Breaking News
Home / ರಾಜ್ಯ / ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಶಿವರಾಜ್‍ಕುಮಾರ್

ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಶಿವರಾಜ್‍ಕುಮಾರ್

Spread the love

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೈಸೂರಿನ ಫುಟ್‍ಪಾತ್ ಅಂಗಡಿಯಲ್ಲಿ ಸಾಮಾನ್ಯ ಜನರಂತೆ ಕುಳಿತು ಟೀ ಕುಡಿದು ಸರಳತೆ ಮೆರೆದಿದ್ದಾರೆ.

ಭಜರಂಗಿ 2 ಸಿನಿಮಾದ ಶೂಟಿಂಗ್‍ಗಾಗಿ ಶಿವರಾಜ್‍ಕುಮಾರ್ ಮೈಸೂರಿಗೆ ತೆರಳಿದ್ದಾರೆ. ವೀಕೆಂಡ್‍ನಲ್ಲಿ ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ್ದಾರೆ.

ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿ ಇರುವ ತಮ್ಮ ಅಭಿಮಾನಿ ಮಾದೇಶ್ ಎಂಬುವವರ ಟೀ ಅಂಗಡಿಗೆ ಹೋಗಿದ್ದಾರೆ. ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಾದೇಶ್ ಡಾ.ರಾಜ್ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಫುಟ್‍ಪಾತ್ ಟೀ ಅಂಗಡಿಗೆ ಹೋಗಿ ಸಾಮಾನ್ಯನಂತೆ ಕುಳಿತು ಶಿವರಾಜ್‍ಕುಮಾರ್ ಟೀ ಕುಡಿದಿದ್ದಾರೆ. 20 ನಿಮಿಷಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ