Breaking News

Yearly Archives: 2026

ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕೆ ಮಸೀದಿಯ ಭಾಗ ತೆರವು: ಪೊಲೀಸರ ಮೇಲೆ ಕಲ್ಲು, ಲಾಠಿಚಾರ್ಜ್‌

ಭೋಪಾಲ್‌: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ  ಸೋಮವಾರ ಅಭಿವೃದ್ಧಿ ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದಿದೆ. ರಸ್ತೆ ಅಗಲೀಕರಣ ಕಾಮಗಾರಿಯ ಅಂಗವಾಗಿ ಐತಿಹಾಸಿಕ ಶಾಹಿ ಮಸೀದಿಯ  ಒಂದು ಭಾಗವನ್ನು ತೆರವುಗೊಳಿಸುತ್ತಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮತ್ತು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಶಾಹಿ ಮಸೀದಿ …

Read More »

ಬಾಕಿ ಟ್ರಾಫಿಕ್ ಚಲನ್ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್

ನವದೆಹಲಿ: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಇ-ಚಲನ್  ದಂಡವನ್ನು ವಸೂಲಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಾಕಿ ಚಲನ್‌ಗಳನ್ನು ವಿದ್ಯುತ್ ಬಿಲ್‌ಗಳೊಂದಿಗೆ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಸಲಹೆ ನೀಡಿದೆ. ಟ್ರಾಫಿಕ್ ಉಲ್ಲಂಘನೆಗಳ ಎಲೆಕ್ಟ್ರಾನಿಕ್ ಜಾರಿ ಹಾಗೂ ಬಾಕಿ ಉಳಿದಿರುವ ದಂಡದ ವಸೂಲಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ …

Read More »

ಮೈಸೂರು ದಸರಾ – ಯತೀಂದ್ರ ಅಬ್ಬರಕ್ಕೆ ಡಿಕೆಶಿ ಬ್ರೇಕ್‌!

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆರಂಭದ ಹೊಸ್ತಿಲಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಂತೆ ಕಾಣುತ್ತಿದೆ. ಈ ಬಾರಿಯ ದಸರಾ ಆಚರಣೆಗೆ ಸರ್ಕಾರ ಕೈಗೊಂಡಿರುವ ದಿಢೀರ್ ನಿರ್ಧಾರವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರ ಪ್ರಾಬಲ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ತಂತ್ರ ರೂಪಿಸಿ ಬ್ರೇಕ್ ಹಾಕಿದ್ದಾರಾ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಮೈಸೂರು …

Read More »

ದರ್ಶನ್‌ಗೆ ಬಿಗ್ ಶಾಕ್- ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ದಾಖಲು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್  ಮತ್ತು ಇತರ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿ (A-14) ಪ್ರದೋಷ್ ಸೋಮವಾರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಧಿಕೃತವಾಗಿ ಮಾಫಿ ಸಾಕ್ಷ್ಯ ಹೇಳಿಕೆ ದಾಖಲಿಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರದೋಷ್‌  ಅವರನ್ನು ಸೆಷನ್ಸ್ ಕೋರ್ಟ್‌ಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್  ಪರ ವಕೀಲರು …

Read More »

ಡಿಜೆ ಬಳಕೆಗೆ ಅನುಮತಿ ನೀಡದ್ದಕ್ಕೆ ಆಕ್ರೋಶ; ಗಣೇಶ ವಿಸರ್ಜನೆ ಅರ್ಧಕ್ಕೆ ನಿಲ್ಲಿಸಿ ಮರುಪ್ರತಿಷ್ಠಾಪನೆ

ಹಾವೇರಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ  ಡಿಜೆ ಬಳಕೆಗೆ ಪೊಲೀಸರು ಅನುಮತಿ ನೀಡದಿದ್ದಕ್ಕೆ ಆಕ್ರೋಶಗೊಂಡ ಯುವಕರು, ವಿಸರ್ಜನಾ ಮೆರವಣಿಗೆಯನ್ನು ಅರ್ಧದಲ್ಲೇ ನಿಲ್ಲಿಸಿ ಗಣೇಶ ಮೂರ್ತಿಯನ್ನು ವಾಪಸ್ ತಂದು ಮರುಪ್ರತಿಷ್ಠಾಪನೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕೇರೂರು ಗ್ರಾಮದ ಬನಶಂಕರಿ ಗಜಾನನ ಯುವಕ ಸಂಘದ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ವಿಸರ್ಜನೆಗಾಗಿ ಮೆರವಣಿಗೆ ಆರಂಭಿಸಲಾಗಿತ್ತು. ಆದರೆ, ನಿಯಮಗಳ ಕಾರಣ ನೀಡಿ ಪೊಲೀಸರು ಡಿಜೆ ಬಳಕೆಗೆ …

Read More »

ಕಕ್ಷೆ ತಲುಪಿ ಇತಿಹಾಸ ಬರೆದ ಬೆನ್ನಲ್ಲೇ ದುರಂತ: ಪೆಸಿಫಿಕ್ ಸಾಗರದಲ್ಲಿ ಸ್ಫೋಟಗೊಂಡ ಸ್ಟಾರ್‌ಶಿಪ್

ಟೆಕ್ಸಾಸ್‌: ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್  ಸಂಸ್ಥೆಯ ಸ್ಟಾರ್‌ಶಿಪ್  ಮೆಗಾ ರಾಕೆಟ್‌ನ 14ನೇ ಪರೀಕ್ಷಾರ್ಥ ಉಡಾವಣೆ  ಸೆಪ್ಟೆಂಬರ್ 28 ರಂದು ನಡೆದಿದ್ದು, ಉಡಾವಣೆಯ ಬಳಿಕ ರಾಕೆಟ್‌ನ ಬೂಸ್ಟರ್ ಭಾಗವು ಸಮುದ್ರಕ್ಕೆ ಅಪ್ಪಳಿಸಿದಾಗ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಂಡರೂ ಈ ಮಿಷನ್ ಅನ್ನು ಸಂಪೂರ್ಣ ವೈಫಲ್ಯ ಎಂದು ಕರೆಯಲು ಸಾಧ್ಯವಿಲ್ಲ. ಸ್ಟಾರ್‌ಶಿಪ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರಾಕೆಟ್ ಭೂಮಿಯ ಕಕ್ಷೆಯನ್ನು  ತಲುಪುವಲ್ಲಿ ಯಶಸ್ವಿಯಾಗಿದೆ. ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ನ ‘ಸ್ಟಾರ್‌ಬೇಸ್’ ಉಡಾವಣಾ ಕೇಂದ್ರದಿಂದ 124 …

Read More »

ಯುವ ದಸರಾ 2026: ಅ.17ರಂದು ʻಧುರಂದರ್ 2ʼ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ

ಮೈಸೂರು: ಮೈಸೂರಿನಲ್ಲಿ ನಡೆಯಲಿರುವ ಯುವ ದಸರಾ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅ.17ರಂದು ದುರಂಧರ್‌ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಪ್ರತಿದಿನವೂ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಖ್ಯಾತ ಗಾಯಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಅಕ್ಟೋಬರ್ 13ರಂದು ಬಿ. ಅಜನೀಶ್ ಲೋಕನಾಥ್ …

Read More »

ʻನನಗೆ ನ್ಯಾಯ ಬೇಕುʼ ಎಂದು ಹೈ ವೋಲ್ಟೇಜ್ ವಿದ್ಯುತ್ ಕಂಬ ಏರಿದ ಕುಡುಕ; 4 ಗಂಟೆ ಬಳಿಕ ರಕ್ಷಣೆ

ವಿಜಯಪುರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೈ ವೋಲ್ಟೇಜ್  ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ. ವಿಜಯಪುರ ತಾಲೂಕಿನ ಕೌಜಲಗಿ ತಾಂಡಾ ನಿವಾಸಿ ರವಿ ರಾಠೋಡ ಎಂಬಾತ ಮದ್ಯ ಸೇವಿಸಿ ಅಮಲಿನಲ್ಲಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಟವರ್ ಏರಿದ್ದಾನೆ. ಶಿವಗಿರಿಯ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿಜಯಪುರ ನಗರಕ್ಕೆ ಸರಬರಾಜಾಗುವ 110 ಕೆವಿ ವಿದ್ಯುತ್ ಲೈನ್‌ನ ಟವರ್ ಇದಾಗಿದೆ. …

Read More »

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ – 8 ಸೆಕೆಂಡಲ್ಲಿ ಕುಸಿದ ಪರ್ವತ; ವಿವಿಧೆಡೆ 21 ಮಂದಿ ಸಾವು

ಕಠ್ಮಂಡು: ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಹಠಾತ್ ಪ್ರವಾಹ  ಹಾಗೂ ಭೂಕುಸಿತ 1,450ಕ್ಕೂ ಹೆಚ್ಚು ಜನರ ಪ್ರಾಣ ಬಲಿ ಪಡೆದುಕೊಂಡಿತ್ತು. 5,800ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಹುಡುಕಾಟ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಪ್ರವಾಹ ಉಂಟಾಗಿದೆ. ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ದೇಶದ ಹಲವೆಡೆ ವ್ಯಾಪಕ ಪ್ರವಾಹ …

Read More »

ಶಿಕಾರಿಪುರದಲ್ಲಿ ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ: ಮಧು ಬಂಗಾರಪ್ಪ

ಶಿವಮೊಗ್ಗ: ಶಿಕಾರಿಪುರದಲ್ಲಿ  ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ (ಭಾರತ್‌ ಜೋಡೋ 2.0) ನಡೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ  ತಿಳಿಸಿದ್ದಾರೆ. ಶಿಕಾರಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 4 ವರ್ಷದ ಹಿಂದೆ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದರು. ಸೆ.30 ರಂದು ರಾಜ್ಯದ ಗುಂಡ್ಲುಪೇಟೆಗೆ ಪಾದಯಾತ್ರೆ ಆಗಮಿಸಿತ್ತು. ಅದರ ನೆನಪಿಗೆ ಭಾರತ್ ಜೋಡೋ ನೆನಪಿನಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು. …

Read More »