Breaking News

ಬೆಳಗಾವಿಯಲ್ಲಿ ಚಿತ್ರೀಕರಣಗೊಂಡಿರುವ ‘ಗಡಿನಾಡು’ ಬೆಳ್ಳಿ ಪರದೆಗೆ ………

Spread the love

ಬೆಳ್ಳಿ ಪರದೆ ಮೇಲೆ ಯುವ ತಂಡವು ಗಡಿನಾಡು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಕರ್ನಾಟಕದ ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಗಡಿ ಸಮಸ್ಯೆ ಹಾಗೂ ನವೀರಾದ ಪ್ರೇಮ ಕಾವ್ಯವನ್ನು ತೆರದಿಡಲು ತಂಡ ಸಜ್ಜಾಗಿದೆ. ಈ ಚಿತ್ರ ಇದೇ ವಾರ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ನಾಗ್ ಹುಣಸೋಡ್ ನಿರ್ದೇಶನದ ಗಡಿನಾಡು ಚಿತ್ರ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಗಡಿನಾಡಿನಲ್ಲಿ ಗಮನಿಸಿದ ವಿಚಾರಗಳನ್ನು ಒಳಗೊಂಡಿದೆ. ಅಥಣಿ, ಗೋಕಾಕ್, ಬೆಳಗಾವಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದ ನಾಯಕ ಪ್ರಭು ಸೂರ್ಯ, ಚಿತ್ರದ ಕಥಾ ನಾಯಕಿ ಸಂಚಿತಾ ಪಡುಕೋಣೆ.ಚಿತ್ರದ ಕಥಾಹಂದರದ ಪ್ರಕಾರ ನಾಯಕ ವಿದ್ಯಾಭ್ಯಾಸವನ್ನು ಮುಗಿಸಿ ಊರಿಗೆ ತೆರಳುತ್ತಾನ

ಅಲ್ಲಿ ಗಡಿನಾಡು ಸಮಸ್ಯೆ ಕಂಡು ಹೋರಾಡಲು ನಿರ್ಧರಿಸುತ್ತಾನೆ. ಇದರ ನಡುವೆ ನಾಯಕಿಯನ್ನು ಭೇಟಿಯಾಗುವ ಇವನು ಪ್ರೀತಿಯ ಸೆಲೆಗೆ ಸಿಲುಕಿಕೊಳ್ಳುತ್ತಾನೆ. ಮುಂದೆ ನಾಯಕನ ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಇದನ್ನೆಲ್ಲ ನಾಯಕ ಎದುರಿಸಿ ಗಡಿನಾಡ ಸಮಸ್ಯೆ ಹಾಗೂ ತನ್ನ ಪ್ರೀತಿ ಪಡೆಯುವನೇ ಎಂಬುದೇ ಚಿತ್ರದ ಸಾರಾಂಶವಾಗಿದೆ. ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳನ್ನು ಈ ಸಿನಿಮಾ ಒಳಗೊಂಡಿದೆ. ಎಲ್ವಿನ್ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ ಕನ್ನಡದ ಬಗೆ ಒಂದು ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ.

ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಫಿಲ್ಮ್ಸ್ ನಿರ್ಮಾಣದ ಗಡಿನಾಡು ಸಿನಿಮಾದಲ್ಲಿ ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಿತ್ರತಂಡಕ್ಕೆ ಬೆದರಿಕೆ ಕರೆಗಳು ಬಂದಿವೆಯಂತೆ. ಚಿತ್ರ ಬಿಡುಗಡೆ ಮಾಡಬೇಡಿ, ಶೀರ್ಷಿಕೆ ಬದಲಾಯಿಸಿ ಎಂದು ಹೇಳಿದರು ಯಾವುದಕ್ಕೆ ಜಗ್ಗದೆ ತಂಡ ಚಿತ್ರವನ್ನು ಬಿಡುಗಡೆಗೊಳಿಸುತ್ತಿದೆ.


Spread the love

About Laxminews 24x7

Check Also

1500 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Spread the love ಚಿಕ್ಕೋಡಿ: ‘ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ