ಭೋಪಾಲ್: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 16 ಲಕ್ಷ ಫಾಲೋವರ್ಸ್ ಹೊಂದಿದ್ದ ಫೇಮಸ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ (30) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ನಿಧಿ ಅವರಿಗೆ ಫೇಸ್‌ಬುಕ್‌ನಲ್ಲಿ ಸುಮಾರು 9 ಲಕ್ಷ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷ ಫಾಲೋವರ್ಸ್ ಇದ್ದರು. ಅವರ ರೀಲ್ಸ್ ಮತ್ತು ಪೋಸ್ಟ್‌ಗಳಿಗೆ ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿದ್ದವು. ಹಲವು ವಿಡಿಯೋಗಳು ಲಕ್ಷಾಂತರ ವೀವ್ಸ್ ಪಡೆದುಕೊಂಡಿದ್ದವು. ಸಿಂಗ್ರೌಲಿಯ ಭೂಸಾ …
Read More »Yearly Archives: 2026
ಲವ್ವರ್ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ
ಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು ಹೇಳಿದ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ನನ್ನು ಅವರ ಹದಿಹರೆಯದ ಮಗನೇ ಮನೆಯೊಳಗೆ ಗುಂಡಿಕ್ಕಿ ಕೊಂದಿದ್ದಾನೆ. ತನ್ನ ಲವ್ವರ್ ಮದುವೆಯಾಗಲು 21 ವರ್ಷ ವಯಸ್ಸಾಗುವವರೆಗೆ ಕಾಯುವಂತೆ ಪುತ್ರನಿಗೆ ತಂದೆ ಬುದ್ದಿಮಾತು ಹೇಳಿದ್ದರು. ಪೊಲೀಸ್ ಪ್ರಧಾನ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ಸಿಂಗ್, …
Read More »ಮಹಿಳಾ ಮೀಸಲಾತಿ ಸನ್ನಿಹಿತ – ತುಮಕೂರಿನಲ್ಲಿ ಪುತ್ರಿಯರನ್ನು ರಾಜಕೀಯ ಅಖಾಡಕ್ಕೆ ಅಣಿಗೊಳಿಸುತ್ತಿರುವ ನಾಯಕರು
ತುಮಕೂರು: ಕೇಂದ್ರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ ಕಾನೂನಾಗುವ ಎಲ್ಲಾ ಲಕ್ಷಣ ಇದೆ ಎಂಬ ಸುಳಿವು ಸಿಕ್ಕಿದೆ. ಇದರಿಂದ ಅಲರ್ಟ್ ಆದ ತುಮಕೂರು ಜಿಲ್ಲೆಯ ರಾಜಕೀಯ ನಾಯಕರುಗಳು ತಮ್ಮ ಪುತ್ರಿಯರನ್ನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯಗೊಳಿಸುತಿದ್ದಾರೆ. ವಿಪಕ್ಷಗಳ ಅಸಹಕಾರದಿಂದ ಮೊದಲ ಪ್ರಯತ್ನದಲ್ಲಿ ಕೇಂದ್ರದ ಮಹಿಳಾ ರಾಜಕೀಯ ಮೀಸಲಾತಿ ಮಸೂದೆ ಸೋತಿರಬಹುದು. ಆದರೂ ಮೋದಿ ಮತ್ತು ಅಮಿತ್ ಶಾ ಟೀಂ ಈ ಕಾನೂನನ್ನೂ ರೂಪಿಸಿಯೇ ತಿರುತ್ತಾರೆ ಎಂಬ ಅಚಲ ವಿಶ್ವಾಸ ಬಿಜೆಪಿಗಿಂತ ಕಾಂಗ್ರೆಸ್ …
Read More »ತೆರಿಗೆ ವಂಚನೆ ಆರೋಪ – ನಟಿ ರಕುಲ್ ಪ್ರೀತ್ ಸಿಂಗ್‌ಗೆ ಐಟಿ ಶಾಕ್
ಸಿನಿಮಾ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ನಟಿ ರಕುಲ್ ಪ್ರೀತ್ ಸಿಂಗ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಚಲನಚಿತ್ರ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಹಣವನ್ನು ರವಾನಿಸಲಾಗಿದೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಚಲನಚಿತ್ರೋದ್ಯಮದ ಹಲವು ಗಣ್ಯರು ಮತ್ತು ಅವರ ಕಂಪನಿಗಳಿಗೆ ಸಂಬಂಧಿಸಿದ ಸುಮಾರು 12 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ನಟಿ ರಕುಲ್ ಪ್ರೀತ್ ಸಿಂಗ್, ನಿರ್ಮಾಪಕ …
Read More »ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣ
ಹಾಸನ: ಸಹೋದರರ ನಡುವೆ ಜಮೀನಿಗಾಗಿ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದ ಘಟನೆ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಘು (44) ಅಣ್ಣನಿಂದಲೇ ಕೊಲೆಯಾದ ವ್ಯಕ್ತಿ. ದೇವರಾಜ್ (46) ಕೊಲೆಗೈದಆರೋಪಿಯಾಗಿದ್ದಾನೆ. ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ತಮ್ಮ ರಘುಗೆ ಅಣ್ಣ ದೇವರಾಜ್ ಚಾಕುವಿನಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಘು …
Read More »ಗವಿಶ್ರೀಗಳಿಗೆ ಮೈಸೂರು ದಸರಾ ಅಧಿಕೃತ ಆಹ್ವಾನ ನೀಡಿದ ಶಿವರಾಜ್ ತಂಗಡಗಿ
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೊಪ್ಪಳದ ಗವಿಮಠಕ್ಕೆ ಆಗಮಿಸಿ ಗವಿಶ್ರೀಗಳಿಗೆ ಮೈಸೂರು ದಸರಾಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ ದಸರಾ ಉದ್ಘಾಟನೆಗೆ ಕೊಪ್ಪಳ ಶ್ರೀಗಳನ್ನ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಶ್ರೀಗಳನ್ನ ಒಪ್ಪಿಸಲಿಕ್ಕೆ ಸಿಎಂ ಡಿಕೆಶಿ ಅವರು ಮನವಿ ಮಾಡಿದ್ದರು. ಅದರಂತೆ ಪ್ರೀತಿ ವಿಶ್ವಾಸದಿಂದ ಶ್ರೀಗಳು ಒಪ್ಪಿಕೊಂಡಿದ್ದಾರೆ. ಆದರೆ ಕೆಲವೊಂದಿಷ್ಟು ಕಿಡಿಗೇಡಿಗಳು ಅಪಪ್ರಚಾರ ಮಾಡುವ ಕೆಲಸ ಮಾಡಿದ್ದಾರೆ …
Read More »ಮೋದಿ, ಚುನಾವಣಾ ಆಯುಕ್ತರ ಪ್ರತಿಕೃತಿ ದಹಿಸಲು ಯತ್ನ – ಮಂಡ್ಯದಲ್ಲಿ ʻಕೈʼ ಕಾರ್ಯಕರ್ತರ ಹೈಡ್ರಾಮಾ
ಮಂಡ್ಯ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ನೂಕಾಟ-ತಳ್ಳಾಟಕ್ಕೆ ಸಾಕ್ಷಿಯಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿಯನ್ನ ದಹಿಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬೆಂಕಿ ಹಚ್ಚದಂತೆ ತಡೆದರು. ಮೋದಿ ಅವರ ಪೋಸ್ಟರ್ …
Read More »ದರ್ಶನ್‌ಗೆ ಶಾಕ್ ಮೇಲೆ ಶಾಕ್ – ಪ್ರದೋಷ್ ಮಾಫಿ ಸಾಕ್ಷಿ ದಾಖಲು ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ ದಾಖಲು ಮಾಡುವುದನ್ನು ಮುಂದೂಡಲು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯ ಬೇಕಿದೆ. ಅದಕ್ಕಾಗಿ ಹೇಳಿಕೆ ದಾಖಲು ಮಾಡುವುದನ್ನು ಮುಂದೂಡುವಂತೆ ದರ್ಶನ್ ಪರ ವಕೀಲರು ಸೆಷನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ …
Read More »ಬರ ಚರ್ಚೆಗೆ ಸರ್ವಪಕ್ಷ ನಿಯೋಗದ ಜೊತೆ ಬಿಜೆಪಿಯವ್ರು ಬರಬೇಕು, ಇಲ್ಲದಿದ್ರೆ ಅವರದ್ದು ಕಪಟ ಅಂತ ಗೊತ್ತಾಗುತ್ತೆ: ಡಿಕೆಶಿ
ಬೆಂಗಳೂರು: ಬರದ ಬಗ್ಗೆ ಕೇಂದ್ರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗದ ಜೊತೆ ಬಿಜೆಪಿಯವರು ಬರಬೇಕು. ಅವರು ಬರದೇ ಇದ್ದರೆ ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಕುಟುಕಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಬರದ ಬಗ್ಗೆ ಚರ್ಚೆ ಮಾಡೋದಕ್ಕೆ ಸರ್ವಪಕ್ಷ ಸಭೆಗೆ ಬರಲ್ಲ ಎಂಬ ವಿಪಕ್ಷ ಗಳ ಹೇಳಿಕೆಗೆ ಅವರು ತಿರುಗೇಟು ಕೊಟ್ಟರು. ಅಕ್ಟೋಬರ್ 3ರಂದು ಬರ ಅಧ್ಯಯನ …
Read More »ಗವಿಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಸುಳ್ಳು ಸುದ್ದಿ – ಕೊಪ್ಪಳದಲ್ಲಿ ಕೇಸ್ ದಾಖಲು
ಕೊಪ್ಪಳ: ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ಮೇಲೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಶನಿವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ “ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಮೈಸೂರು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ” ಎಂಬ ಆಧಾರರಹಿತ ಪೋಸ್ಟ್ ಪ್ರಕಟವಾಗಿ ವೈರಲ್ ಆಗಿತ್ತು. ಈ ಪೋಸ್ಟ್ ಸಂಪೂರ್ಣ ಸುಳ್ಳು ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಕೂಡಿದೆ ಎಂಬುದನ್ನು ಗಮನಿಸಿದ …
Read More »
Laxmi News 24×7