Breaking News

ಕುಮಾರಸ್ವಾಮಿ ಬಗ್ಗೆ ಸಣ್ಣದಾಗಿ ಮಾತನಾಡಬೇಡಿ – ನಿಶ್ಚಲಾನಂದನಾಥ ಸ್ವಾಮೀಜಿ ವಿರುದ್ಧ ರೇವಣ್ಣ ವಾಗ್ದಾಳಿ

Spread the love

ಮಂಡ್ಯ: ಒಕ್ಕಲಿಗ ಸಿಎಂ ಆಗಬೇಕಿರುವ ಡಿ.ಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿರುಕುಳ ನೀಡುತ್ತಿದ್ದಾರೆ ಎಂಬ ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದನಾಥ ಸ್ವಾಮೀಜಿ  ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ಎಲೆಚಾಕನಹಳ್ಳಿಯಲ್ಲಿ ನಡೆದ ದೇವಸ್ಥಾನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ಹೇಳಿಕೆಗೆ ನೇರವಾಗಿ ತಿರುಗೇಟು ನೀಡಿದರು.

ಸ್ವಾಮೀಜಿಗಳು ಸ್ವಾಮಿ ಕೆಲಸ ಮಾಡಿಕೊಂಡು ಇರಬೇಕು
ಸ್ವಾಮೀಜಿ ಎಂದು ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ ರೇವಣ್ಣ, ಕುಮಾರಣ್ಣನ ಬಗ್ಗೆ ಸ್ವಾಮೀಜಿಗಳು ಇಷ್ಟು ಸಣ್ಣದಾಗಿ ಮಾತನಾಡಬಾರದು. ಸ್ವಾಮಿಗಳು ತಮ್ಮ ಸ್ವಾಮಿ ಕೆಲಸ ಮಾಡಿಕೊಂಡು ಇರಬೇಕು. ದೇವೇಗೌಡರು ತ್ಯಾಗ ಮಾಡಿ ಆ ಮಠವನ್ನು ಕಟ್ಟಿಸಿಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಅವರು ಮಾಡಲಿ. ದಾನಿಗಳು ಹಣ ಕೊಟ್ಟರೆ ಈಗಲೂ ಸಂತೋಷದಿಂದ ಪಡೆದುಕೊಳ್ಳಲಿ, ಎಂದು ಕಟುವಾಗಿ ನುಡಿದರು.

ಅನ್ಯಾಯವಾದಾಗ ಧ್ವನಿ ಎತ್ತಲೇಬೇಕು
ಮುಂದುವರಿದು ಮಾತನಾಡಿದ ಅವರು, ದೊಡ್ಡ ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ನಮ್ಮದು ಒಂದೆರಡು ಕೆಲಸ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ಬಯ್ಯಲು ಹೋಗಬಾರದು. ಸಮಾಜವನ್ನ ಒಗ್ಗೂಡಿಸಿ ಮುಂದೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ವಿನಃ, ಕುಮಾರಣ್ಣ (HD Kumaraswamy) ಯಾರಿಗೋ ಕಿರುಕುಳ ಕೊಡುತ್ತಿದ್ದಾರೆ ಎಂದು ಬಾಲಿಶವಾಗಿ ಆರೋಪಿಸಬಾರದು. ಜನರಿಗೆ ಅನ್ಯಾಯವಾದಾಗ ಕುಮಾರಸ್ವಾಮಿ ಧ್ವನಿ ಎತ್ತಲೇಬೇಕು. ನಿಮಗೆ ನೋವಾದಾಗ ಅವರು ಧ್ವನಿ ಎತ್ತುವುದನ್ನ ನಿಲ್ಲಿಸಿ ಎಂದು ಹೇಳಲು ಸಾಧ್ಯವೇ?‌ ಎಂದು ಪ್ರಶ್ನಿಸಿದರು.

ಕುಮಾರಣ್ಣನಂತಹ ತ್ಯಾಗಜೀವಿ ಬೇರೊಬ್ಬರಿಲ್ಲ
ಕುಮಾರಣ್ಣ ನನ್ನ ಸ್ವಂತ ತಮ್ಮ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಅವರೊಬ್ಬ ದೊಡ್ಡ ಹೃದಯವಂತ. ಅವರಂತಹ ತ್ಯಾಗದ ಮನುಷ್ಯ ರಾಜ್ಯ ರಾಜಕಾರಣದಲ್ಲಿ ಯಾರೂ ಇಲ್ಲ, ಎಂದು ರೇವಣ್ಣ ತಮ್ಮ ಸಹೋದರನ ಪರವಾಗಿ ಸಮರ್ಥನೆ ನೀಡಿದರು.


Spread the love

About Laxminews 24x7

Check Also

ಜೈಲಿನಲ್ಲೂ ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆ ಕಳ್ಳಾಟ

Spread the loveಗಳೂರು: ಕೆಪಿಎಸ್‌ಸಿ  ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ  ತನ್ನ ಕಳ್ಳಾಟವನ್ನು ಜೈಲಿನಲ್ಲಿಯೂ ಮುಂದುವರಿಸಿದ್ದಾನೆ ಎನ್ನೋದು ಬಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ