Breaking News

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

Spread the love

ಹಾವೇರಿ: ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ.

ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ.

ಹಾವೇರಿಯನ್ನಾಳಿದ ಬಹುತೇಕ ರಾಜಮನೆತನಗಳು ಇಲ್ಲಿ ತಮ್ಮ ಕುರುಹುಗಳನ್ನ ಸ್ಥಾಪಿಸಿವೆ. ಅಂತಹ ರಾಜಮನೆತನಗಳಲ್ಲಿ ಒಂದಾದ ಕಲ್ಯಾಣಿ ಚಾಲುಕ್ಯರು ಹಾವೇರಿ ಪ್ರಾಂತ್ಯದ ಮಹತ್ತರವಾದ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ, ಗಳಗನಾಥದ ಗಳನಾಥೇಶ್ವರ ದೇವಸ್ಥಾನ ಮತ್ತು ಚೌಡಯ್ಯದಾನಪುರದ ಮುಕ್ತೇಶ್ವರ ದೇವಸ್ಥಾನ ಪ್ರಮುಖ ದೇವಸ್ಥಾನಗಳು. ಅದರಲ್ಲೂ ಹಾವೇರಿಯಲ್ಲಿರುವ ಪುರಸಿದ್ದೇಶ್ವರ ದೇವಸ್ಥಾನದ ಕಲಾಸೊಬಗು ಕಣ್ಮನ ಸೆಳೆಯುತ್ತಿದೆ. ಹಾವೇರಿ ಪುರಸಿದ್ದೇಶ್ವರ ದೇವಸ್ಥಾನ ಕಲ್ಯಾಣಿ ಚಾಲುಕ್ಯರ ವಿಶೇಷ ಸ್ಮಾರಕಗಳಲ್ಲಿ ಒಂದಾಗಿದೆ.

12 ನೇ ಶತಮಾನದ ಪೂರ್ವಭಾಗದಲ್ಲಿ ನಿರ್ಮಿಸಲಾಗಿದೆ: ಪುರಸಿದ್ದೇಶ್ವರ ದೇವಸ್ಥಾನ ಗರ್ಭಗೃಹ,ಸುಕನಾಶಿ,ನಂದಿಮಂಟಪ ಮತ್ತು ಮುಖಮಂಟಪ ಹೊಂದಿದೆ. ಸಿದ್ದೇಶ್ವರ ದೇವಸ್ಥಾನ 11ನೇ ಶತಮಾನದ ಕೊನೆಯ ಭಾಗ ಅಥವಾ 12 ನೇ ಶತಮಾನದ ಪೂರ್ವಭಾಗದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಇತಿಹಾಸಕಾರ ಪ್ರೋ. ಪಿ. ಸಿ ಹಿರೇಮಠ.

ದೇವಸ್ಥಾನದ ವಾಸ್ತುಶಿಲ್ಪದ ಮೇಲೆ ಈ ಅಂಶ ಬೆಳಕಿಗೆ ಬರುತ್ತದೆ. ಆದರೆ, ಈ ದೇವಸ್ಥಾನ ಯಾರು ನಿರ್ಮಿಸಿದ್ದಾರೆ, ಯಾವಾಗ ನಿರ್ಮಿಸಿದ್ದಾರೆ ಎನ್ನುವ ಕುರಿತಂತೆ ಯಾವುದೇ ಸ್ಪಷ್ಟ ಶಾಸನಗಳು ಇಲ್ಲ. ಬಹುತೇಕ ದೇವಸ್ಥಾನಗಳು ಪೂರ್ವಕ್ಕೆ ಮುಖಮಾಡಿದ್ದರೆ, ಪುರಸಿದ್ದೇಶ್ವರ ದೇವಸ್ಥಾನ ಪಶ್ಚಿಮಕ್ಕೆ ಮುಖಮಾಡಿದೆ. ದೇವಸ್ಥಾನವನ್ನ ಸೋಪುಕಲ್ಲು ಅಥವಾ ಮೃದುವಾದ ಕಲ್ಲಿನಿಂದ ಕೆತ್ತಲ್ಪಟ್ಟಿದೆ.


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ