Home / ಜಿಲ್ಲೆ / ಬೆಂಗಳೂರು / ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತ ಮುತ್ತಪ್ಪ ರೈ

ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತ ಮುತ್ತಪ್ಪ ರೈ

Spread the love

ಬೆಂಗಳೂರು, ಏ.28- ರಾಜ್ಯದಲ್ಲಿ ಲಾಕೌಡ್‍ನ್ ಆದಾಗಿನಿಂದಲೂ ಜಯ ಕರ್ನಾಟಕ ಸಂಘಟನೆಯು ಸತತವಾಗಿ ಅದರಲ್ಲೂ ನಗರದಾದ್ಯಂತ ಪ್ರತಿ ನಿತ್ಯ ಎರಡು ಲಕ್ಷ ಜನರಿಗೆ ಊಟ, ದಿನಸಿ ಸಾಮಾನು, ಕುಡಿಯುವ ನೀರಿನ ಬಾಟಲ್ ಪೂರೈಕೆ ಮಾಡುವಲ್ಲಿ ತೊಡಗಿಕೊಂಡಿದೆ.

ರೈತರಿಂದ ತರಕಾರಿಗಳನ್ನು ಖರೀದಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಡವರಿಗೆ, ನಿರಾಶ್ರಿತರಿಗೆ ಸಂಘಟನೆ ವಿತರಣೆ ಮಾಡುತ್ತಲೇ ಬಂದಿದೆ. ತರಕಾರಿ ಜತೆಗೆ ದಿನಸಿ ಪದಾರ್ಥಗಳನ್ನು ನಗರದ ಅಂಜನಾಪುರ, ಕೋಣನಕುಂಟೆ, ವಸಂತಪುರ ಕೊತನೂರು, ಗಣಪತಿಪುರ, ಜರಗನಹಳ್ಳಿ, ಕಾಶಿನಗರ, ತಿಲಕ್ ನಗರ , ಕನಕ ನಗರ, ಬಾಪೂಜಿ ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿ ನಿತ್ಯ ವಿತರಿಸುತ್ತಲೇ ಬರುತ್ತಿದೆ.

ಹೀಗೆ ಇನ್ನು ಹಲವು ಕಡೆ ಜನರಿಗೆ ದಿನಸಿ, ತರಕಾರಿ ಒದಗಿಸಿ ಸಂಘಟನೆಯ ನೇತೃತ್ವ ವಹಿಸಿರುವ ಮುತ್ತಪ್ಪ ರೈ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುತ್ತಪ್ಪ ರೈ ಅವರ ವಕೀಲರು ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಅವರು ಇದರ ಮುಂದಾಳತ್ವ ವಹಿಸಿದ್ದಾರೆ.

ಕಾನೂನು ಬದ್ದವಾಗಿ ಬಡವರ ಸಹಾಯಕ್ಕೆ ನಿಂತು ಮುತ್ತಪ್ಪ ರೈ ರವರ ಆಶಯ ಸಪಲ ಗೊಳಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದು ಕೊಂಡು ಜನರಲ್ಲಿ ಕೊರೊನ ಬಗ್ಗೆ ಅರಿವು ಮೂಡಿಸಿ ಪ್ರತಿ ನಿತ್ಯ ಅಕ್ಕಿ, ಬೇಳೆ, ಉಪ್ಪು, ಮಸಾಲೆಪುಡಿ, ಎಣ್ಣೆ, ಗೋದಿ ಹಿಟ್ಟು ಹಾಗೂ ತರಕಾರಿ ವಿತರಿಸುತ್ತಿದ್ದಾರೆ. ಈ ಸೇವೆ ಜನ ಮೆಚ್ಚುಗೆಗೆ ಪಾತ್ರ ವಾಗಿದ್ದು, ಜನರು ಮುತ್ತಪ್ಪ ರೈ ರವರಿಗೆ ಅರೋಗ್ಯ ಸರಿ ಹೊಗಲಿ ಎಂದು ಹರಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ