ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಪ್ರಕರಣ ಸೌಹಾರ್ದತೆಯಿಂದ ಇತ್ಯರ್ಥವಾಗಿದೆ.
ಇಬ್ಬರು ಮಹಾನ್ ನಾಯಕರಿಗೆ ಅಗೌರವ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ನಿನ್ನೆಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಲಾಠಿ ಚಾರ್ಜ್ ಕುರಿತು ದಾಖಲಾಗಿರುವ ಪ್ರಕರಣಗಳನ್ನ ವಾಪಸ್ ಪಡೆಯುವ ಕುರಿತು ಸಿಎಂ ಜತೆಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದ್ರು. ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ವಿಚಾರ ಹಿಂಪಡೆಯಬೇಕೆಂಬ ಒತ್ತಡಗಳ ಕುರಿತು ಪ್ರತಿಕ್ರಿಯೆ ನೀಡದ ಸಚಿವರು ಏನಾದ್ರು ಅನಾಹುತವಾಗಿದ್ರೆ ನೀವೆ ಪ್ರಶ್ನೆ ಮಾಡುತ್ತಿದ್ದಿರಿ. ಹೀಗಾಗಿ ಕೇಸ್ ದಾಖಲಿಸಲಾಗಿದೆ. ಇನ್ನೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅಧಿಕೃತ ಮಾಡುವ ಕುರಿತು
ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು
Check Also
ಹೆಬ್ಬಾವಿನ ಮರಿ ರಕ್ಷಣೆ
Spread the love ಬಿಡದಿ: ಶ್ಯಾನಮಂಗಲ ಗ್ರಾಮದ ವೆಂಕಟೇಶ್ ಎಂಬುವವರ ಜಮೀನಿನಲ್ಲಿ ಹೆಬ್ಬಾವಿನ ಮರಿಯನ್ನು ಸೋಮವಾರ ಹಿಡಿದು ರಕ್ಷಿಸಲಾಗಿದೆ. ಕೆಲಸದ …