Home / ಜಿಲ್ಲೆ (page 4)

ಜಿಲ್ಲೆ

ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ

ಬೆಂಗಳೂರು: ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ಮಾರ್ಚ್​ 17ರಂದು ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನುಮದಿನವನ್ನು ಆಚರಿಸಿಕೊಂಡ ನಟ ಜಗ್ಗೇಶ್​ಗೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ.ಪತ್ನಿ ಪರಿಮಳ ಜತೆಗಿನ 40 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ.   ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ …

Read More »

ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ, ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು , ರಾಜ್ಯದ 17 ಮಂದಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್ ಬಾಗಲಕೋಟೆ- ಸಂಯುಕ್ತಾ ಎಸ್ ಪಾಟೀಲ್ ಕಲಬುರಗಿ – ರಾಧಾಕೃಷ್ಣ ರಾಯಚೂರು-ಜಿ.ಕುಮಾರನಾಯಕ್ ಬೀದರ್-ಸಾಗರ್ ಖಂಡ್ರೆ ಕೊಪ್ಪಳ-ರಾಜಶೇಖರ್ ಹಿಟ್ನಾಳ ಧಾರವಾಡ-ವಿನೋದ್ ಅಸೂಟಿ ಉತ್ತರಕನ್ನಡ -ಡಾ.ಅಂಜಲಿ ನಿಂಬಾಳ್ಕರ್ ದಾವಣಗೆರೆ-ಪ್ರಭಾ ಮಲ್ಲಿಕಾರ್ಜುನ್ ಉಡುಪಿ ಚಿಕ್ಕಮಗಳೂರು-ಡಾ.ಜಯಪ್ರಕಾಶ್ ಹೆಗ್ಡೆ ದಕ್ಷಿಣಕನ್ನಡ-ಪದ್ಮರಾಜ್ ಚಿತ್ರದುರ್ಗ-ಬಿ.ಎನ್ ಚಂದ್ರಪ್ಪ ಮೈಸೂರು ಕೊಡಗು -ಎಂ. ಲಕ್ಷ್ಮಣ್ ಬೆಂಗಳೂರು ಉತ್ತರ-ಎಂ.ವಿ.ರಾಜೀವ್ …

Read More »

ಕುಗ ನೊಳಿ ಚೆಕ್ ಪೋಸ್ಟ್ ನಲ್ಲಿ 14ಲಕ್ಷ್ ರೂಪಾಯಿ ನಗ ದು ಪ ತ್ತೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ದಿನದ 24 ಗಂಟೆಯು ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಇಂದು ದಿನಾಂಕ: 21.03.2024 ರಂದು ಮುಂಜಾನೆ ಸುಮಾರು 2:00 ಗಂಟೆಯ ಸಮಯದಲ್ಲಿ ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಒಬ್ಬನ ಬ್ಯಾಗನಲ್ಲಿ ದಾಖಲೆ ಇಲ್ಲದ ರೂ.14 ಲಕ್ಷ ನಗದಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, …

Read More »

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ಹಾವೇರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಬದಲಾವಣೆ ಆಗಲಿದೆ ಎಂಬ ಚರ್ಚೆ ಮಂಗಳವಾರದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿದಾಡ ತೊಡಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದ ಸಭೆಗೆ ಕೆ ಎಸ್ ಈಶ್ವರಪ್ಪನವರು ಚಕ್ಕರ ಹೊಡೆದ ನಂತರದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಿದೆ.

Read More »

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

ಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಟಿಕೆಟ್ ತಪ್ಪಿಸುವ ಷಡ್ಯಂತ್ರ ನಡೆದಿತ್ತುಎಂದು ನನಗೆ ಅನಿಸಿಲ್ಲ. ಬೆಳಗಾವಿಯ ಮುಖಂಡರಾದ ಅಭಯ ಪಾಟೀಲ, ಪ್ರಭಾಕರ ಕೋರೆ, ಅನಿಲ ಬೆನಕೆ, ಈರಣ್ಣ ಕಡಾಡಿ ಇನ್ನಿತರ ಪ್ರಮುಖರ ಜತೆ ಮಾತುಕತೆ ನಡೆಸಿದ್ದು, ಎಲ್ಲರು ಸೇರಿ ಚುನಾವಣೆ ನಡೆಸೋಣ …

Read More »

ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ

ಸಂಕೇಶ್ವರ: ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆ ಬಳಿ ಯುವಕನ ಶವವೊಂದು ಪತ್ತೆಯಾಗಿದ್ದು, ಯುವಕನ ಮುಖದ ತುಂಬೆಲ್ಲಾ ಗಾಯಗಳಾಗಿರುವ ಹಿನ್ನೆಲೆ ಕೊಲೆ ಮಾಡಿ ಬಿಸಾಕಿರುವ ಸಂಶಯ ವ್ಯಕ್ತವಾಗಿದೆ. ಸಂಕೇಶ್ವರ ಪಟ್ಟಣದ ಬೈಪಾಸ್ ರಸ್ತೆಯ ಗಡಹಿಂಗ್ಲಜ್ ರಸ್ತೆಯ ಬಳಿ ಸುಮಾರು 25-30 ವರ್ಷ ವಯಸ್ಸಿನ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ. ಯುವಕನ ಟಿ ಶರ್ಟ್ ಮೇಲೆ ಶಿವರಾಜ್ ಕಾಲೇಜ್ ಎಂದು ಬರೆಯಲಾಗಿದ್ದು, ಈತ ಮಹಾರಾಷ್ಟ್ರ ಮೂಲದವನಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. …

Read More »

₹4 ಲಕ್ಷ ಮೌಲ್ಯದ ಶ್ರೀಗಂಧ ಕಟ್ಟಿಗೆ ವಶ

ಹುಕ್ಕೇರಿ: ತಾಲ್ಲೂಕಿನ ಗುಡಸ್ ಗ್ರಾಮದ ಗಾಯರಾಣ ಪ್ರದೇಶಕ್ಕೆ ಹೊಂದಿಕೊಂಡಿರುವ ಲಕ್ಷ್ಮೀದೇವಿ ಗುಡಿಯ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧ ತುಂಡುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಹುಕ್ಕೇರಿ ವಲಯದ ಸಿಬ್ಬಂದಿ ಕಾರೊಂದನ್ನು ಬೆನ್ನತ್ತಿ ಹಿಡಿದು ನಿಲ್ಲಿಸಿದಾಗ, ತಕ್ಷಣಕ್ಕೆ ಕತ್ತಲಾಗಿದ್ದರಿಂದ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ. ವಾಹನ ಸಮೇತ ₹4 ಲಕ್ಷ ಮೌಲ್ಯದ (40.605 ಕೆ.ಜಿ.) ಶ್ರೀಗಂಧದ ತುಂಡುಗಳನ್ನು ಇಲಾಖೆಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ …

Read More »

ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಬೇಕು.; ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ  : ಬೆಳಗಾವಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿಗಳನ್ನು ಪರಿಷ್ಕರಣೆ ಮಾಡಬೇಕು. ವಯಸ್ಕರ ಮತದಾರರ ಪಟ್ಟಿಗಳ ಮಾಹಿತಿ ಸಂಗ್ರಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು. ಚಿಕ್ಕೋಡಿ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಫೆ.20) ಚಿಕ್ಕೋಡಿ ಲೋಕಸಭಾ ಚುನಾವಣೆ ಕುರಿತು ನಡೆದ ಪೂರ್ವ ಸಿದ್ಧತೆಯ ಸಭೆಯಲ್ಲಿ ಅವರು ಮಾತನಾಡಿದರು. ಮತಗಟ್ಟೆಗಳನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಒಂದು …

Read More »

ರಾಯ ಬಾಗ ನಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣಾ ಸಭೆ

ಮುಂಬರುವ ಚಿಕ್ಕೋಡಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ರಾಯಬಾಗ ಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಪಕ್ಷದ ಮಡಿಲಿಗೆ ತೆಗೆದುಕೊಳ್ಳಲು ಇದು ಸುವರ್ಣಾವಕಾಶ ಇದ್ದು ಯಾರೇ ಅಭ್ಯರ್ಥಿಯಾಗಿ ಆಯ್ಕೆ ಯಾದರೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಟೊಂಕು ಕಟ್ಟಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳ …

Read More »

ಬೆಳಗಾವಿ : ‘ಹೆಲ್ಮೆಟ್’ ಧರಿಸದಿದ್ದಕ್ಕೆ ಅಪಘಾತದಲ್ಲಿ ‘ASI’ ಸಾವು : ‘PSI’ ಅಮಾನತುಗೊಳಿಸಿ SP ಆದೇಶ

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ನಡೆದಿದೆ. ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಚಾಲಾಯಿಸಿ ಹಂಪ್ ಜಿಗಿಸಿದಕ್ಕೆ ಅಪಘಾತ ಸಂಭವಿಸಿದೆ. ಇದೀಗ ಹೆಲ್ಮೆಟ್ ಧರಿಸಿ ಕಡ್ಡಾಯ ಆದೇಶವನ್ನು ನಿರ್ಲಕ್ಷ ವಹಿಸಿದಕ್ಕೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ್‌ರನ್ನು ಅಮಾನತ್ತು ಮಾಡಿ ಅದೇಶಿಸಲಾಗಿದೆ.

Read More »