ರಾಮನಗರ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು 2.50 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಚಂದ್ರು ಅವರ ಪುತ್ರಿಯಾದ 14 ವರ್ಷದ ಕುಮಾರಿ ನವ್ಯಶ್ರೀ ಅವರನ್ನು ಗುರುವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಚಿವರು, ಆ ಬಾಲಕಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಹಸ್ತಾಂತರಿಸಿದರು. …
Read More »Yearly Archives: 2026
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಖಾಕಿ ಪಡೆ ಸನ್ನದ್ಧ – 7 ಸಾವಿರ ಪೊಲೀಸರ ನಿಯೋಜನೆಗೆ ಭರ್ಜರಿ ಸಿದ್ಧತೆ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಡಿಸೆಂಬರ್ 2ರಿಂದ 11ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ. ಅಧಿವೇಶನದ ಸಂದರ್ಭದಲ್ಲಿ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಧರಣಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟಗಳು ನಡೆಯುವ ಸಾಧ್ಯತೆ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. …
Read More »KSRTC ಡಿಪೋದಲ್ಲಿ ಮಹಿಳಾ ಮೆಕ್ಯಾನಿಕ್ಗೆ ಸಹೋದ್ಯೋಗಿಯಿಂದ ಚಾಕು ಇರಿತ
ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ KSRTC ಮಹಿಳಾ ಮೆಕ್ಯಾನಿಕ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ನಗರದ ಅರಿಶಿನಕುಂಟೆ ಬಳಿಯಿರುವ KSRTC ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿರುವ 40 ವರ್ಷದ ಲಕ್ಷ್ಮಿ ಎಂಬುವವರ ಮೇಲೆ ಹಲ್ಲೆಯಾಗಿದೆ. ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ಲಕ್ಷ್ಮಿ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ …
Read More »ಮೇಡಂ ಸೆಕ್ಸ್ ಅವೈಲೆಬಲ್ ಇದ್ಯಾ? – ಬೈಕ್ ಟ್ಯಾಕ್ಸಿ ಸವಾರನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ
ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ ಸವಾರನೋರ್ವನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಯುವತಿ ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಹಂಚಿಕೊಂಡು, ಆರೋಪಿಸಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್ನಿಂದ ಯುವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಸವಾರ ಲೋಕೇಷನ್ಗೆ ಬಂದು ಕಾಲ್ ಮಾಡದೇ, ಮೆಸೇಜ್ ಕೂಡ ಮಾಡದೇ ವಾಪಸ್ಸಾಗಿದ್ದಾನೆ. ವಾಪಸ್ಸಾಗಿದ್ದ ವಿಷಯ ತಿಳಿದು ಯುವತಿ ಕಾಲ್ ಮಾಡಿದಾಗ, ಬೈಕ್ ಸವಾರ ಸೆಕ್ಸ್ ಅವೈಲೆಬಲ್ ಇದ್ಯಾ …
Read More »ಬಿಜೆಪಿ ಅವರು ರೀಲ್ಸ್ ರಾಜರು: ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು : ಬಿಜೆಪಿ ಅವರು ರೀಲ್ಸ್ ರಾಜರು ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಮೆಟ್ರೋ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಆ್ಯಕ್ಟೀವ್ ಆಗಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಕ್ಯಾಬಿನೆಟ್ ರೀ ಶಫಲ್ ಇದೆ. ಅವರಿಗೆ ಏನಾದ್ರು ಬರ್ತಿದೆಯಾ ಕೇಳಿ ನೋಡಿ. ಇಂತಹದ್ದಕ್ಕೆ ಅವರು ಆ್ಯಕ್ಟೀವ್ ಇರ್ತಾರೆ. ಜನಸಮಾನ್ಯರಿಗೆ ಇವರ ಕೊಡುಗೆ ಏನು? ಬೆಂಗಳೂರಿಗೆ ಒಂದು ರೂಪಾಯಿ ಆದ್ರೂ ತಂದಿದ್ದಾರಾ? ಇವರು ಅಂತ ಕಿಡಿಕಾರಿದರು. ಟನಲ್ ಮಾಡಬೇಕು …
Read More »ಬೆಳಗಾವಿ ಮಾದರಿಯಲ್ಲಿ 3,600 ರೂ. ದರ ನಿಗದಿಗೆ ಹಾವೇರಿ ಕಬ್ಬು ಬೆಳೆಗಾರರ ಒತ್ತಾಯ – ಇಂದು ಮಹತ್ವದ ಸಭೆ
ಹಾವೇರಿ: ಕಬ್ಬಿಗೆ ಬೆಳಗಾವಿಯಲ್ಲಿ ದರ ನಿಗದಿ ಮಾಡಿದಂತೆ ಟನ್ಗೆ 3,600 ರೂ. ದರ ನೀಡುವಂತೆ ಹಾವೇರಿ ಕಬ್ಬು ಬೆಳೆಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂಬಂಧ ಹಾವೇರಿ ಡಿಸಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ಜಿಎಂ ಶುಗರ್ಸ್ ಹಾಗೂ ವಿಎನ್ಪಿ ಸಕ್ಕರೆ ಕಾರ್ಖಾನೆ ಮಾಲೀಕರು ಟನ್ಗೆ ಕೇವಲ 3000 ರೂ. ಕೊಡುವುದಾಗಿ ಹೇಳಿದ್ದಾರೆ. 3600 ರೂ. ಬೆಲೆ ನೀಡದಿದ್ದರೆ ಜಿಲ್ಲೆಯಲ್ಲಿರೋ …
Read More »ಮಕ್ಕಳಾಗಿಲ್ಲ ಅಂತ ಚೇಡಿಸುತ್ತಿದ್ದ ಗಂಡನನ್ನ ಚುಚ್ಚಿ ಕೊಂದ ಪತ್ನಿ
ಬೆಂಗಳೂರು: ಬೆಳಗ್ಗೆಯೆಲ್ಲಾ ಹೆಂಡ್ತಿಯನ್ನ ಚಿನ್ನ ರನ್ನ ಅಂತಾ ಮುದ್ದಾಡಿ, ರಾತ್ರಿಯಾದ್ರೆ ಸಾಕು ಕುಡಿದು ಬಂದು ಮಕ್ಕಳಾಗಿಲ್ಲವೆಂದು ಹೆಂಡ್ತಿಗೆ ಹೊಡೆದು ಬಡಿದು ಕಿರುಕುಳ ನೀಡ್ತಿದ್ದ. ರೋಸಿಹೋದ ಪತ್ನಿ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರೊ ಸ್ಟೋರಿ ಇದೆ ನೋಡಿ… ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷೀಪುರದಲ್ಲಿ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ರಾಜಶೇಖರ್ (44) ಕೊಲೆಯಾದ ದುರ್ದೈವಿ. ಈತನ ಪತ್ನಿ …
Read More »ದಾಖಲೆ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ – 29.55 ಕೋಟಿ ರೂ. ಆದಾಯ ಸಂಗ್ರಹ
ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಹೊಸ ದಾಖಲೆ ಬರೆದಿದೆ. ಒಟ್ಟು 30,06,000 ಭಕ್ತರು ದೇವಿ ದರ್ಶನ ಪಡೆದಿದ್ದು, ಎಲ್ಲಾ ಮೂಲಗಳಿಂದ ಒಟ್ಟು 29,55,27,852 ರೂ. ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ. 2025ರಲ್ಲಿ 13 ದಿನಗಳಲ್ಲಿ 25 ಲಕ್ಷ 36 ಭಕ್ತರು ದರ್ಶನ ಪಡೆದಿದ್ದು, 1,000, 300 ರೂ. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಹಾಗೂ ಹುಂಡಿ …
Read More »24 ಮೀಟರ್ ಹೈರೈಸ್ ಮಿತಿಗೆ ಅನುಗುಣವಾಗಿ ಮಾಸ್ಟರ್ ಪ್ಲಾನ್ ವಲಯ ನಿಯಮಗಳ ಸಮಗ್ರ ತಿದ್ದುಪಡಿಗೆ ಆಗ್ರಹ
ಬೆಳಗಾವಿ: ಬೆಳಗಾವಿ ನಗರದ ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿ, ಲಭ್ಯವಿರುವ ಭೂಮಿಯ ಸಮರ್ಪಕ ಬಳಕೆ ಹಾಗೂ ವಸತಿ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಬೆಳಗಾವಿ ಮಾಸ್ಟರ್ ಪ್ಲಾನ್-2021ರ (Revision-II) ವಲಯ ನಿಯಮಾವಳಿಗಳಲ್ಲಿ ಸಮಗ್ರ ತಿದ್ದುಪಡಿ ಮಾಡುವಂತೆ CREDAI ಬೆಳಗಾವಿ ಘಟಕ ಮಹತ್ವದ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವು ಹೈರೈಸ್ ಕಟ್ಟಡಗಳ ವ್ಯಾಖ್ಯಾನವನ್ನು 21 ಮೀಟರ್ನಿಂದ 24 ಮೀಟರ್ಗೆ ಹೆಚ್ಚಿಸುವ ಸಂಬಂಧ ಕರಡು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಬೆಳಗಾವಿಯ ಸ್ಥಳೀಯ …
Read More »ಡಿ.1 ಮತ್ತು 2ರಂದು ಬೆಳಗಾವಿಯಲ್ಲಿ ಡಿಎಸ್ಸಿ ನೇಮಕಾತಿ ರ್ಯಾಲಿ
ಬೆಳಗಾವಿ: ಮಾಜಿ ಸೈನಿಕರಿಗೆ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್ಸಿ)ನಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ 2026ರ ಡಿಸೆಂಬರ್ 1 ಮತ್ತು 2ರಂದು ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ. ಭಾರತೀಯ ಸೇನೆಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ಗೆ ಸೇರಿದ ಮಾಜಿ ಸೈನಿಕರು ಹಾಗೂ ಟೆರಿಟೋರಿಯಲ್ ಆರ್ಮಿ (ಟಿಎ) ಸಿಬ್ಬಂದಿಗೆ ಮಾತ್ರ ಈ ನೇಮಕಾತಿಯಲ್ಲಿ ಭಾಗವಹಿಸಲು ಅವಕಾಶವಿದೆ. ಸೋಲ್ಜರ್ ಜನರಲ್ ಡ್ಯೂಟಿ (ಜಿಡಿ) ಮತ್ತು ಸೋಲ್ಜರ್ ಕ್ಲರ್ಕ್ …
Read More »
Laxmi News 24×7