Breaking News

ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಶಿವರಾಜ್‍ಕುಮಾರ್

Spread the love

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೈಸೂರಿನ ಫುಟ್‍ಪಾತ್ ಅಂಗಡಿಯಲ್ಲಿ ಸಾಮಾನ್ಯ ಜನರಂತೆ ಕುಳಿತು ಟೀ ಕುಡಿದು ಸರಳತೆ ಮೆರೆದಿದ್ದಾರೆ.

ಭಜರಂಗಿ 2 ಸಿನಿಮಾದ ಶೂಟಿಂಗ್‍ಗಾಗಿ ಶಿವರಾಜ್‍ಕುಮಾರ್ ಮೈಸೂರಿಗೆ ತೆರಳಿದ್ದಾರೆ. ವೀಕೆಂಡ್‍ನಲ್ಲಿ ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ್ದಾರೆ.

ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿ ಇರುವ ತಮ್ಮ ಅಭಿಮಾನಿ ಮಾದೇಶ್ ಎಂಬುವವರ ಟೀ ಅಂಗಡಿಗೆ ಹೋಗಿದ್ದಾರೆ. ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಾದೇಶ್ ಡಾ.ರಾಜ್ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಫುಟ್‍ಪಾತ್ ಟೀ ಅಂಗಡಿಗೆ ಹೋಗಿ ಸಾಮಾನ್ಯನಂತೆ ಕುಳಿತು ಶಿವರಾಜ್‍ಕುಮಾರ್ ಟೀ ಕುಡಿದಿದ್ದಾರೆ. 20 ನಿಮಿಷಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ