Breaking News

ಮೈಸೂರು ಗ್ಯಾಂಗ್ ರೇಪ್ ಸಂತ್ರಸ್ಥೆ ಫೋನ್ ಸ್ವಿಚ್‍ ಆಫ್

Spread the love

ಮೈಸೂರು,; ಗ್ಯಾಂಗ್‍ರೇಪ್‍ಗೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದಾಳೆ. ನಾವು ಫೋನ್ ಮಾಡಿದಾಗ ಕೆಲವು ವಿವರ ನೀಡುವಂತೆ ಸಂತ್ರಸ್ತೆ ಮತ್ತು ಫೋಷಕರಿಗೆ ಪೊಲೀಸರು ತಾಕೀತು ಮಾಡಿ ಮೈಸೂರಿನಿಂದ ಕಳುಹಿಸಿದ್ದರು. ಸದ್ಯ ಮುಂಬೈನಲ್ಲಿರುವ ಯುವತಿ ಮತ್ತು ಫೋಷಕರು ಫೋನ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸಿಕ್ಕಿರುವ ಕಾರಣ ಸಂತ್ರಸ್ತೆ ಮುಂದೆ ಐಡೆಂಟಿಫಿಕೇಷನ್ ಪರೇಡ್ ಮಾಡಿಸಬೇಕು.

ಆದರೆ, ಸಂತ್ರಸ್ತೆ ಫೋನ್ ಪಿಕ್ ಮಾಡದ ಕಾರಣ ಪೊಲೀಸರು ಮುಂದೇನು ಮಾಡುವುದು ಎಂದು ಚಿಂತಿತರಾಗಿದ್ದಾರೆ. ಈ ಮೂಲಕ ಸಂತ್ರಸ್ತೆ ಪೊಲೀಸರ ತನಿಖೆಗೆ ಆರಂಭದ ದಿನದಿಂದ ಈ ತನಕ ಸಹಕಾರ ನೀಡುತ್ತಿಲ್ಲ. ಇದರಿಂದ ಈ ಕೇಸ್ ಕೋರ್ಟ್‍ನಲ್ಲಿ ಎಷ್ಟರ ಮಟ್ಟಿಗೆ ಗಟ್ಟಿಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.ಇನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸಂತ್ರಸ್ತೆಯ ಡಿಎನ್‍ಎ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಇದು ಸೂಕ್ಷ್ಮ ಪ್ರಕರಣವಾದ ಕಾರಣ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿರುವ ಪ್ರಾದೇಶಿಕ ವಿಧಿ-ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಸಂತ್ರಸ್ತೆ ಚಿಕಿತ್ಸೆ ಪಡೆದ ಆಸ್ಪತ್ರೆಗೆ ಭೇಟಿ ನೀಡಿ ಆಕೆಯ ಡಿಎನ್‍ಎ ಸ್ಯಾಂಪಲ್ ಸಂಗ್ರಹಿಸಿದ್ದಾರೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ