Breaking News

Yearly Archives: 2026

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕಣ್ಣೀರಿಡುತ್ತಾ ವಿಷ ಕುಡಿದ ಪತಿ

ಹಾಸನ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವಿಡಿಯೋ ಮಾಡಿಟ್ಟು ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಚನ್ನರಾಯಪಟ್ಟಣ  ತಾಲೂಕಿನ ಹಿರಿಸಾವೆಯಲ್ಲಿ ನಡೆದಿದೆ. ಬೆಳಗಿಹಳ್ಳಿ ಗ್ರಾಮದ ದೊರೆ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಕಳೆದ 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು ಎಂದು ತಿಳಿದುಬಂದಿದೆ. ದೊರೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿಟ್ಟಿದ್ದು, …

Read More »

ನನಗೂ ಸಿಎಂ ಆಗಬೇಕು ಎಂಬ ಆಸೆ ಇದೆ: ಪ್ರದೀಪ್‌ ಈಶ್ವರ್‌

ದಾವಣಗೆರೆ: 25 ವರ್ಷಗಳ ಬಳಿಕ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌  ಹೇಳಿದ್ದಾರೆ. ದಾವಣಗೆರೆಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರಕ್ಕೆ 2028ರಲ್ಲಿ ಉತ್ತರ ನೀಡುತ್ತೇನೆ. ಶಿಕ್ಷಣ ಸುಧಾರಣಾ ಸಬ್‌ ಕಮಿಟಿಗೆ ಹಲವು ಇನ್‌ಪುಟ್‌ಗಳನ್ನು ನೀಡಿದ್ದು, ಸಚಿವ …

Read More »

ಬಿಳಿಗಿರಿರಂಗನ ಬೆಟ್ಟದ ಕಾಡಲ್ಲಿ ಗಾಂಜಾ ಬೆಳೆದ ಕಿಡಿಗೇಡಿಗಳು – 292 ಗಿಡಗಳು ಪತ್ತೆ!

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ  ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಸುಮಾರು 292 ಗಾಂಜಾ ಗಿಡಗಳು  ಪತ್ತೆಯಾಗಿವೆ. ಬೈಲೂರು ವಲಯದ ಕೂಳಿಹಟ್ಟಿ, ಬೆಳ್ಳಾಜೆ ಬೀಟ್‌ನಲ್ಲಿ ಅಬಕಾರಿ ಹಾಗೂ ಅರಣ್ಯಾಧಿಕಾರಿಗಳ ಜಂಟೀ ಕಾರ್ಯಾಚರಣೆ ವೇಳೆ ಗಾಂಜಾ ಗಿಡಗಳು ಪತ್ತೆಯಾಗಿವೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಪತ್ತೆಯಾದ ಗಾಂಜಾ ಗಿಡಗಳ ತೂಕ ಸುಮಾರು 213 ಕೆಜಿ ಇದೆ. ಈ ಪ್ರಮಾಣದ ಗಾಂಜಾ ಗಿಡಗಳು ಪತ್ತೆಯಾಗಿರುವುದು ತೀವ್ರ …

Read More »

ಗದಗ KRIDL ಎಇಇ ನಾಪತ್ತೆ ಕೇಸ್‌ – ಅಧಿಕಾರಿ ಪತ್ತೆಗಾಗಿ 5 ತಂಡ ರಚನೆ; ವಿಜಯವಾಡದಲ್ಲಿ ಲೊಕೇಷನ್‌ ಪತ್ತೆ!

ಗದಗ: ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡ್ತಾರೆ ಅಂತಾ ನೊಂದು ಗದಗ ಕೆಆರ್‌ಐಡಿಎಲ್ ಇಲಾಖೆ ಎಇಇ  ಅಧಿಕಾರಿ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಅಧಿಕಾರಿ ಪತ್ತೆ ಕಾರ್ಯಕ್ಕಾಗಿ ಗದಗ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ 5 ತಂಡ ರಚನೆ ಮಾಡಲಾಗಿದೆ. ಕರ್ನಾಟಕ ಅಷ್ಟೇ ಅಲ್ಲಾ ಹೊರ ರಾಜ್ಯದಲ್ಲೂ ಪೋಲಿಸ್  ಪತ್ತೆ ಕಾರ್ಯ ಚುರುಕುಗೊಂಡಿದೆ. ಆ ಎಂಜಿನಿಯರ್‌ ನಾಪತ್ತೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಗದಗದ ಕೆಆರ್‌ಐಡಿಎಲ್ ಎಇಇ ಅಧಿಕಾರಿ …

Read More »

ಬರ ಚರ್ಚೆಗೆ ಸರ್ವಪಕ್ಷ ನಿಯೋಗದ ಜೊತೆ ಬಿಜೆಪಿಯವ್ರು ಬರಬೇಕು, ಇಲ್ಲದಿದ್ರೆ ಅವರದ್ದು ಕಪಟ ಅಂತ ಗೊತ್ತಾಗುತ್ತೆ: ಡಿಕೆಶಿ

ಬೆಂಗಳೂರು: ಬರದ  ಬಗ್ಗೆ ಕೇಂದ್ರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗದ  ಜೊತೆ ಬಿಜೆಪಿಯವರು ಬರಬೇಕು. ಅವರು ಬರದೇ ಇದ್ದರೆ ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದು ಸಿಎಂ ಡಿ.ಕೆ ಶಿವಕುಮಾರ್‌  ಅವರು ಕುಟುಕಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಬರದ ಬಗ್ಗೆ ಚರ್ಚೆ ಮಾಡೋದಕ್ಕೆ ಸರ್ವಪಕ್ಷ ಸಭೆಗೆ ಬರಲ್ಲ ಎಂಬ ವಿಪಕ್ಷ ಗಳ ಹೇಳಿಕೆಗೆ ಅವರು ತಿರುಗೇಟು ಕೊಟ್ಟರು. ಅಕ್ಟೋಬರ್ 3ರಂದು ಬರ ಅಧ್ಯಯನ …

Read More »

LPU Rape Rumour | ‘ರೇಪ್‌ ವದಂತಿ’ ಸ್ಪಷ್ಟೀಕರಣ ವಿಡಿಯೋದಲ್ಲಿ ಹೇಳಿಕೆ ಬಳಕೆ – ಅನುಮತಿ ಪಡೆಯದೇ ವಿಡಿಯೋ ಪ್ರಸಾರ ಆರೋಪ

ಚಂಡೀಗಢ: ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ  ಕ್ಯಾಂಪಸ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹರಿದಾಡಿದ್ದ ವದಂತಿಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ವಿಶ್ವವಿದ್ಯಾಲಯದ  ಆಡಳಿತ ಮಂಡಳಿಯೇ ಬಿಡುಗಡೆ ಮಾಡಿದ್ದ ಸ್ಪಷ್ಟೀಕರಣ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮೂವರು ವಿದ್ಯಾರ್ಥಿನಿಯರು, ತಮಗೆ ಏನು ಹೇಳಬೇಕು ಎಂಬುದನ್ನ ಆಡಳಿತ ಮಂಡಳಿಯೇ ಸೂಚಿಸಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ, ನಮ್ಮ ಅನುಮತಿಯಿಲ್ಲದೇ ಹೇಳಿಕೆಯ ಕೆಲ ಭಾಗಗಳನ್ನ ಕತ್ತರಿಸಿ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ವಿಡಿಯೋನಲ್ಲಿ …

Read More »

ದರ್ಶನ್‌ಗೆ ʻಮಂಡೇʼ ಬಿಸಿ – ಇಂದು ದಾಸನ ಆಪ್ತನಿಂದ ಮಾಫಿ ಸಾಕ್ಷಿ ಹೇಳಿಕೆ ದಾಖಲು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನ ( ಆರೋಪಿ ದರ್ಶನ್‌ಗೆ  ಇಂದು ಬಿಗ್‌ ಡೇ. ಸಿಸಿಎಚ್ 59ನೇ ಕೋರ್ಟ್‌ನಲ್ಲಿ ದಾಸನ ಆಪ್ತ ಪ್ರದೋಷ್‌ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ಮುಂದೆ 16 ಆರೋಪಿಗಳು ಮಾತ್ರ ಇರಲಿದ್ದು, ಪ್ರದೋಷ್ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಇಂದು (ಸೆ.28) ಕೋರ್ಟ್‌ನಲ್ಲಿ ತನ್ನ ಹೇಳಿಕೆ ದಾಖಲು ಮಾಡಲಿದ್ದಾನೆ. ಇದು ನಟ ದರ್ಶನ್, ಪವಿತ್ರಾಗೌಡಗೆ ಬಹುದೊಡ್ಡ ಸಂಕಷ್ಟ ತಂದೊಡ್ಡುವ ಮಾತುಗಳು …

Read More »

ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್‌ನಿಂದ ಅಟ್ಯಾಕ್‌ – ರೌಡಿಶೀಟರ್‌ ಬರ್ಬರ ಹತ್ಯೆ

ಬೆಂಗಳೂರು: ಪೀಣ್ಯದ  ಗುಲ್ಬರ್ಗ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ರೌಡಿಶೀಟರ್‌ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ದೀಪಕ್ ಅಲಿಯಾಸ್‌ ದೀಪು ಕೊಲೆಯಾದ ರೌಡಿಶೀಟರ್. ಈತ ನಂದಿನಿ ಲೇಔಟ್ ರೌಡಿಶೀಟರ್ ಆಗಿದ್ದ. ಕಳೆದ ಎರಡು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಇದೇ ಕಾರಣಕ್ಕೆ ಸೆ.27ರ ರಾತ್ರಿ ದೀಪಕ್ ಮೇಲೆ ದಾಳಿ ಮಾಡಿದ 7-8 ಜನರ ಗ್ಯಾಂಗ್‌ ದಾಳಿ ಮಾಡಿ ಹತ್ಯೆ ಮಾಡಿದೆ. ಎರಡು …

Read More »

2013ರಲ್ಲಿ 6 ಗಂಟೆಗಳ ಕಾಲ ರೈಲು ತಡೆದ ಪ್ರಕರಣ – ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್‌

ಹುಬ್ಬಳ್ಳಿ: 2013ರಲ್ಲಿ ರೈಲು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್  ಅವರನ್ನು ಹುಬ್ಬಳ್ಳಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಅವರು ಆಗಮಿಸಿದ್ದರು. ಈ ವೇಳೆ ಶಿರಸಿ ಪೊಲೀಸರ ಸಹಾಯ ಪಡೆದು ಅವರನ್ನು ಬಂಧಿಸಲಾಗಿದೆ. 2013ರಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಹೋರಾಟದ ವೇಳೆ ಅವರ ನೇತೃತ್ವದಲ್ಲಿ ರೈಲು ತಡೆಯಲಾಗಿತ್ತು. ಸುಮಾರು ಆರು ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆದು ರೈತರು ಹೋರಾಟ …

Read More »

ಕೇದಾರನಾಥದಲ್ಲಿ ಏಕಾಏಕಿ ಭೂಕುಸಿತ – 5 ವರ್ಷದ ಬಾಲಕ ಸಾವು, 1,500 ಯಾತ್ರಿಕರ ಸ್ಥಳಾಂತರ

ಡೆಹ್ರಾಡೂನ್: ಕೇದಾರನಾಥ  ಮಾರ್ಗದ ಚಿರ್ಬಾಸಾ ಬಳಿ ಏಕಾಏಕಿ ಸಂಭವಿಸಿದ ಭೂಕುಸಿತದಿಂದಾಗಿ 5 ವರ್ಷದ ಬಾಲಕ ಸಾವನ್ನಪ್ಪಿದ್ದು, 1,500 ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಭಾನುವಾರ (ಸೆ.27) ತಡರಾತ್ರಿ ಗೌರಿಕುಂಡದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚಿರ್ಬಾಸಾ ಬಳಿಯ ಮಾರ್ಗದಲ್ಲಿ ಬೆಟ್ಟದಿಂದ ಬಂಡೆ, ಶಿಲಾಖಂಡದ ರಾಶಿಗಳು ಏಕಾಏಕಿ ಕೂಸಿದಿವೆ. ಪರಿಣಾಮ ಕಲ್ಲು ಬಡಿದು ಉತ್ತರ ಪ್ರದೇಶದ ಇಟಾ ಮೂಲದ ಬಾಲಕ ಯಶ್(5) ಸಾವನ್ನಪ್ಪಿದ್ದು, ಹಲವು ಯಾತ್ರಿಕರು ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ಕೂಡಲೇ …

Read More »