Breaking News

ರಾಜಕೀಯ

ಮ್ಮು&ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ : ಬಿಜೆಪಿಗೆ ಭರ್ಜರಿ ಮುನ್ನಡೆ

ನವದೆಹಲಿ : ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ 2024 ರ ಫಲಿತಾಂಶಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಇದೀಗ ಮತ ಎಣಿಕೆ ಆರಂಭವಾಗಿದೆ. ಜಮ್ಮು& ಕಾಶ್ಮೀರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಜಮ್ಮು& ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಮೈತ್ರಿ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.   ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ …

Read More »

ಮತ್ತೆ ಏರುಗತಿಯಲ್ಲಿ ಟೊಮೆಟೋ

ರಾಜ್ಯದಲ್ಲಿ ಕೆಲವು ದಿನಗಳಿಂದ ಟೊಮೆಟೋ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಖ್ಯಾತಿಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿ. ಟೊಮೆಟೋ 30ರಿಂದ 75 ರೂ. ವರೆಗೆ ಹಾಗೂ 15 ಕೆ.ಜಿ.ಯ ಬಾಕ್ಸ್‌ ಕನಿಷ್ಠ 500ರಿಂದ ಗರಿಷ್ಠ 1,100 ರೂ.ಗೆ ಮಾರಾಟವಾಗುತ್ತಿದೆ. ದೇಶದ ವಿವಿಧ ಮಹಾನಗರಗಳು, ನೆರೆ ರಾಷ್ಟ್ರಗಳಿಗೂ ಟೊಮೆಟೋ ಕಳುಹಿಸುತ್ತಿದ್ದ ಮಾರುಕಟ್ಟೆಯಿಂದ ಇದೀಗ ಜಿಲ್ಲೆಯ ಅಥವಾ ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲವಾಗಿದೆ. ಫಸಲು ಕಡಿಮೆಗೆ ಕಾರಣ? ಟೊಮೆಟೋವನ್ನು …

Read More »

ಗಜಪಡೆ ತೂಕ ಪರೀಕ್ಷೆ: ಅಭಿಮನ್ಯುವೇ ‘ಕ್ಯಾಪ್ಟನ್‌’

ಮೈಸೂರು: ದಸರಾ ಗಜಪಡೆಯ ಎಲ್ಲ 14 ಆನೆಗಳಿಗೆ ಸೋಮವಾರ 2ನೇ ಹಂತದ ತೂಕ ಪರೀಕ್ಷೆ ನಡೆಯಿತು. ಕ್ಯಾಪ್ಟನ್‌ ಅಭಿಮನ್ಯು ಅತಿ ಹೆಚ್ಚು ತೂಕ ತೂಗಿದರೆ, ಭೀಮ ಕಳೆದ ಬಾರಿಗಿಂತ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವ ಮೂಲಕ 2ನೇ ಸ್ಥಾನದಲ್ಲಿದ್ದಾನೆ. ಎಂದಿನಂತೆ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್‌ ಅಭಿಮನ್ಯುವೇ ಹೆಚ್ಚು ಬಲಶಾಲಿಯಾಗಿದ್ದಾನೆ. ಆ. 21ರ ತೂಕ ಪರೀಕ್ಷೆಯಲ್ಲಿ 5,560 ಕೆ.ಜಿ., ಎರಡನೇ ಪರೀಕ್ಷೆಯಲ್ಲಿ 5,820 ಕೆ.ಜಿ. ತೂಕ ತೂಗಿದ್ದು 260 ಕೆ.ಜಿ. ಹೆಚ್ಚಿಸಿಕೊಂಡಿದ್ದಾನೆ. …

Read More »

ಗ್ರಾಮಸಭೆ ಕಡ್ಡಾಯ :ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಗ್ರಾಮ ಪಂಚಾಯತ್‌ಗಳಲ್ಲಿ ಜನವಸತಿ ಸಭೆ, ವಾರ್ಡ್‌ ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, ಈ ಸಂಬಂಧದಲ್ಲಿ ಕಾರ್ಯಾಚರಣೆ ವಿಧಾನದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾ ಯತ್‌ ರಾಜ್‌ ಅಧಿನಿಯಮ-1993ರ ಅನುಷ್ಠಾನ ಹಾಗೂ ಪಂಚಾಯತ್‌ ರಾಜ್‌ ವ್ಯವಸ್ಥೆಯ ಬಲವರ್ಧನೆಗಾಗಿ ಗ್ರಾ.ಪಂ.ಗಳು ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, ಗ್ರಾಮಸಭೆ ಸೇರುವ ಒಂದು ತಿಂಗಳು ಮೊದಲೇ ಜನವಸತಿ ಸಭೆ ಹಾಗೂ ವಾರ್ಡ್‌ ಸಭೆಗಳನ್ನು ಗ್ರಾ.ಪಂ. ಅಧ್ಯಕ್ಷರು ನಡೆಸಬೇಕು. ಒಂದು ವರ್ಷದಲ್ಲಿ 2 …

Read More »

ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

ಮಂಗಳೂರು: ನಗರದ ಸಿಸಿಬಿ ಪೊಲೀಸರು ಬೃಹತ್‌ ಡ್ರಗ್‌ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಬರೋಬ್ಬರಿ ಆರು ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದಿದ್ದಾರೆ. ಸುಮಾರು 6 ಕೆ.ಜಿ‌ ಎಂಡಿಎಂಎ ಡ್ರಗ್ ವಶಕ್ಕೆ ಪಡೆಯಲಾಗಿದ್ದು, ಮಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ ವಶ ಕೇಸ್ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿದ್ದ ನೈಜಿರಿಯಾ ಪ್ರಜೆ ಪೀಟರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಎಂಡಿಎಂಎ ಮಾರಾಟ ವೇಳೆ ಹೈದರ್‌ …

Read More »

25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

ಗದಗ: ಪರವಾನಗಿ ಹೊಂದಿದ ಭೂ ಮಾಪಕರ ಪರವಾನಗಿಯನ್ನು ನವೀಕರಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆ ಸಹಾಯಕ ನಿರ್ದೇಶಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೋಣ ತಾಲೂಕು ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ (ಎಡಿಎಲ್‌ಆರ್‌)ವಿ. ಗಿರೀಶ್‌ ರವಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗಜೇಂದ್ರಗಡ ತಾಲೂಕಿನ ಅರುಣಕುಮಾರ್‌ ನೀರಲಕೇರಿಎಂಬುವರು ಸರ್ವೇಯರ್‌ ಪರವಾನಗಿ ನವೀಕರಿಸಿಕೊಡುವಂತೆ ವಿ. ಗಿರೀಶ್‌ ಬಳಿ ಹೋದಾಗ, ಪರವಾನಗಿ ನವೀಕರಣಕ್ಕೆ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ …

Read More »

ದರ್ಶನ್‌ ಭೇಟಿಗೆಂದು ಬಳ್ಳಾರಿ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ (Darshan) ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಸೋಮವಾರ (ಅ.07) ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಜತೆಗೆ ಆಪ್ತರಾದ ಅನುಷಾ ಶೆಟ್ಟಿ ಸೇರಿ ಮೂವರು ಮಹಿಳೆಯರು ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಮಧ್ಯಾಹ್ನ 12.12ಕ್ಕೆ ಜೈಲಿಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿರುವುದು ಇದು ಎಂಟನೇ ಬಾರಿ. ವಿಜಯಲಕ್ಷ್ಮಿ ಅವರೊಂದಿಗೆ ಸುಶಾಂತ ನಾಯ್ಡು ಸೇರಿದಂತೆ ಒಟ್ಟು ಐವರು ಆಗಮಿಸಿದ್ದಾರೆ. ಬ್ಯಾಗ್ ನಲ್ಲಿ ಬೇಕರಿ ತಿನಿಸು, ಡ್ರೈಫ್ರೂಟ್, …

Read More »

ಕಾರು ಅಪಘಾತ. ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

ಮುಧೋಳ : ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಹೊಸಕೋಟಿಯವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಭಾನುವಾರ(ಅ.6) ರಾತ್ರಿ ಮುಧೋಳ ಮಾರ್ಗದಿಂದ ಮಹಾಲಿಂಗಪುರದ ಕಡೆಗೆ ತೆರಳುವಾಗ ಎದುರಿನಿಂದ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯಲ್ಲಿನ ಬಂಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ‌ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಹೊಸಕೋಟಿ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ …

Read More »

ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವತಿಯಿಂದ ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ 4 ಗ್ರಾಮಗಳನ್ನು ದತ್ತು ಪಡೆದುಕೊಂಡು ಕಾನೂನು ನೆರವನ್ನು ನೀಡಲಾಗುತ್ತಿದೆ ಎಂದು ಎಚ್.ಸಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಗ್ರಾಮಗಳಲ್ಲಿ, ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 35 ಲಕ್ಷ ಪ್ರಕರಣಗಳು ಚಾಲ್ತಿಯಲ್ಲಿವೆ. ರಾಜಿ …

Read More »

ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬೊಮ್ಮಾಯಿ

ಗದಗ: ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚಟವಟಿಕೆ ನಡೆಯುತ್ತಿದೆ. ವಿಶೇಷವಾಗಿ ಹಿರಿಯ ಸಚಿವರು ದೆಹಲಿ ಭೇಟಿ ಮಾಡುವುದು ನೋಡಿದರೆ ಗೊತ್ತಾಗುತ್ತದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ರಾಜಿನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ನೀಡಿದರೆ …

Read More »