Home / ಜಿಲ್ಲೆ / ಹಾವೇರಿ

ಹಾವೇರಿ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ ಟೀಕೆ ವಾಗ್ದಾಳಿ ನಡೆಸುವುದು ಸಹಜ ಇದೀಗ ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ್ದು ದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬರುವುದು ಚಾನ್ಸೇ ಇಲ್ಲ ಎಂದು ಭವಿಷ್ಯ ನಡೆದಿದ್ದಾರೆ.   ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 543 ಸ್ಥಾನಗಳ ಪೈಕಿ ಕಾಂಗ್ರೆಸ್ ಸ್ಪರ್ಧಿಸಿರುವುದು 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನವರ ಗ್ಯಾರಂಟಿಯನ್ನು …

Read More »

ಎಂಪಿ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಧೂಳಿಪಟ; ವಿಜಯೇಂದ್ರ

ಹಾವೇರಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ಬಸವರಾಜ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ಭವಿಷ್ಯ ನುಡಿದರು ರಾಜ್ಯದಲ್ಲಿ ಮುಂದೆ ಚುನಾವಣೆ ನಡೆದರೆ ಬಿಜೆಪಿಗೆ ಸ್ಪಷ್ಟ ಬಹುಮತ ಬರಬೇಕು. ಬಿಜೆಪಿಗೆ ಸ್ಪಷ್ಟ ಬಹುಮತ ಬರುವವರೆಗೂ ಮನೆಯಲ್ಲಿ ಕೂರುವುದಿಲ್ಲ ಎಂದು ಹಾವೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ …

Read More »

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ಹಾವೇರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಬದಲಾವಣೆ ಆಗಲಿದೆ ಎಂಬ ಚರ್ಚೆ ಮಂಗಳವಾರದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿದಾಡ ತೊಡಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದ ಸಭೆಗೆ ಕೆ ಎಸ್ ಈಶ್ವರಪ್ಪನವರು ಚಕ್ಕರ ಹೊಡೆದ ನಂತರದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಿದೆ.

Read More »

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ ಶಾಸಕರಿಗೆ ಖಡಕ್​​ ಎಚ್ಚರಿಕೆ ನೀಡಿರುವ ಕುರಿತು ಮಾತನಾಡುವುದಿಲ್ಲಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದ್ದಾರೆ.   ಜಿಲ್ಲೆಯ ಹಾನಗಲ್ ತಾಲೂಕು ಸಾಂವಸಗಿ ಗ್ರಾಮದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ಅಪ್ಪಣೆ ಏನಿದೆ ಅದನ್ನು ಚಾಚು ತಪ್ಪದೆ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಅವರು ನಮ್ಮ ಪಕ್ಷದ ಅಧ್ಯಕ್ಷರು. ಯಾರೇ ಆಗಲಿ ಮಾಧ್ಯಮಗಳಿಗೆ ಹೇಳಿಕೆ …

Read More »

ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ : ಸಚಿವ ಶಿವಾನಂದ ಪಾಟೀಲ್​

ಹಾವೇರಿ : ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ರೈತರ ಆತ್ಮಹತ್ಯೆಯ ನಿಖರ ಸಂಖ್ಯೆ ತಿಳಿಯಲು ಎಫ್​ಎಸ್‌ಎಲ್​ ವರದಿ ಬರುವವರೆಗೂ ಕಾಯಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ …

Read More »

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು: ಬೊಮ್ಮಾಯಿ

ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ ಎಂಬ ವದಂತಿ ಹಬ್ಬುತ್ತಿದೆ. ಈ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿನಿ, ಈ ಹಿಂದೆ ಎಲ್ಲರೂ ಬಳೆ ಹಾಕಿಕೊಂಡು ಕೆಲಸ ಮಾಡಿದಾರೆ. ಅಂದು ಯಾವ ತೊಂದರೆ ಆಗಿಲ್ಲಾ. ಸರ್ಕಾರಕ್ಕೆ ಮಾಡಲು ಬೇರೆ …

Read More »

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

ಹಾವೇರಿ: ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ …

Read More »

ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಹಾವೇರಿ: ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಚರ್ಚೆ ಚುನಾವಣೆ ಸಮಯದಲ್ಲೂ ಜೋರಾಗಿಯೇ ನಡೆದಿತ್ತು. ಈ ನಡುವೆ ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ ನಾಗನೂರು ಆತ್ಮಹತ್ಯೆಗೆ …

Read More »

ಹಾವೇರಿ : ಸರ್ಕಾರಿ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಸಾವು

ಹಾವೇರಿ : ಸರ್ಕಾರಿ ಸಾರಿಗೆ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ನಡೆದಿದೆ. ಮೃತ ಬಾಲಕಿಯನ್ನು ಮಧು ಕುಂಬಾರ(14) ಎಂದು ಗುರುತಿಸಲಾಗಿದೆ. ಬಾಲಕಿಯು ವಾಸನ ಗ್ರಾಮದಿಂದ ಕುಸನೂರು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಆಗಮಿಸುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಸ್​ ಜನರಿಂದ ತುಂಬಿದ್ದ ಕಾರಣಕ್ಕಾಗಿ ಬಾಲಕಿ ಬಾಗಿಲ ಬಳಿಯೇ ಬಾಲಕಿ ನಿಂತಿದ್ದಳು. ಅಲ್ಲದೆ ರಸ್ತೆ ಕೂಡ ಹದಗೆಟ್ಟಿತ್ತು ಎಂದು ಹೇಳಲಾಗಿದೆ. …

Read More »

ಶಕ್ತಿ ಯೋಜನೆ ಬೇಡ ಅನ್ನುವವರು ಬಸ್​ನಲ್ಲಿ ಹಣ ಕೊಟ್ಟು ಪ್ರಯಾಣ ಮಾಡಲಿ :ಶಿವಾನಂದ ಪಾಟೀಲ್

ಹಾವೇರಿ : ಮಹಿಳೆಯರಿಗೆ ಉಚಿತ ಬಸ್​ ಸೇವೆ ನೀಡುವ ಶಕ್ತಿ ಯೋಜನೆ ಬೇಡ ಎನ್ನುವವರು ಬಸ್‌ನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡಲಿ. ಅಂತವರು ಬಸ್ಸಿನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂರರಲ್ಲಿ 90 ಜನರಿಗೆ ಅವಶ್ಯಕತೆ ಇದ್ದಾಗ 10 ಜನರಿಗೆ ಅವಶ್ಯಕತೆ ಇರುವುದಿಲ್ಲ. ಆ 10 ಜನ ಅದರ ಬಗ್ಗೆ …

Read More »