Breaking News
Home / ಜಿಲ್ಲೆ (page 1106)

ಜಿಲ್ಲೆ

ವಿದ್ಯಾರ್ಥಿನಿ ಕುಮಾರಿ ಕರುಣಾ ರಾಘವೇಂದ್ರ ಪತ್ತಾರ್ ಇವಳು ಜವಾಹರ್ ನವೋದಯ ವಿದ್ಯಾಲಯ ಕೊತಲಿ ಕುಪ್ಪನವಾಡಿ ಎಸ್ಪಿ ಸಿ ಬ್ಯಾಚ್ 2019 2020 ನೇ ಸಾಲಿನಲ್ಲಿ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ನಗರದ ವಿದ್ಯಾರ್ಥಿನಿ ಕುಮಾರಿ ಕರುಣಾ ರಾಘವೇಂದ್ರ ಪತ್ತಾರ್ ಇವಳು ಜವಾಹರ್ ನವೋದಯ ವಿದ್ಯಾಲಯ ಕೊತಲಿ ಕುಪ್ಪನವಾಡಿ ಎಸ್ಪಿ ಸಿ ಬ್ಯಾಚ್ 2019 2020 ನೇ ಸಾಲಿನಲ್ಲಿ lಎಂಟನೇ ತರಗತಿ ವಿದ್ಯಾರ್ಥಿನಿಯಾದ ಕರುಣಾ ಇವಳು ಭಾರತ ದೇಶಾದ್ಯಂತ ಕೋರೋಣ ವೈರಸ ನಿಂದ ಸಂಕಷ್ಟಕ್ಕೊಳಗಾದ ಭಾರತ ದೇಶ ಮಹಾಮಾರಿ ಕೋರೋಣ ವೈರಸ್ಸನ್ನು ಹೊಡೆದೋಡಿಸಲು ವೈದ್ಯರು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಅವರನ್ನು ಎಷ್ಟು ಹೊಗಳಿದರೂ ಕಡಿಮೆ. …

Read More »

ಬ್ರೇಕಿಂಗ್ : ಕಲಬುರ್ಗಿಯಲ್ಲಿ ಮತ್ತೆ ತಬ್ಲಿಘಿ ತಾಂಡವ, ಇಂದು 8 ಮಂದಿಯಲ್ಲಿ ಕೊರೋನಾ ಪತ್ತೆ..!

ಬೆಂಗಳೂರು, ಏ.28- ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಕ್ಷೀಣಿಸುತ್ತಿದ್ದಂತೆ ಕಂಡು ಬಂದರೂ ಅತ್ತ ಕಲಬುರ್ಗಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಬೆಳಗ್ಗೆ 12 ಗಂಟೆವರೆಗಿನ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಕೇವಲ ಒಂದು ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾದರೆ, ಕಲಬುರ್ಗಿಯಲ್ಲಿ ಆರು ಪ್ರಕರಣಗಳು ಪತ್ತೆಯಾಗಿವೆ. ಗದಗದಲ್ಲಿ ಒಂದು ಪ್ರಕರಣ ಸೇರಿದಂತೆ ರಾಜ್ಯದಲ್ಲಿ 8 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸೋಂಕಿತರ ಸಂಖ್ಯೆ 520ಕ್ಕೆ …

Read More »

ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್..!

ಬೆಂಗಳೂರು, ಏ. 28- ಅಂತ್ಯೋದಯ ಅನ್ನ ಪಡಿತರ ಚೀಟಿ (ಎಎವೈ) ಹೊಂದಿರುವ ಕುಟುಂಬದ ಒಬ್ಬ ಸದಸ್ಯರಿಗೆ 5 ಕೆಜಿಯಂತೆ ಅಕ್ಕಿ ಹಾಗೂ ಆಯಾ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಂದು ಕೆಜಿ ತೊಗರಿಬೇಳೆಯನ್ನು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ಉಚಿತವಾಗಿ ವಿತರಿಸಲಾಗುವುದು. ಪಿಹೆಚ್‍ಹೆಚ್ ಪಡಿತರ ಚೀಟಿ (ಬಿಪಿಎಲ್) ಹೊಂದಿರುವ ಕುಟುಂಬದ ಒಬ್ಬ ಸದಸ್ಯರಿಗೆ 5 ಕೆಜಿ ಯಂತೆ ಅಕ್ಕಿ ಹಾಗೂ ಆಯಾ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆಗೆ …

Read More »

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ತುಮಕೂರು, ಏ.28- ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಇಲ್ಲಾ ಎಂದು ಸಬೂಬು ಹೇಳಿ ಮನ ಬಂದಂತೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೋಕುಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು …

Read More »

“ಜಾನುವಾರುಗಳು ಸತ್ತಾಗ ನೀಡುವ 10ಸಾವಿರ ರೂ. ಪರಿಹಾರವನ್ನು ನಿಲ್ಲಿಸಬೇಡಿ” ಸಿದ್ದರಾಮಯ್

ಬೆಂಗಳೂರು, ಏ.28- ಸಾಕು ಪ್ರಾಣಿಗಳಾದ ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಸತ್ತಾಗ ಹತ್ತುಸಾವಿರ ರೂಪಾಯಿವರೆಗೆ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ಹಣದ ಕೊರತೆಯ ನೆಪಹೇಳಿ ನಿಲ್ಲಿಸಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಅನುಗ್ರಹ ಯೋಜನೆಗೆ ಅವಶ್ಯಕ ಅನುದಾನ ಒದಗಿಸಿ ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. …

Read More »

ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತ ಮುತ್ತಪ್ಪ ರೈ

ಬೆಂಗಳೂರು, ಏ.28- ರಾಜ್ಯದಲ್ಲಿ ಲಾಕೌಡ್‍ನ್ ಆದಾಗಿನಿಂದಲೂ ಜಯ ಕರ್ನಾಟಕ ಸಂಘಟನೆಯು ಸತತವಾಗಿ ಅದರಲ್ಲೂ ನಗರದಾದ್ಯಂತ ಪ್ರತಿ ನಿತ್ಯ ಎರಡು ಲಕ್ಷ ಜನರಿಗೆ ಊಟ, ದಿನಸಿ ಸಾಮಾನು, ಕುಡಿಯುವ ನೀರಿನ ಬಾಟಲ್ ಪೂರೈಕೆ ಮಾಡುವಲ್ಲಿ ತೊಡಗಿಕೊಂಡಿದೆ. ರೈತರಿಂದ ತರಕಾರಿಗಳನ್ನು ಖರೀದಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಡವರಿಗೆ, ನಿರಾಶ್ರಿತರಿಗೆ ಸಂಘಟನೆ ವಿತರಣೆ ಮಾಡುತ್ತಲೇ ಬಂದಿದೆ. ತರಕಾರಿ ಜತೆಗೆ ದಿನಸಿ ಪದಾರ್ಥಗಳನ್ನು ನಗರದ ಅಂಜನಾಪುರ, ಕೋಣನಕುಂಟೆ, ವಸಂತಪುರ ಕೊತನೂರು, ಗಣಪತಿಪುರ, ಜರಗನಹಳ್ಳಿ, ಕಾಶಿನಗರ, …

Read More »

ಸುದೀಪ್ ಓರ್ವ ಅತ್ಯುತ್ತಮ ನಿರ್ದೇಶಕ: ಅನು ಪ್ರಭಾಕರ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಓರ್ವ ಉತ್ತಮ ನಿರ್ದೇಶಕ ಎಂದು ನಟಿ ಅನು ಪ್ರಭಾಕರ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್ ಅನೇಕ ವರ್ಷಗಳ ಹಿಂದೆ ‘ನಂ.73 ಶಾಂತಿ ನಿವಾಸ’ ಸಿನಿಮಾವನ್ನು ನಿರ್ದೇಶಿಸಿ ಯಶಸ್ವಿಕಂಡಿದ್ದರು. ಅಂದಿಗೆ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ‘ನಂ.73 ಶಾಂತಿ ನಿವಾಸ’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಈ ಚಿತ್ರವನ್ನು ನೋಡಿದ ಅಭಿಮಾನಿಯೊಬ್ಬರು ಅನು ಪ್ರಭಾಕರ್‌ಗೆ ಟ್ವೀಟ್ ಮಾಡಿ, ನಿಮ್ಮ ಅಭಿನಯ ಅದ್ಭುತವಾಗಿದೆ …

Read More »

ಕ್ವಾರಂಟೈನ್ ನಲ್ಲಿರುವರ ಬೇಡಿಕೆ ಕೇಳಿ ಬಿಬಿಎಂಪಿ ಸಿಬ್ಬಂದಿ ರೋಸಿ ಹೋಗಿದ್ದಾರೆ..

ಬೆಂಗಳೂರು: ಕ್ವಾರಂಟೈನ್ ನಲ್ಲಿರುವ ಹೊಂಗಸಂದ್ರದ ಬಿಹಾರಿಗಳು ಸಿಕ್ಕಾಪಟ್ಟೆ ಬೇಡಿಕೆ ಇಡುತ್ತಿದ್ದು, ಇವರ ಬೇಡಿಕೆ ಕೇಳಿ ಬಿಬಿಎಂಪಿ ಸಿಬ್ಬಂದಿ ರೋಸಿ ಹೋಗಿದ್ದಾರೆ. ಹೊಂಗಸಂದ್ರ- ಎಲೆಕ್ಟ್ರಾನಿಕ್ ಸಿಟಿ ಮಧ್ಯ ಭಾಗದಲ್ಲಿ ಬರುವ ಮಣಿಪಾಲ್ ಕೌಂಟಿ ಹೋಟೆಲ್ ನಲ್ಲಿ ಬಿಹಾರಿ ಮೂಲದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈಗ ಟಿವಿ ಹಾಕಿಸಿ ಊಟ ಬೇರೆ ಕೊಡಿ ಎಂದು ಬಿಹಾರಿಗಳು ದಿನಕ್ಕೊಂದು ಬೇಡಿಕೆ ಇಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಈ ಬೇಡಿಕೆಗೆ ರೋಸಿ ಹೋದ ಬಿಬಿಎಂಪಿ …

Read More »

ಶಿವಮೊಗ್ಗ:ಪುರೋಹಿತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ: ಕೊರೊನಾ ಲಾಕ್‍ಡೌನ್‍ನಿಂದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ರೋಗಿಗಳಿಗೆ ರಕ್ತದಾನ ಮಾಡುವವರ ಕೊರತೆ ಸಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಪ್ರಾರ್ಥನೆ, ಆರಾಧನೆ, ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿದ್ದ ಪುರೋಹಿತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಶೇಖರಣೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ರೋಗಿಗಳಿಗೆ ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಕೊರೊನಾ ಸಮಸ್ಯೆ ಹೊರತುಪಡಿಸಿ, ಇತರೆ ರೋಗಿಗಳಿಗೆ ರಕ್ತದ …

Read More »

ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್

ಉಡುಪಿ: ಮುಂಬೈನಿಂದ ಹೊರಟ ಖರ್ಜೂರ ಸಾಗಿಸುವ ಲಾರಿ ಹತ್ತಿ ಮಂಡ್ಯಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಲಾರಿ ಪಾಸ್ ಆಗಿದ್ದ ಟೋಲ್ ಗೇಟ್‍ನ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಲಾರಿ ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿಯ ವಿಡಿಯೋ ಪತ್ತೆಯಾಗಿದೆ. ಲಾರಿ ಒಳಗಿದ್ದ ವ್ಯಕ್ತಿ ತೆಕ್ಕಟ್ಟೆ ಸಮೀಪದ ಶಿವಪ್ರಸಾದ್ ಪೆಟ್ರೋಲ್ ಪಂಪ್ ಬಳಿ ಇಳಿದು ಸ್ನಾನ ಮುಗಿಸಿದ್ದು, ನಂತರ ಅಲ್ಲೇ ತಿಂಡಿ ತಿಂದಿದ್ದಾರೆ. ಆಮೇಲೆ …

Read More »