Breaking News

ಟೆಕ್ಕಿಯನ್ನು ಕೊಂದು ರಾತ್ರಿಯಿಡೀ ಶವದ ಬಳಿ ಕುಳಿತ ಲಿವ್‌ ಇನ್‌ ಪಾರ್ಟ್ನರ್‌

Spread the love

ಮುಂಬೈ: ಟೆಕ್ಕಿಯೊಬ್ಬಳನ್ನು  ಆಕೆಯ ಲಿವ್‌ ಇನ್‌ ಸಂಗಾತಿಯೇ ಥಳಿಸಿ ಕೊಂದ ಘಟನೆ ಪುಣೆಯ ಹಿಂಜೆವಾಡಿಯಲ್ಲಿ ನಡೆದಿದೆ. ಕೊಲೆ ಬಳಿಕ ಆರೋಪಿ ರಾತ್ರಿಯಿಡೀ ಆಕೆಯ ಮೃತದೇಹದ ಪಕ್ಕದಲ್ಲಿ ಕುಳಿತಿದ್ದ ಎಂದು ತಿಳಿದು ಬಂದಿದೆ.

ಕೋಮಲ್ ದಹಲೆ ಕೊಲೆಯಾದ ದುರ್ದೈವಿ. ಶುಭಮ್ ಜ್ಞಾನೇಶ್ವರ್ ಕಲ್ಬಂಡೆ ಕೊಲೆ ಆರೋಪಿಯಾಗಿದ್ದಾನೆ. ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, ಮೂರು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮದುವೆಯಾಗಲು ಯೋಜಿಸಿದ್ದರು.

ಮೂಲತಃ ಮಹಾರಾಷ್ಟ್ರದ ವಾರ್ಧಾದ ಕೋಮಲ್ ಮತ್ತು ಬುಲ್ಧಾನಾ ಮೂಲದ ಶುಭಮ್ ಇಬ್ಬರೂ ಬೇರೆ ಬೇರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಕುಟುಂಬಗಳಿಗೂ ಅವರ ಸಂಬಂಧದ ಬಗ್ಗೆ ತಿಳಿದಿತ್ತು ಮತ್ತು ಮದುವೆಗೆ ಒಪ್ಪಿಕೊಂಡಿದ್ದರು.

ಇತ್ತೀಚೆಗೆ ಶುಭಮ್‌ಗೆ ಬೇರೆ ಸಂಬಂಧವಿದೆ ಎಂದು ಕೋಮಲ್ ಅನುಮಾನ ವ್ಯಕ್ತಪಡಿಸಿದ್ದಳು. ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ನಡೆದ ಗಲಾಟೆ ವೇಳೆ ಆರೋಪಿಯು, ಕೋಮಲ್‌ ಹಲ್ಲೆ ನಡೆಸಿ, ತಲೆ ಮತ್ತು ಕುತ್ತಿಗೆಗೆ ಒದ್ದು, ಹೊಡೆದಿದ್ದ. ಇದರಿಂದ ಆಕೆ ಸಾವನ್ನಪ್ಪಿದ್ದಳು. ಬಳಿಕ ರಾತ್ರಿಯಿಡೀ ಕೋಮಲ್ ದೇಹದ ಪಕ್ಕದಲ್ಲಿ ಕುಳಿತು, ಬೆಳಿಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.

ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಮಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಅಪ್ರಾಪ್ತೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದವ ಜೈಲಿಗೆ

Spread the loveಕೋಲಾರ: ಅಪ್ರಾಪ್ತೆಯನ್ನು ಮದುವೆಯಾಗಿ 3 ಮಕ್ಕಳ ತಂದೆಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ  ಜಿಲ್ಲೆ ಕೆಜಿಎಫ್ ತಾಲ್ಲೂಕು ಬೇತಮಂಗಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ