Breaking News

ರಾಜಕೀಯ

ಡಿಕೆಶಿಗೆ ಇನ್ನೂ ತಂಡ ಕಟ್ಟಿಕೊಳ್ಳೋಕೆ ಆಗ್ತಿಲ್ಲ : ಸಿ.ಟಿ.ರವಿ

ಕಲಬುರಗಿ : ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಿಗೆ ಇನ್ನೂ ಕೂಡ ತಂಡ ಕಟ್ಟಿಕೊಳ್ಳೋಕೆ ಆಗ್ತಿಲ್ಲ, ಪಕ್ಷದ ತಂಡವನ್ನೇ ಕಟ್ಟಿಕೊಳ್ಳೊಕ್ಕೆ ಆಗದಿರೋರು ಅಧಿಕಾರಕ್ಕೆ ಬರಲು ಹಗಲುಗನಸು ಕಾಣುವ ನೈತಿಕತೆ ಎಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಮೂರು ಮಹಾನಗರಪಾಲಿಕೆಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ …

Read More »

ಕಲ್ಯಾಣ ಕರ್ನಾಟಕ ಹೆಸರು ಬದಲಾಯಿಸಿದಷ್ಟೇ ಬಿಜೆಪಿ ಸಾಧನೆ: ಕುಮಾರಸ್ವಾಮಿ

ಕಲಬುರಗಿ, ;ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದಷ್ಟೇ ಬಿಜೆಪಿ ಸಾಧನೆಯಾಗಿದೆ ಹೊರತು ಹಿಂದುಳಿದ ಈ ಪ್ರದೇಶದ ಅಭಿವೃದ್ಧಿಗೆ ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಇಂದಿಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆ ಡಿ ಎಸ್ ನಿಂದ 42 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಲಿಷ್ಟ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಪಾಲಿಕೆ ಚುನಾವಣೆಯ ಮೂಲಕ ಜೆ ಡಿ ಎಸ್ …

Read More »

ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆಯಿಲ್ಲ: ಅರುಣ್ ಸಿಂಗ್

ಮೈಸೂರು: ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಧಿಕೃತವಾಗಿ, ಅನಧಿಕೃತವಾಗಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಹೊಂದಾಣಿಕೆ ಇಲ್ಲ. ಜೆಡಿಎಸ್ ಈಸ್ ಸಿಂಕಿಂಗ್, ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ನಮ್ಮ ಸಂಕಲ್ಪ. ಜೆಡಿಎಸ್, ಕಾಂಗ್ರೆಸ್ ಎರಡೂ ಸರ್ಕಾರಗಳನ್ನು ಜನ ನೋಡಿದ್ದಾರೆ. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮದು ವಿಶ್ವದ ಅತಿ …

Read More »

ಮಳೆಯಿಂದ ಹಾನಿ: ಉತ್ತರ ಕನ್ನಡದಲ್ಲಿ ಸರ್ವಋತು ರಸ್ತೆ ನಿರ್ಮಾಣ

ಕಾರವಾರ, ಆಗಸ್ಟ್ 30: “ಈ ವರ್ಷದ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳ ಪುನರ್‌ನಿರ್ಮಾಣಕ್ಕೆ ಮತ್ತು ಇತರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ,” ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು. ಇಂದು (ಸೋಮವಾರ) ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಸಿ.ಸಿ. ಪಾಟೀಲ್, …

Read More »

ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರು ಡಿಬಾರ್

ಕಲಬುರಗಿ, ; ಗುಲಬರ್ಗಾ ವಿಶ್ವವಿದ್ಯಾಲಯವು ಜರುಗಿಸುತ್ತಿರುವ ಸ್ನಾತಕ ಪದವಿ ಕೋರ್ಸಿನ ಒಂದು ಮತ್ತು ಮೂರನೇ ಸೆಮೆಸ್ಟರ್‍ನ ಮುಂದೂಡಲಾದ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ಈ ಪ್ರಯುಕ್ತ ಕುಲಪತಿಗಳು ಪದವಿ ಪರೀಕ್ಷೆಗಳ ಪರಿವೀಕ್ಷಣೆಗಾಗಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಹಾಗಾಂವ ಕ್ರಾಸ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪೂರನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಕುಲಪತಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಬ್ಬೊಬ್ಬ ವಿದ್ಯಾರ್ಥಿನಿಯರನ್ನು ಪರೀಕ್ಷೆಯಿಂದ ಡಿಬಾರ್ …

Read More »

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

ಮಂಗಳೂರು: ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಂಭಿಗಳಾಗಲು ಹಾಗೂ ಉದ್ಯಮಶೀಲರಾಗಲು ಸರಕಾರ ಎನ್.ಆರ್.ಎಲ್.ಎಂ ಯೋಜನೆ ಮೂಲಕ ರಾಜ್ಯದ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ.ಗಳಿಗೂ ಹೆಚ್ಚಿನ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುರ್ನಾಡು ಗ್ರಾಮ ಪಂಚಾಯತಿಯ ಮುಡಿಪು ಗ್ರಾಮದಲ್ಲಿ ಬಂಜರು ಬಿದ್ದಿದ್ದ ಭೂಮಿಯನ್ನು ಸಾಗುವಳಿ ಮಾಡಿ ಭತ್ತ ಬೆಳೆಯುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ …

Read More »

ಅಂಗಡಿಯವನಿಗೆ ಹಣ ಕೊಡುವ ಬದಲು ತಮ್ಮ ಮಕ್ಕಳ ಮೇಲೆ ರೇಪ್ ಮಾಡಲು ಬಿಟ್ಟ ತಾಯಂದಿರು!

ಚೆನ್ನೈ : ವೈರಲ್ ವಿಡಿಯೋದಲ್ಲಿ ಕ್ರೂರಿ ತಾಯಿ ತನ್ನ ಮಗುವನ್ನು ಅಮಾನುಷವಾಗಿ ಹಿಂಸಿಸಿ, ಕೊನೆಗೆ ಅರೆಸ್ಟ್ ಆದ ಪ್ರಕರಣ ಕಣ್ಣ ಮುಂದೆ ಇರುವಾಗಲೇ ಮತ್ತೊಂದು ಅಘಾತಕಾರಿ ಪ್ರಕರಣ ಚೆನ್ನೈನಲ್ಲಿ ದಾಖಲಾಗಿದೆ. ಅಂಗಡಿಯಲ್ಲಿ ಖರೀದಿಸಿದ ವಸ್ತುಗಳಿಗೆ ಹಣ ನೀಡುವ ಬದಲು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲು ಅಂಗಡಿ ಮಾಲೀಕನಿಗೆ ತಾಯಂದಿರೇ ಅನುಮತಿ ನೀಡಿರುವ ಅತಿದಾರುಣ ಘಟನೆ ಬೆಳಕಿಗೆ ಬಂದಿದೆ. ಅಕ್ಕ-ತಂಗಿಯರಿಬ್ಬರು ಅಂಗಡಿ ಮಾಲೀಕನಿಗೆ ಹಣ ಕೊಡುವ ಬದಲು …

Read More »

ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧನೆ

ನವದೆಹಲಿ: ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿರುವ ಕರ್ನಾಟಕದ ಬಿ.ವಿ.ನಾಗರತ್ನ ಸೇರಿದಂತೆ 9 ನೂತನ ನ್ಯಾಯಮೂರ್ತಿಗಳಿಗೆ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಮಂಗಳವಾರ ಪ್ರತಿಜ್ಞಾವಿಧಿ ಬೋಧಿಸಿದರು. ಇದರೊಂದಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 33ಕ್ಕೆ ಏರಿದಂತಾಗಿದೆ. ಸುಪ್ರೀಂಕೋರ್ಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9 ನ್ಯಾಯಮೂರ್ತಿಗಳು ಏಕಕಾಲಕ್ಕೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಓಕಾ, ವಿಕ್ರಮ್‌ ನಾಥ್‌, ಜಿತೇಂದ್ರಕುಮಾರ್‌ ಮಾಹೇಶ್ವರಿ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನ, ಸಿ.ಟಿ.ರವಿಕುಮಾರ್, ಎಂ.ಎಮ.ಸುಂದ್ರೇಶ್‌, ಬೇಲಾ ಎಂ.ತ್ರಿವೇದಿ ಹಾಗೂ ಪಿ.ಎಸ್‌.ನರಸಿಂಹ ಅವರು …

Read More »

KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

ನೆಲಮಂಗಲ: ವಿದ್ಯಾರ್ಥಿಗಳು ಹಾಗೂ ಜನರು ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಿದರು. ಕೊರೊನಾ ಆತಂಕದ ನಡುವೆಯೇ ಇತ್ತೀಚೆಗೆ ಶಾಲಾ ಕಾಲೇಜುಗಳನ್ನು ಓಪನ್ ಮಾಡಿದ್ದು, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ಸಾಕಷ್ಟು ಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗ್ಗೆ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಬಸ್‍ಗಳು ಸರಿಯಾಗಿ ಬರುತ್ತಿಲ್ಲ. ಬರುವಂತಹ ಎಲ್ಲಾ ಬಸ್‍ಗಳು ಸರ್ವೀಸ್ ರಸ್ತೆಯಲ್ಲಿ ಚಲಿಸದೆ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿವೆ. ಈ …

Read More »

ಮೈಸೂರು ಗ್ಯಾಂಗ್ ರೇಪ್ ಸಂತ್ರಸ್ಥೆ ಫೋನ್ ಸ್ವಿಚ್‍ ಆಫ್

ಮೈಸೂರು,; ಗ್ಯಾಂಗ್‍ರೇಪ್‍ಗೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದಾಳೆ. ನಾವು ಫೋನ್ ಮಾಡಿದಾಗ ಕೆಲವು ವಿವರ ನೀಡುವಂತೆ ಸಂತ್ರಸ್ತೆ ಮತ್ತು ಫೋಷಕರಿಗೆ ಪೊಲೀಸರು ತಾಕೀತು ಮಾಡಿ ಮೈಸೂರಿನಿಂದ ಕಳುಹಿಸಿದ್ದರು. ಸದ್ಯ ಮುಂಬೈನಲ್ಲಿರುವ ಯುವತಿ ಮತ್ತು ಫೋಷಕರು ಫೋನ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸಿಕ್ಕಿರುವ ಕಾರಣ ಸಂತ್ರಸ್ತೆ ಮುಂದೆ ಐಡೆಂಟಿಫಿಕೇಷನ್ ಪರೇಡ್ ಮಾಡಿಸಬೇಕು. ಆದರೆ, ಸಂತ್ರಸ್ತೆ ಫೋನ್ ಪಿಕ್ ಮಾಡದ ಕಾರಣ ಪೊಲೀಸರು ಮುಂದೇನು ಮಾಡುವುದು ಎಂದು ಚಿಂತಿತರಾಗಿದ್ದಾರೆ. …

Read More »