Breaking News

ಜಿಲ್ಲೆ

ರಾಜ್ಯದ 368 ನ್ಯಾಯಾಧೀಶರ ವರ್ಗಾವಣೆ! ವಿನಯ್ ಕುಲಕರ್ಣಿ ದೋಷಿ ಆದೇಶಿಸಿದ ಜಡ್ಜ್ ಕೂಡ ಟ್ರಾನ್ಸ್​ಫರ್​

ಬೆಂಗಳೂರು: ಆಡಳಿತಾತ್ಮಕ ಉದ್ದೇಶಗಳಿಗಾಗಿ ರಾಜ್ಯದ್ಯಂತ 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಎಂದು ಹೈಕೋರ್ಟ್​ ಗುರುವಾರ (ಏ.16) ಆದೇಶ ಹೊರಡಿಸಿದೆ. ಈ ವರ್ಗಾವಣೆ ಪಟ್ಟಿಯಲ್ಲಿ 114 ಜಿಲ್ಲಾ ನ್ಯಾಯಾಧೀಶರು, 139 ಸಿವಿಲ್​ ನ್ಯಾಯಾಧೀಶರು ಮತ್ತು 115 ಹಿರಿಯ ಸಿವಿಲ್​ ನ್ಯಾಯಾಧೀಶರು ಸೇರಿದ್ದು, ವಿನಯ್​ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದ ಗಜಾನನ ಭಟ್​ ಕೂಡ ವರ್ಗಾವಣೆ ಆಗಿರುವುದು ಗಮನಾರ್ಹ. ಈ ಆದೇಶವು ಜೂ. 1ರಿಂದ ಜಾರಿಗೆ ಬರಲಿದೆ. ಹೈಕೋರ್ಟ್​ನ ಹಾಲಿ ರಿಜಿಸ್ಟ್ರಾರ್​ ಜನರಲ್​ …

Read More »

ಏಪ್ರಿಲ್‌ 20 ರಂದು ಬೆಳಗಾವಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಬೆಳಗಾವಿ: ಬೆಳಗಾವಿ ತಾಲೂಕಿನ ಚಂದನ ಹೊಸೂರ ಗ್ರಾಮದಲ್ಲಿ ಏಪ್ರಿಲ್ 20 ಮತ್ತು 21 ರಂದು ಎರಡು ದಿನಗಳ ಕಾಲ ಪಾವನಕ್ಷೇತ್ರ ಬಡೇಕೊಳ್ಳಮಠದ ಶ್ರೀ ನಾಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವ ಜಯಂತಿ ನಿಮಿತ್ತ ಕೊಳ್ಳಬಸವ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ. ಸೋಮವಾರ ದಿ. 20 ರಂದು ಮುಂಜಾನೆ 8 ಗಂಟೆಗೆ ವೇದಮೂರ್ತಿ ಶ್ರೀ ಮಹೇಶ ಸ್ವಾಮಿಗಳು ಇವರಿಂದ ಕೊಳ್ಳಬಸವ ನಾಗಲಿಂಗೇಶ್ವರನಿಗೆ ಅಭೀಷೇಕ ಜರುಗುವುದು. ಬಸವ ಜಯಂತಿ ಮೆರವಣಿಗೆ ಹಾಗೂ …

Read More »

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

ಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ ಕಡಿಮೆ ಆಗಲಿದ್ದು, ಕುಡಿಯುವ ನೀರಿಗೆ  ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ  ಅವರು ಡಿಸಿ-ಸಿಇಓಗಳಿಗೆ ಸೂಚನೆ ಕೊಟ್ದಿದ್ದಾರೆ. ವಿಧಾನಸೌಧದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಸಿಇಓಗಳ ಜೊತೆ ಸಭೆ ನಡೆಸಿದರು. ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. …

Read More »

ಗದಗ, ಹಾಸನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಗದಗ, ಹಾಸನ: ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ರಾಜ್ಯದ  ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗದಗ  ಬೆಟಗೇರಿಯ ಕೆಲವೆಡೆ ಮಳೆಯಿಂದ  ಅವಾಂತರವಾಗಿದ್ದು ಗಾಳಿಗೆ ಅಂಗಡಿಗಳ ಬೋರ್ಡ್‌ ಹಾರಿ ಹೋಗಿದೆ. ಮುಳಗುಂದ ನಾಕಾ ಬಳಿ ಮಳೆ ಗಾಳಿ‌ ರಭಸಕ್ಕೆ ಮರ ಧರೆಗೆ ಬಿದ್ದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೆಲವೆಡೆ ಅನೇಕ ಅವಾಂತರ ಸೃಷ್ಟಿಯಾಗಿದೆ. ಹಾಸನ‌ ನಗರ ಸೇರಿ ಹಲವೆಡೆ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯ …

Read More »

ಆರೋಗ್ಯ ಇಲಾಖೆಯ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ

ಆರೋಗ್ಯ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರವಾಗಿದೆ ಎಂದು ಸತ್ಯಪ್ಪ ವಿಷಾದ ವ್ಯಕ್ತಪಡಿಸಿದರು. ಈ ಬಗ್ಗೆ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಅವರು ಮಾತನಾಡಿ ಶ್ರೀ ಹರ್ಷ ಗುಪ್ತ ಸಾಹೇಬರು ತಮ್ಮ 30 ವರ್ಷಗಳ ಸೇವಾ ಅವಧಿಯಲ್ಲಿ 26 ಬಾರಿ ಏಕಾಏಕಿ ವರ್ಗಾವಣೆಯಾಗಿದ್ದು ಈ ಬಾರಿಯೂ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದ …

Read More »

ಖಾನಾಪುರ ಗ್ರಾಮದ ಶಿವಲಿಂಗ ಹಾದಿಮನಿ ನಿಧನ

ಗೋಕಾಕ ತಾಲೂಕಿನ ಖಾನಾಪುರ ಗ್ರಾಮದ ಹಿರಿಯರು ಹಾಗೂ ಗೌರವಾನ್ವಿತ ಪಂಚರಾದ ಶಿವಲಿಂಗ ಹಾದಿಮನಿ ಅವರು ನಿಧನ ಹೊಂದಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸರಳ ಸ್ವಭಾವ, ಸಮಾಜಮುಖಿ ಚಿಂತನೆ ಮತ್ತು ಗ್ರಾಮಾಭಿವೃದ್ಧಿಗೆ ಮಾಡಿದ ಸೇವೆಗಳ ಮೂಲಕ ಅವರು ಎಲ್ಲರ ಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೊರಕಲಿ.

Read More »

ಶಿವಮೊಗ್ಗದಲ್ಲಿ ಹಾವು ಕಡಿದು 2 ವರ್ಷದ ಮಗು ಸಾವು

ಶಿವಮೊಗ್ಗ: ಹಾವು ಕಡಿದು  2 ವರ್ಷದ ಮಗು  ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಾಗರ ಪಟ್ಟಣದ ಎಸ್.ಎಸ್ ನಗರದಲ್ಲಿ ನಡೆದಿದೆ. ಎಸ್.ಎಸ್ ನಗರದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತ ಮಗು. ಅಕ್ಷತಾ ಮಗುವಿನೊಂದಿಗೆ ಸಾಗರದಲ್ಲಿನ  ತವರು ಮನೆಗೆ ಬಂದಿದ್ದರು. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದೆ. ಮಗು ಅಳುವುದನ್ನು ಕಂಡು ಕುಟುಂಬಸ್ಥರು ಬಂದು ನೋಡಿದಾಗ ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಷಕರು …

Read More »

ತೋಟದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ – ಕೊಲೆಯೋ, ಅಸಹಜ ಸಾವೋ?

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮ ಹಳೇ ನಿಜಗಲ್ ಗ್ರಾಮದಲ್ಲಿ ಮಹಿಳೆಯ ತಲೆಬುರುಡೆ ಹಾಗೂ ಕೈ ಕಾಲಿನ ಕೆಲ ಮೂಳೆಗಳು ಪತ್ತೆಯಾಗಿದೆ. ತೋಟದ ಮಾಲೀಕ ಕೆಲಸ ಮಾಡುವ ವೇಳೆ ಅವಶೇಷಗಳನ್ನ ನೋಡಿದಾಗ ಆತಂಕಕ್ಕೆ ಕಾರಣವಾಗಿದ್ದು, ನಂತರ ದಾಬಸ್ ಪೇಟೆ ಪೊಲೀಸರಿಗೆ  ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದು ನಾಪತ್ತೆಯಾಗಿದ್ದ ಮಹಿಳೆ ತುಮಕೂರು ನಿವಾಸಿ ಯಮುನಾ ಎಂದು ಗುರುತಿಸಲಾಗಿದೆ. ಅಸ್ಥಿಯ ಬಳಿ ಮಹಿಳೆಯ …

Read More »

ಬಿ.ವಿ ಕಾರಂತ ಪ್ರಶಸ್ತಿಗೆ ಶಿವಮೊಗ್ಗದ ಹಿರಿಯ ರಂಗಕರ್ಮಿ ಪ್ರಸನ್ನ ಆಯ್ಕೆ

ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 205-26ನೇ ಸಾಲಿನ ಪ್ರತಿಷ್ಠಿತ `ಬಿ.ವಿ.ಕಾರಂತ ಪ್ರಶಸ್ತಿ’ಗೆ  ಸಾಗರ ತಾಲ್ಲೂಕಿನ ಹೊನ್ನೇಸರದ ಚರಕ ಸಂಸ್ಥೆ ಸಂಸ್ಥಾಪಕ, ಹಿರಿಯ ರಂಗಕರ್ಮಿ ಪ್ರಸನ್ನ  ಅವರನ್ನ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕವನ್ನ ಒಳಗೊಂಡಿದೆ. ಗಾಂಧಿವಾದಿ ಪ್ರಸನ್ನ ಅವರು ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಕಳೆದ 50 ವರ್ಷಗಳಿಂದ ನಿರಂತರವಾಗಿ ವಿವಿಧ ಚಟುವಟಿಕೆಯಲ್ಲಿ …

Read More »

ಹೃದಯಾಘಾತದಿಂದ ನ್ಯಾಯಾಧೀಶೆ ಸಾವು

ತುಮಕೂರು: ಹೃದಯಾಘಾತದಿಂದ  ನ್ಯಾಯಾಧೀಶೆ  ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಕಾಂತಮ್ಮ (43), ಸಾವನ್ನಪ್ಪಿದ ನ್ಯಾಯಾಧೀಶೆ. ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕಾಂತಮ್ಮ ಸಾವನಪ್ಪಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಕಾಂತಮ್ಮ ಕಳೆದ ಒಂದು ವರ್ಷದಿಂದ ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿದ್ದ ನ್ಯಾ.ಕಾಂತಮ್ಮ ಇಂದು ವಸತಿ ಗೃಹದಲ್ಲಿ ಹೃದಯಾಘಾತದಿಂದ …

Read More »