Breaking News

ವಿದ್ಯುತ್ ಶಾಕ್‌ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಲಿ

Spread the love

ರಾಮನಗರ: ಹಸು ತೊಳೆದ ಬಳಿಕ ಎಲೆಕ್ಟ್ರಿಕ್ ಮೋಟಾರ್ ಸ್ವಿಚ್ ಆಫ್ ಮಾಡಲು ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ  ವಿದ್ಯುತ್ ಶಾಕ್‌ಗೆ  ಬಲಿಯಾಗಿರುವ ದಾರುಣ ಘಟನೆ ರಾಮನಗರ  ತಾಲೂಕಿನ ಗದಗಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ತರುಣ್ (17) ಮೃತ ದುರ್ದೈವಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತರುಣ್, ಇಂದು ಎಲೆಕ್ಟ್ರಿಕ್ ಮೋಟಾರ್ ಆನ್ ಮಾಡಿ ಹಸು ತೊಳೆಯುತ್ತಿದ್ದ. ಹಸು ತೊಳೆದ ಬಳಿಕ ನೀರಿನ ಮೋಟಾರ್ ನಿಲ್ಲಿಸಲು ಸ್ವಿಚ್ ಆಫ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಾಕ್ ತಗುಲಿದೆ. ವಿದ್ಯುತ್ ಆಘಾತದ ತೀವ್ರತೆಗೆ ತರುಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ಆವರಿಸಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಖಾಯಂ ಪ್ರಾಂಶುಪಾಲರ ನೇಮಕ: ಸಚಿವ ರಾಯರೆಡ್ಡಿ

Spread the loveಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ