ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಎರಡು ವರ್ಷದಿಂದಲೂ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದು ಮಾತ್ರವಲ್ಲ, ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದಾರೆ. ಬಂಧಿತ ಐವರು ಆರೋಪಿಗಳಲ್ಲಿ ಒಬ್ಬನಿಗೆ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟವಿತ್ತು. ಒಬ್ಬ ಮಹಿಳೆಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆ, ಇನ್ನುಳಿದವರು ಚಿನ್ನಾಭರಣ ಮತ್ತು ಹಣಕ್ಕೆ ಆಸೆ ಬೀಳುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಕೃತ್ಯ ಎಸಗಿರುವುದಾಗಿ ಆರೋಪಿಗಳೆಲ್ಲರೂ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ವಯಸ್ಸಿನ ವ್ಯತ್ಯಾಸವನ್ನೇ …
Read More »ಬಸ್‍ಗೆ ದಾರಿ ಬಿಡದೇ ಬೈಕ್‍ನಲ್ಲಿ ಯುವಕನ ಪುಂಡಾಟ – ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನ : ಸಾರಿಗೆ ಬಸ್‍ಗೆ ದಾರಿ ಬಿಡದೇ ಪುಂಡಾಟ ಮೇರೆದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್.ಪುರ ಬಳಿ ನಡೆದಿದೆ. ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ತನ್ನ ಹಿಂದೆ ಸಾರಿಗೆ ಬಸ್ ಬರುತ್ತಿದ್ದರು ಕೂಡ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಾ ಬಸ್‍ಗೆ ಅಡ್ಡ ಬರುತ್ತಿದ್ದ. ಡ್ರೈವರ್ ಹಾರ್ನ್ ಮಾಡಿದರೂ ಕೂಡ ರಸ್ತೆ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗ್‍ಜಾಗ್ ಮಾದರಿಯಲ್ಲಿ ಬೈಕ್ ಚಲಾಯಿಸಲಾರಂಭಿಸಿದ್ದಾನೆ. ಇದರಿಂದ …
Read More »ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ
ಒಂದುವರ್ಷದಿಂದ ಇವರು ಬಾಯಿ ಮುಚ್ಚಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಅವರ ಅಮಾನವೀಯ ಅಂತ್ಯಸಂಸ್ಕಾರ ಮಾಡಿತು ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟು ಒಂದು ವರ್ಷವಾಯಿತು. ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು. ಇವರು ಡಿ.ಕೆ ಶಿವಕುಮಾರ್ …
Read More »ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ನಂ.1: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ: ಕೋವಿಡ್ ಸಂದರ್ಭದ ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿದೆ. ಚಿಕಿತ್ಸೆ, ಔಷಧ, ಶವಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ಸಂಕಷ್ಟದ ಸಂದರ್ಭದಲ್ಲಿ ಆಸ್ತಿ ತೆರಿಗೆ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಸರಕಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಆಡಳಿತವಿದ್ದರೆ ಎರಡೇ ವರ್ಷಕ್ಕೆ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದು ಯಾಕೆ? ರಾಜೀನಾಮೆ ನೀಡುವ ಮೊದಲು ಮುಖ್ಯಮಂತ್ರಿಗಳು ಬಹಿರಂಗವಾಗಿ …
Read More »ಬಿಜೆಪಿಯವರು ಕ್ಷಮಾ ಯಾತ್ರೆ ಮಾಡಲಿ: ಸಲೀಂ ಅಹ್ಮದ್ ಟೀಕೆ
ಕಲಬುರ್ಗಿ: ‘ನಾಲ್ವರು ಕೇಂದ್ರ ಸಚಿವರು ಈಚೆಗೆ ಜನಾಶೀರ್ವಾದ ಯಾತ್ರೆ ನಡೆಸಿದರು. ಕೋವಿಡ್ ಸಂದರ್ಭದಲ್ಲಿ ಸಮರ್ಪಕವಾಗಿ ಬೆಡ್, ಆಮ್ಲಜನಕ, ರೆಮ್‌ಡೆಸಿವಿರ್ ಚುಚ್ಚುಮದ್ದು ನೀಡದೇ ವಿಫಲರಾಗಿದ್ದಕ್ಕೆ ಜನರ ಕ್ಷಮೆ ಕೇಳಲು ಕ್ಷಮಾ ಯಾತ್ರೆ ಮಾಡಬೇಕಿತ್ತು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಿಸಿದರು. ‘ರಾಜ್ಯದಲ್ಲಿ ಜನರು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದು, ಬೆಲೆ ಏರಿಕೆಯಿಂದಲೂ ತತ್ತರಿಸಿದ್ದಾರೆ. ಅಚ್ಛೆ ದಿನ್ ಭರವಸೆ ನೀಡಿ ಅತ್ಯಂತ ಕೆಟ್ಟ ದಿನಗಳಲ್ಲಿ ನರಳುವಂತೆ ಮಾಡಿದ್ದಕ್ಕೆ, ₹ 13 ಸಾವಿರ ಕೋಟಿ ಜಿಎಸ್‌ಟಿ …
Read More »ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ, ಕೋರ್ಟ್ ತೀರ್ಪಿಗೂ ತಲೆ ಕೆಡಿಸಿಕೊಳ್ಳದೆ ಹಣ ಹಿಂತಿರುಗಿಸಲು ಸತಾಯಿಸುತ್ತಿರುವ ಬ್ಯಾಂಕ್
ಆತ ಕಷ್ಟ ಪಟ್ಟು ದುಡಿದು, ಬ್ಯಾಂಕ್ನಲ್ಲಿ ಹಣ ಕೂಡಿಟ್ಟಿದ್ದ, ಇದೇ ಹಣದಲ್ಲಿ ಸಣ್ಣದೊಂದು ಸೂರು ಕಟ್ಟುವ ಕನಸು ಕಂಡಿದ್ದ, ಆದ್ರೀಗ ಆತನ ಫಿಕ್ಸ್ಡ್ ಡೆಪಾಸಿಟ್ ಅನಾಮತ್ತಾಗಿ ಲಪಟಾಯಿಸಲಾಗಿದೆ. ನ್ಯಾಯಾಲಯ ಪೂರ್ತಿ ಹಣ ವಾಪಾಸು ನೀಡುವಂತೆ, ತೀರ್ಪು ನೀಡಿದರೂ, ಬ್ಯಾಂಕ್ ಬಳಕೆದಾರರ ಹಣ ನೀಡದೆ ಸತಾಯಿಸುತ್ತಿದೆ. ಉಡುಪಿ ಜಿಲ್ಲೆಯ ಉಪ್ಪೂರಿನ ನಿವಾಸಿ ಹರೀಶ್ ಗುಡಿಗಾರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಬೆಂಗಳೂರು ತೊರೆಯುತ್ತಿದ್ದಂತೆ ತಮ್ಮ ಖಾತೆಯನ್ನ …
Read More »ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ
ಮೈಸೂರು: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಕಾಮುಕರ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮೈಸೂರಿಗೆ ತರಕಾರಿ ಹೊತ್ತು ಬರುತ್ತಿದ್ದ ರೇಪಿಸ್ಟ್ ಗಳಲ್ಲಿ ಇಬ್ಬರು ಮಾತ್ರ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು. ಉಳಿದವರು ಬಸ್ಸಿನಲ್ಲಿ ಬರುತ್ತಿದ್ದರು. ತರಕಾರಿ ಲೋಡ್ ಇಳಿಸಿದ ಮೇಲೆ ಖಾಲಿ ಗಾಡಿಯಲ್ಲಿ ಕುಳಿತು ಎಲ್ಲರೂ ಪಾರ್ಟಿ ಮಾಡಲು ಸವಾರಿ ಹೊರಡುತ್ತಿದ್ದರು. ನಿರ್ಜನ ಸ್ಥಳಗಳಲ್ಲಿ ಕೂರುವ ಪ್ರೇಮಿಗಳೆ ಈ ಕೀಚಕರ ಟಾರ್ಗೆಟ್ ಆಗಿರುತ್ತಿತ್ತು. ಯುವತಿ ಮೇಲೆ ಗ್ಯಾಂಗ್ …
Read More »ಕಾಲು ಕಳೆದಕೊಂಡ ಯುವಕನ ಚಿಕಿತ್ಸೆಗಾಗಿ ದಾನಿಗಳ ಮೊರೆ
ಮಂಗಳೂರು : ಎಲ್ಲರೂ ಚೆನ್ನಾಗಿರಬೇಕು ಎಲ್ಲರಿಗೂ ಒಳ್ಳೇದು ಮಾಡಬೇಕೆಂದು ಅನಿಸುದು ಸಹಜ ಆದ್ರೆ ಅಂತ ಮನಸ್ಸಿರುದು ತುಂಬಾ ಕಡಿಮೆ ಅಂತದ್ರಲ್ಲಿ “ಚೇತನ್ ಕುಮಾರ್ ” ಒಬ್ಬ ಬಹಳ ಸ್ವಚ್ಛ,ನಿಷ್ಕಲ್ಮಶ, ಪರೋಪಕಾರಿ ಮನುಷ್ಯ ಇಂದು ತನ್ನ ಪರೋಪಕಾರಿ ಮನೋಭಾವದಿಂದ ಸಾವು ಬದುಕಿ ನಡುವೆ ಹೊರಡ್ತಿದ್ದಾನೆ, ನಿಮ್ಮೆಲ್ಲರ ಸಹಾಯ, ಸಹಕಾರ ದೊರೆತರೆ ನನ್ನ ಸ್ನೇಹಿತ ಖಂಡಿತ ಗುಣಮುಖರಾಗಿ ಮರಳುವ ವಿಶ್ವಾಸ ವಿದೆ. ಇವತ್ತು ಬೆಳಿಗ್ಗೆ ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಜೋಕಟ್ಟೆ ಯ …
Read More »ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ : ನೂತನ ಡಿಸಿಯಾಗಿ ಎಂ ಕೂರ್ಮರಾವ್ ನೇಮಕ : ರಾಜ್ಯ ಸರ್ಕಾರ ಆದೇಶ
ಉಡುಪಿ : ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದದರ್ಶಿಯಾಗಿ ಜಗದೀಶ್ ಅವರನ್ನು ನೇಮಕ ಮಾಡಲಾಗಿದ್ದು, ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ ಕೂರ್ಮರಾವ್ ಅವರನ್ನು ನೇಮಕ ಮಾಡಲಾಗಿದೆ. ಅಂದಹಾಗೆ ಎಂ ಕೂರ್ಮರಾಬ್ ಈಶಾನ್ಯ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.
Read More »ಸಿಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ: 13ಕ್ಕೂ ಅಧಿಕ ಜನರ ಜೇಬಿಗೆ ಕತ್ತರಿ
ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಗೆ ಆಗಮಿಸಿದ್ದರು, ಕಾರ್ಯಕ್ರಮದ ವೇಳೆ 13ಕ್ಕೂ ಅಧಿಕ ಜನರ ಜೇಬಿಗೆ ಖದೀಮರು ಕತ್ತರಿ ಹಾಕಿ, ಒಂದೂವರೆ ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೊನ್ನಪ್ಪ ಅವರ ಜೇಬಿನಲ್ಲಿದ್ದ 50 ಸಾವಿರ ರೂ.ಗಳಲ್ಲಿ 49 ಸಾವಿರ ರೂ. ದೋಚಿದ್ದಾರೆ. ಹೊನ್ನಪ್ಪ ಮಾತ್ರವಲ್ಲದೆ …
Read More »
Laxmi News 24×7