಳೆ ಆಗಸ್ಟ್ 15 ರಿಂದ ಲೀಡ್ಸ್​ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡಿದ್ದರೆ, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್​ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಟೆಸ್ಟ್ …

Read More »

ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ

ಮೈಸೂರು: ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆಯಾಗಿದೆ. ಗಣಪತಿ ಜಕಾತಿ ಎಂಬ ಶಾಲಾ ವಾರ್ಡನ್‌ಗೆ 3 ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ 3ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆರಾಲ್ಡ್ ಆರ್ ಮೆಂಡೋನ್ಸ್ ತೀರ್ಪು ನೀಡಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ಗೋಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ವಿರುದ್ಧ …

Read More »

ಕೇವಲ 10 ರೂಪಾಯಿಗಳಿಗೆ ಎಲ್ಲಾ ರೀತಿಯ ಪಠ್ಯಪುಸ್ತಕಗಳ ಪಿಡಿಎಫ್

ಬೆಂಗಳೂರು: ಮಾರಕ ಕೊರೋನಾ ಲಾಕ್ಡೌನ್​​ನಿಂದ ಶಾಲಾ ಕಾಲೇಜುಗಳನ್ನು ಸುಮಾರು ಎರಡು ವರ್ಷಗಳಿಂದ ಬಂದ್​​ ಮಾಡಿದ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯ ಅದೋಗತಿಗೆ ತಲುಪಿದೆ. ಪೋಷಕರು ಯಾವುದೇ ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗಲೇ ಡಿಜಿಟಲ್​​ ವೆಬ್​ಸೈಟ್​​ ಒಂದು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೇವಲ 10 ರೂಪಾಯಿಗಳಿಗೆ ಎಲ್ಲಾ ರೀತಿಯ ಪಠ್ಯಪುಸ್ತಕಗಳ ಪಿಡಿಎಫ್​ ಡೌನ್ಲೋಡ್​ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಹೌದು, ಇಂಗ್ಲೀಷ್​​ ಮತ್ತು ಮ್ಯಾಥ್ಸ್​​ ವರ್ಕ ಬುಕ್ಸ್ ಸೇರಿದಂತೆ ಎಲ್ಲಾ ರೀತಿಯ …

Read More »

4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

ಮಂಡ್ಯ: ಕಳೆದರಡು ವರ್ಷಗಳಿಂದ ಮಾಹಾಮಾರಿ ಕೊರೊನಾ ನಮ್ಮ ಜೀವನದಲ್ಲಿ ಆಡಿದ ಆಟ ಅಷ್ಟಿಷ್ಟಲ್ಲ. ಕೆಲವು ಬದುಕುಗಳನ್ನು ಕೊರೊನಾ ಬೀದಿಗೆ ತಂದ್ರೆ, ಇನ್ನು ಕೆಲವರ ಬದುಕಿಗೆ ಲಾಕ್​​ಡೌನ್​ ಎಂಬ ಅಸ್ತ್ರದ ಮೂಲಕ ಮನೆಯಲ್ಲೇ ಇರಿಸಿ ಸಂಬಂಧಗಳ ಮೌಲ್ಯ ಏನೆಂಬುದನ್ನು ತೋರಿಸಿಕೊಟ್ಟಿತು.   ಇದೆಲ್ಲದರ ನಡುವೆ ಕೊರೊನಾ ಹೊಡೆತಕ್ಕ ಎಷ್ಟೋ ಕುಟುಂಬಗಳು ಹೈರಾಣಾಗಿ ಹೋಗಿದ್ದು, ಮಂಡ್ಯದಲ್ಲಿ ಕೊರೊನಾ ಹೊಡೆತಕ್ಕೆ ಕಿರುತೆರೆ ಕಲಾವಿದನ 4 ವರ್ಷದ ಪ್ರೀತಿ ಕೊಚ್ಚಿ ಹೋಗಿದ್ದು, ಕಲಾವಿದ ಕಂಗಾಲಾಗಿದ್ದಾನೆ. ಹೌದು …

Read More »

ಸಾರಿಗೆ ನೌಕರರ ಸಂಬಳಕ್ಕೆ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಸಂಬಳಕ್ಕಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಒಟ್ಟು 60.82 ಕೋಟಿ ಹಣವನ್ನ ಬಿಡುಗಡೆ ಮಾಡಿ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಸತ್ಯವತಿ ಆದೇಶ ಹೊರಡಿಸಿದ್ದಾರೆ. KSRTC, ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಸಿಬ್ಬಂದಿ ಜುಲೈ ತಿಂಗಳ ಸಂಬಳಕ್ಕಾಗಿ ಶೇಕಡ 25% ರಷ್ಟು ಹಣವನ್ನ ನೀಡಿದೆ. KSRTCಗೆ 27.74 ಕೋಟಿ, ವಾಯುವ್ಯ ಸಾರಿಗೆ ನಿಗಮಕ್ಕೆ 17.48 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 15.61 …

Read More »

ಬಿಜೆಪಿ ಸೋಲಿಸಲು ಜಾಣ ನಡೆ ಇಡಬೇಕಿದೆ; ವಿಪಕ್ಷಗಳಿಗೆ ಶಿವಸೇನಾ ಸಲಹೆ

ಮುಂಬೈ, ಆಗಸ್ಟ್‌ 23: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಆತುರಪಡದೇ ಚುರುಕು ಹಾಗೂ ಜಾಣ ನಡೆ ಇಡಬೇಕು ಎಂದು ಶಿವಸೇನೆ ಸಲಹೆ ನೀಡಿದೆ. 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ವಿರೋಧ ಪಕ್ಷಗಳು ಅಣಿಯಾಗುತ್ತಿದ್ದು, ಬಿಜೆಪಿ ಮಣಿಸಲು ಕಾರ್ಯತಂತ್ರಗಳ ರೂಪಿಸುವ ಕುರಿತು ಸಭೆಯೂ ನಡೆದಿದೆ. ‘ನರೇಂದ್ರ ಮೋದಿ-ಶಾ ಅವರನ್ನು ಯುದ್ಧದಲ್ಲಿ ಸೋಲಿಸಬಹುದು. ಆದರೆ ಹೋರಾಟಕ್ಕೆ ಬೇಕಿರುವ ಒಂದೇ ಒಂದು ಆಯುಧ ಎಂದರೆ ಬಲವಾದ ಆತ್ಮವಿಶ್ವಾಸ’ ಎಂದು ಶಿವಸೇನೆ ಹೇಳಿದೆ. …

Read More »

ಪೊಲೀಸ್ ರು ಬೇಜವ್ದಾರಿ ತೋರಿದರೆ ಕೆಲಸದಿಂದ ಅಮಾನತು: ಲಕ್ಷ್ಮಣ ನಿಂಬರಗಿ

ಬೆಳಗಾವಿ: ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಗಳಿಗೆ ಡಿಸಿಪಿ ಡಾ. ವಿಕ್ರಮ ಅಮಟೆ ಅವರು ಚುರುಕು ಮುಟ್ಟಿಸಿದ ಬೆನ್ನಲ್ಲೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಅಕ್ರಮ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ರು ಬೇಜವ್ದಾರಿ ತೋರಿದರೆ ಕೆಲಸದಿಂದ ಅಮಾನತುಗೊಳ್ಳಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ, ಮಟಕಾ, ಜೂಜಾಟ ಹಾಗೂ ಮಾದಕ ವಸ್ತುಗಳ ಮಾರಾಟ ಮಾಡುವವರನ್ನು ಡಿಸಿಪಿ ಅವರು ಹೆಡೆಮುರಿಕಟ್ಟುತ್ತಿದ್ದಾರೆ. ಆರೋಪಿಗಳ ವಿರುದ್ಧ …

Read More »